ಅನ್ಯ ಕೋಮಿನ ಯುವತಿಯನ್ನ, ಬೈಕ್​ನಲ್ಲಿ ಮನೆಗೆ ಬಿಟ್ಟಿದ್ದಕ್ಕೆ ಯುವಕರ ಗುಂಪಿನಿಂದ ಹಲ್ಲೆ

Youth attacked by a group of youths for dropping a girl from another community to her house on a bike

ಅನ್ಯ ಕೋಮಿನ ಯುವತಿಯನ್ನ, ಬೈಕ್​ನಲ್ಲಿ ಮನೆಗೆ ಬಿಟ್ಟಿದ್ದಕ್ಕೆ ಯುವಕರ ಗುಂಪಿನಿಂದ ಹಲ್ಲೆ

KARNATAKA NEWS/ ONLINE / Malenadu today/ May 28, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಭದ್ರಾವತಿ  ತಾಲ್ಲೂಕಿನಲ್ಲಿ ಅನ್ಯಕೋಮಿನ ಯುವತಿಯನ್ನ ಬೈಕ್​ನಲ್ಲಿ ಅವರ ಮನೆಗೆ ಡ್ರಾಪ್​ ಮಾಡಿದ್ದಕ್ಕೆ ಇನ್ನೊಂದು ಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. 2 ದಿನದ ಹಿಂದೆ ನಡೆದ ಘಟನೆ ಸಂಬಂಧ ಎಫ್ಐಆರ್ ಆಗಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಭದ್ರಾವತಿಯ ಮೆಡಿಕಲ್​ ಕಾಲೇಜೊಂದರ ವಿದ್ಯಾರ್ಥಿಯ ಮೇಲೆ ಹಲ್ಲೆಯಾಗಿದ್ದು, ಆತನ ಸ್ನೇಹಿತರ ಮೇಲೂ ಯುವಕರು ಹಲ್ಲೆ ಮಾಡಿದ್ದಾರೆ.  26 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಇಲ್ಲಿನ ಬಡಾವಣೆಯೊಂದರಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಯು ಮನವಿ ಮಾಡಿದ್ದರಿಂದ ಯುವಕ ಆಕೆಯನ್ನ ಅವರ ಮನೆಗೆ ಡ್ರಾಪ್ ಮಾಡಿದ್ದಾನೆ. ಯುವತಿಯ ಸಹೋದರಿಯೊಬ್ಬರು ಆಕಸ್ಮಿಕವಾಗಿ ಗಾಯಮಾಡಿಕೊಂಡಿದ್ದರಿಂದ ಅವರನ್ನ ನೋಡಲು ಯುವತಿ ಮನೆಗೆ ಹೋಗಲು ಸಹಾಯ ಕೇಳಿದ್ದಾಳೆ. ಯುವಕ ಕೂಡ ಆಕೆಯನ್ನು ಬಿಟ್ಟು ಅಲ್ಲಿಂದ ವಾಪಸ್ ಬರುತ್ತಿದ್ದ. ಈ ವೇಳೆ ರಸ್ತೆಯಲ್ಲಿ ಅಡ್ಡಗಟ್ಟಿದ ಯುವಕರ ಗುಂಪು, ನಮ್ಮ ಕೋಮಿನ ಯುವತಿಯನ್ನು ಯಾಕೆ ಬೈಕ್​ನಲ್ಲಿ ಕೂರಿಸಿಕೊಂಡು ಹೋಗಿದ್ದೆ ಎಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಭದ್ರಾವತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಹಿಂದಿನಿಂದ ಬಂದು ಡಿಕ್ಕಿ ಹೊಡೆಯುತ್ತಾರೆ ಹುಷಾರ್! ಭದ್ರಾವತಿ ರಸ್ತೆಯಲ್ಲಿ ಸ್ವಲ್ಪದರಲ್ಲಿಯೇ ಉಳಿತು ಜೀವ! ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ!

ಭದ್ರಾವತಿ/ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಪೀಡಾಗಿ ಮುಂದಕ್ಕೆ ಹೋದ ಘಟನೆಯೊಂದರ ವಿಡಿಯೋ ಇದೀಗ ಹೊರಬಿದ್ದಿದೆ. ಮಾಧ್ಯಮವೊಂದಕ್ಕೆ ಲಭ್ಯವಾದ ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯ ಭದ್ರಾವತಿಯದ್ದು ಎಂದು ಹೇಳಲಾಗಿದೆ. 

ಇಷ್ಟಕ್ಕೂ ನಡೆದಿದ್ದೇನು? 

ಬೈಕ್​ನಲ್ಲಿ ಇಬ್ಬರು ಸವಾರರು ಹೋಗುತ್ತಿರುತ್ತದೆ. ಅವರ ಎಡಭಾಗದಲ್ಲಿ ಒಂದು ಒಮಿನಿ ಹೋಗುತ್ತಿರುತ್ತದೆ. ಇನ್ನೊಂದು ಭಾಗದಲ್ಲಿ ಕಾರೊಂದು ಓವರ್​ ಟೇಕ್ ಮಾಡಲು ಟ್ರೈ ಮಾಡುತ್ತಾನೆ. ಈ ವೇಳೆ ಬೈಕ್​ಗೆ ಡಿಕ್ಕಿ ಹೊಡೆದ ಕಾರು, ಅಲ್ಲಿಂದ ಎಸ್ಕೇಪ್ ಆಗುತ್ತದೆ. ಈ ಘಟನೆ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್​ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. 

 ಕೃಷ್ಣ ಮೂರ್ತಿ ಮತ್ತು ಸಂತೋಷ್‌ ಎಂಬವರು,  ಶಿವಮೊಗ್ಗದಿಂದ ತರೀಕೆರೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಭದ್ರಾವತಿ ಬೈಪಾಸ್‌ ರಸ್ತೆಯ ಸಿದ್ಧಾಪುರದ ಬಳಿ ಈ ಘಟನೆ ಸಂಭವಿಸಿದೆ.ಘಟನೆಯಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಬೆನ್ನಲ್ಲೆ ಐ10 ಕಾರು ಅಲ್ಲಿಂದ ಓವರ್ ಸ್ಪೀಡನಲ್ಲಿ ತೆರಳಿದೆ.  

ಹಿಟ್‌ ಅಂಡ್‌ ರನ್‌ ಅಪಘಾತದ  ದೃಶ್ಯ ಬೈಕ್‌ ಹಿಂಬದಿಯಲ್ಲಿ ಬರುತ್ತಿದ್ದ ಮೈಸೂರು ಮೂಲದ ದೀಪಕ್​ ಎಂಬವರ ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ (dash cam) ಸೆರೆಯಾಗಿದೆ