ಸುಸೂತ್ರ ಚುನಾವಣೆಗೆ ಶಿವಮೊಗ್ಗ ಪೊಲೀಸರ ತೆರೆಮೆರೆ ಕೆಲಸ! ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಮೊಹಲ್ಲಾ ಸಭೆ! ಏನಿದು? ವಿವರ ಇಲ್ಲಿದೆ

Shimoga police's behind-the-scenes work for smooth elections! Mohalla meeting in Thirthahalli, Shimoga! What is this? Here's the details

ಸುಸೂತ್ರ ಚುನಾವಣೆಗೆ ಶಿವಮೊಗ್ಗ ಪೊಲೀಸರ ತೆರೆಮೆರೆ ಕೆಲಸ!  ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಮೊಹಲ್ಲಾ ಸಭೆ! ಏನಿದು? ವಿವರ ಇಲ್ಲಿದೆ
ಸುಸೂತ್ರ ಚುನಾವಣೆಗೆ ಶಿವಮೊಗ್ಗ ಪೊಲೀಸರ ತೆರೆಮೆರೆ ಕೆಲಸ! ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಮೊಹಲ್ಲಾ ಸಭೆ! ಏನಿದು? ವಿವರ ಇಲ್ಲಿದೆ

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಪೊಲೀಸರು (shivamogga police) ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯು ಮುಖ್ಯವಾಗಿ ಶಾಂತಿಯುತ ಮತದಾನಕ್ಕೆ ವೇದಿಕೆಯನ್ನು ಸೃಷ್ಟಿಸುವ ಕೆಲಸವನ್ನು ಈಗಿನಿಂದಲೇ ಆರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಉಪವಿಭಾಗದಲ್ಲಿ ಹಾಗೂ ಶಿವಮೊಗ್ಗ ಕೋಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮೊಹಲ್ಲಾ ಕಮಿಟಿ ಸಭೆಯನ್ನು ನಡೆಸಲಾಗಿದೆ. 

BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

 ಪೊಲೀಸ್ ಉಪ ಅಧೀಕ್ಷಕ ಗಜಾನನ ವಾಮನ ಸುತರ ನೇತೃತ್ವದಲ್ಲಿ ತೀರ್ಥಹಳ್ಳಿಯ ಸೀಬಿನಕೆರೆ (sibinakere)ಗ್ರಾಮದಲ್ಲಿ ಹಾಗೂ  ಕೋಟೆ ಪೊಲೀಸ್ ಠಾಣೆ ಸಿಪಿಐ  ಶಿವಪ್ರಸಾದ್​ ಶಿವಮೊಗ್ಗ ನಗರದ ಟ್ಯಾಂಕ್ ಮೋಹಲ್ಲಾದಲ್ಲಿ (tank mohalla) ಮೊಹಲ್ಲಾ ಕಮಿಟಿ ಸದಸ್ಯರ ಸಭೆ ನಡೆಸಿ ಮುಖ್ಯವಾದ ಸೂಚನೆ ನೀಡಿದ್ಧಾರೆ.  

  • 1) ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ  ಚುನಾವಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ.
  • 2) ಗ್ರಾಮದಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗಳು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅಂತಹವರ ಮಾಹಿತಿಯನ್ನು ಕೂಡಲೇ ಪೊಲೀಸ್ ಠಾಣೆಗೆ ತಿಳಿಸಿ.
  • 3) ಯಾವುದೇ ರೀತಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 112 ERSS ಸಹಾಯವಾಣಿಗೆ ಕರೆ ಮಾಡಿ  ನೆರವು  ಪಡೆಯಿರಿ.
  • 4) ರಸ್ತೆ ಸುರಕ್ಷತೆ ಮತ್ತು ಸಂಸಾರ ನಿಯಮಗಳ ಬಗ್ಗೆ ತಿಳಿಸಿ, ತಮ್ಮ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡಿಯಾಗಿ ನಿಲ್ಲಿಸದೆ ಕ್ರಮಬದ್ಧವಾಗಿ ಪಾರ್ಕಿಂಗ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ.
  • 5) ಗ್ರಾಮದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಲ್ಲಿ  ಕೂಡಲೆ ಹತ್ತಿರದ ಪೊಲೀಸ್ ಠಾಣೆಗೆ  ಮತ್ತು ತಮ್ಮ ಬೀಟ್  ಸಿಬ್ಬಂದಿಯವರಿಗೆ  ಮಾಹಿತಿ ನೀಡಿ.
  • 6)ಸಾರ್ವಜನಿಕರ ಕುಂದುಕೊರತೆಗಳಿಗೆ  ತ್ವರಿತಗತಿಯಲ್ಲಿ   ಸ್ಪಂದಿಸಲು  ಪೊಲೀಸ್ ಇಲಾಖೆ ವತಿಯಿಂದ  ಎಲ್ಲಾ ಬೀಟ್ ಗಳಲ್ಲಿ ಬೀಟ್ ಸಮಿತಿ ಸದಸ್ಯರ  ವಾಟ್ಸಪ್ ಗ್ರೂಪ್ ಗಳನ್ನು  ರಚಿಸಲಾಗಿದ್ದು, ಸದರಿ ಗ್ರೂಪ್ ನಲ್ಲಿ   ಯಾವುದೇ ರೀತಿಯ ಮಾಹಿತಿಯನ್ನು ನೀಡಬಹುದಾಗಿರುತ್ತದೆ.

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com