ಸುಂದರ ಆಶ್ರಯದಲ್ಲಿ ಡ್ರಿಂಕ್ಸ್​ ಮಾಡ್ಕೊಂಡು ಮನೆಗೆ ಹೋಗುವಾಗ 25-30 ಮಂದಿಯಿಂದ ಹಲ್ಲೆ! ಫೋಟೋಗ್ರಾಫರ್ ವಿರುದ್ಧವೂ ಕೇಸ್!

The two were attacked near Gowda Saraswat Kalyana Mandir near Sundara Ashraya in Shivamogga, Shivamogga Doddapete Police Station, Shivamogga Live,

ಸುಂದರ ಆಶ್ರಯದಲ್ಲಿ ಡ್ರಿಂಕ್ಸ್​ ಮಾಡ್ಕೊಂಡು ಮನೆಗೆ ಹೋಗುವಾಗ 25-30 ಮಂದಿಯಿಂದ ಹಲ್ಲೆ! ಫೋಟೋಗ್ರಾಫರ್ ವಿರುದ್ಧವೂ ಕೇಸ್!

KARNATAKA NEWS / ONLINE / Malenadu today/ Nov 20, 2023 SHIVAMOGGA NEWS

Shivamogga |  Malnenadutoday.com |  ಕುಡಿದು ಊಟ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದವರ ಮೇಲೆ ಗುಂಪು ಹಲ್ಲೆ ನಡೆಸಿದ ಸಂಬಂಧ ಒಬ್ಬ ಫೋಟೋಗ್ರಾಫರ್ ಹಾಗೂ ಮದುವೆಗೆ ಬಂದಿದ್ದ 25-30 ಮಂದಿ ವಿರುದ್ಧ ಕೇಸ್ ದಾಖಲಾಗಿರುವ ಘಟನೆ Doddapete Police Station ವ್ಯಾಪ್ತಿಯಲ್ಲಿ ನಡೆದಿದೆ

ಏನಿದು ಪ್ರಕರಣ? 

ಕಳೆದ 18 ನೇ ತಾರೀಖು ನಡೆದ ಘಟನೆಯಿದು. ಇದೆಲ್ಲಾ ಆರಂಭವಾಗುವುದು ಸುಂದರ ಆಶ್ರಯ ದಿಂದ. 18 ರ ಸಂಜೆ ದೂರುದಾರರು ಹಾಗೂ ಅವರ ಸ್ನೇಹಿತರು, ಸುಂದರ ಆಶ್ರಯದ ಬಾರ್ & ರೆಸ್ಟೋರೆಂಟ್​​ನಲ್ಲಿ ಕುಡಿಯುತ್ತಾರೆ. ಬಳಿಕ ಊಟ ಮುಗಿಸಿ ಮನೆಗೆ ಹೊರಡುತ್ತಾರೆ. ಇಷ್ಟೊತ್ತಿಗೆ ಸಮಯ ಸುಮಾರು 11.30 ರಾಗಿರುತ್ತದೆ. 

READ : ಅಂಗಿಯ ತೋಳು ಕತ್ತರಿಸಿದರೇ ಮನೆಗೆ ಹೋಗುವುದು ಹೇಗೆ!? ಹಳ್ಳಿ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿತಾ KEA ಪರೀಕ್ಷೆ ರೂಲ್ಸ್​

ಗೌಡಸ್ವಾರಸ್ವತ ಕಲ್ಯಾಣ ಮಂದಿರ ದ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಲ್ಯಾಣ ಮಂದಿರದ ಎದುರು ಮಾರುತಿ 800  ವಾಹನವನ್ನು ನಿಲ್ಲಿಸಲಾಗಿತ್ತಂತೆ. ರಸ್ತೆ ಮೇಲೆ ನಿಲ್ಲಿಸಿದರೇ ಹೋಗೋರು ಬರೋರು ಹೇಗೆ ಓಡಾಡಬೇಕು ಎಂದು ಪ್ರಶ್ನಿಸಿದ್ದಾರೆ. 

ಈ ವಿಚಾರದಲ್ಲಿ ಸ್ಥಳದಲ್ಲಿ ಗಲಾಟೆಯಾಗಿದೆ. ಗಲಾಟೆ ಸಂದರ್ಭದಲ್ಲಿ ಫೋಟೋಗ್ರಾಫರ್ ಹಾಗೂ ಮದುವೆಗೆ ಬಂದಿದ್ದ 25-30 ಜನರು ದೂರುದಾರರು ಹಾಗೂ ಅವರ ಜೊತೆಗಿದ್ದ ಹೊಸಮನೆ ನಿವಾಸಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

READ : ಬಾನುಮತಿ ಬಾಲ ಕಡಿದವರು ಯಾರು!? ಅಮಾಯಕರಿಗೆ ಶಿಕ್ಷೆ ಆಗ್ತಿದ್ಯಾ? ಸಕ್ರೆಬೈಲ್ ಬಿಡಾರದ ಅಂದರ್ ಕೀ ಬಾತ್!

ಸದ್ಯ ಪ್ರಕರಣ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು : IPC 1860 (U/s-504, 143, 147, 149,323,324) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಸ್ತಿದ್ದಾರೆ