ಬೇಕೇ ಬೇಕು ಎಣ್ಣೆ ಅಂಗಡಿ ಬೇಕು!-ಬೇಡವೇ ಬೇಡ ಲಿಕ್ಕರ್ ಶಾಪ್ ಬೇಡ ! ಏನಿದು ಡಬ್ಬಲ್​ ರೋಡ್​​ನಲ್ಲಿ ಡಬ್ಬಲ್ ಪ್ರತಿಭಟನೆ

Protests were held at Gopala in Shivamogga city over the issue of a liquor shop.

ಬೇಕೇ ಬೇಕು ಎಣ್ಣೆ ಅಂಗಡಿ ಬೇಕು!-ಬೇಡವೇ ಬೇಡ ಲಿಕ್ಕರ್ ಶಾಪ್ ಬೇಡ ! ಏನಿದು  ಡಬ್ಬಲ್​ ರೋಡ್​​ನಲ್ಲಿ ಡಬ್ಬಲ್ ಪ್ರತಿಭಟನೆ

KARNATAKA NEWS/ ONLINE / Malenadu today/ Jul 13, 2023 SHIVAMOGGA NEWS

ಶಿವಮೊಗ್ಗ ನಗರದ ಗೋಪಾಳದಲ್ಲಿ ಇವತ್ತು ಎರಡು ಪ್ರತಿಭಟನೆಗಳು ನಡೆದವು. ಒಂದು ಕಡೆ ಇವತ್ತಷ್ಟೆ ಓಪನ್ ಆಗಿರುವ ಎಣ್ಣೆ ಅಂಗಡಿಯನ್ನು ಮುಚ್ಚಬೇಕು ಎಂದು ಪ್ರತಿಭಟನೆ ನಡೆಯಿತು. ಇನ್ನೊಂದು ಕಡೆ , ಇರಲಿ ಬಿಡ್ರಿ, ಸುತ್ತಮುತ್ತ ಎಣ್ಣೆ ಅಂಗಡಿಯಿಲ್ಲ. ಇಲ್ಲೊಂದು ಎಣ್ಣೆ ಅಂಗಡಿ ಬೇಕು ಅಂತಾ ಇನ್ನೊಂದು ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಗಳ ಹಿನ್ನೆಲೆ ಮಾತ್ರ ಮುಖ್ಯರಸ್ತೆಯಲ್ಲಿಯೇ ಡ್ರಿಂಕ್ಸ್ ಔಟ್​ಲೆಟ್​ ಓಪನ್​ ಆಗಿರೋದು ಆಗಿತ್ತು. 

ವಾದ-ಪ್ರತಿವಾದವೇನು? 

ಗೋಪಾಲಗೌಡ ಬಡಾವಣೆ ಯ ನೂರಡಿ ರಸ್ತೆಯಲ್ಲಿ  ಮದ್ಯದಂಗಡಿಯ ಪರವಾಗಿ ಕೆಲ  ಮಹಿಳೆಯರು ಸೇರಿದಂತೆ ಹಲವರು ಈ ಭಾಗಕ್ಕೆ ಮದ್ಯದಂಗಡಿ ಬೇಕು ಎಂದು ಪ್ರತಿಭಟಿಸಿದರು. ಇಲ್ಲಿಂದ ಎಣ್ಣೆ ಅಂಗಡಿಯನ್ನ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿದ್ರು. 

ಇನ್ನೊಂದೆಡೆ  ಕಟ್ಟಡ ಪರವಾನಿಗೆಯನ್ನೂ ಪಡೆಯದೆ ಅಕ್ರಮವಾಗಿ ದಿಢೀರ್ ಕಟ್ಟಡ ನಿರ್ಮಿಸಿ ನೂತನವಾಗಿ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಲಾಗಿದೆ. ಈ ಸ್ಥಳದ ಪಕ್ಕದಲ್ಲಿಯೇ ಶಾಲೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ ಹತ್ತಿರದಲ್ಲಿಯೇ ಶಾಲೆಗಳಿವೆ. ಹಾಗಾಗಿ ಮದ್ಯದಂಗಡಿ ತೆರವಿಗೆ ಅವಕಾಶ ನೀಡಬಾರದು ಎಂದುಇ ಸಹ ಪ್ರತಿಭಟನೆ ನಡೆದಿದೆ.

ಈ  ಎರಡು ಪ್ರತಿಭಟನೆಗಳಿಗೆ ಅವಕಾಶ ಕೊಟ್ಟ ಪೊಲೀಸರು ಧರಣಿ ಮುಗಿದ ಬಳಿಕ,  ಪ್ರತಿಭಟನಾಕಾರರನ್ನು ತೆರಳುವಂತೆ ಸೂಚಿಸಿದ್ಧಾರೆ. 


ಭದ್ರಾವತಿಯಲ್ಲಿ ಯುವ ಜೋಡಿಯ ಆತ್ಮಹತ್ಯೆ! ನೇಣಿಗೆ ಶರಣಾಗಿದ ದಂಪತಿ ! ಕಾರಣ?

ಭದ್ರಾವತಿ , ತಾಲ್ಲೂಕಿನ ಜನ್ನಾಪುರದಲ್ಲಿ ಸಾಲಭಾದೆ ತಾಳಲಾರದೇ ಗಂಡ-ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. 27 ವರ್ಷದ  ಮಧು 21 ವರ್ಷದ ಮೋನಿಕಾ ಮೃತರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ. ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ದಂಪತಿ ಸಾಲ ಮಾಡಿಕೊಂಡಿದ್ದು, ಸಾಲ  ತೀರಿಸಲಾಗದೇ ಒದ್ದಾಡುತ್ತಿದ್ದರು. ಇದೇ ಕಾರಣಕ್ಕೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಸರಿಯಾದ ದುಡಿಮೆಯು ಇಲ್ಲದೆ,  ಯಾವೊಬ್ಬರ ಸಹಾಯವೂ ಸಿಗದೇ ಮಾಡಿದ ಸಾಲ ತೀರಿಸಲಾಗದೇ ಗಂಡ ಹೆಂಡತಿ ಪರದಾಡಿದ್ದರು ಎಂದು ಹೇಳಲಾಗುತ್ತಿದೆ. ಇನ್ನೂ ಅಕ್ಕಪಕ್ಕದ ಮನೆಯವರು, ದಂಪತಿಯ ಮನೆ ಬಾಗಿಲು ತಟ್ಟಿದರೂ ತೆಗೆಯದಿದ್ದನ್ನೂ ನೋಡಿ ವಿಚಾರಿಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.  ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 


ಶಿವಮೊಗ್ಗ ವಿಮಾನ ನಿಲ್ದಾಣ ದಲ್ಲಿ ಉದ್ಯೋಗವಕಾಶ! ಆಗಸ್ಟ್ 11 ಕ್ಕೆ ವಿಮಾನ ಹಾರಾಟ! ಸಚಿವ ಎಂ. ಬಿ.ಪಾಟೀಲ್​ ಮಹತ್ವದ ಹೇಳಿಕೆ

ಶಿವಮೊಗ್ಗ ವಿಮಾನ ನಿಲ್ದಾಣ ಜುಲೈ 20ರ ವೇಳೆಗೆ ಎಲ್ಲಾರೀತಿಯಲ್ಲಿ ಸಜ್ಜುಗೊಳಿಸಲಾಗುವುದು ಹಾಗೂ, ಆ.11ರಿಂದ ವಿಮಾನ ಹಾರಾಟ ಆರಂಭವಾಗು ಸಾಧ್ಯತೆ ಇದೆ ಅಂತಾ  ಸಚಿವ ಎಂ ಬಿ ಪಾಟೀಲ್ ತಿಳಿಸಿದ್ಧಾರೆ. ಬೆಂಗಳೂರಿನಲ್ಲಿ ಮಾತನಾಡಿರುವ  ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್​  ರಾಜ್ಯದ ಹೊಸ ವಿಮಾನ ನಿಲ್ದಾಣಗಳ ಕಾಮಗಾರಿ ಪ್ರಗತಿ ಮತ್ತಿತರ ವಿಷಯಗಳ ಬಗ್ಗೆ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ,  ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಂಬುಲೆನ್ಸ್ ಮತ್ತು ಇತರೆ ಅಗತ್ಯ ವಾಹನಗಳನ್ನು ನಿಯೋಜಿಸುವ ಕೆಲಸ ಆಗಬೇಕಾಗಿದೆ ಎಂದರು . ಕಾಫಿ ಕೆಫೆ ಆರಂಭಿಸುವ ಸಂಬಂಧದ ಕೆಲಸವೂ ಆಗಬೇಕಿದೆ. ಜೊತೆಗೆ, ಕೆಲವು ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ನೇಮಕ ನಡೆಯಬೇಕಿದೆ. ಇವೆಲ್ಲವನ್ನೂ ಜುಲೈ 20ರ ಹೊತ್ತಿಗೆ ಪೂರೈಸಿ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗುವುದು ಎಂದು ವಿವರಿಸಿದರು. ಕೇಂದ್ರ ನಾಗರಿಕ ವಿಮಾನ ನಿರ್ದೇಶನಾಲಯವು (Central Directorate General of Civil Aviation) ಇಲ್ಲಿನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್ಐಐಡಿಸಿ) ವಹಿಸಿದೆ. ಇದರೊಂದಿಗೆ ಶಿವಮೊಗ್ಗ ನಿಲ್ದಾಣವು ರಾಜ್ಯ ಸರ್ಕಾರದ ಸಂಸ್ಥೆಯ ವತಿಯಿಂದ ನಡೆಯಲಿರುವ ಕರ್ನಾಟಕದ ಮೊದಲನೇ ವಿಮಾನ ನಿಲ್ದಾಣವಾಗಲಿದೆ ಎಂದು ಪಾಟೀಲ್​ ಹೇಳಿದರು.ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ 20 ವಿಮಾನಗಳು ಬಂದಿಳಿದಿವೆ. ಇದರಿಂದಾಗಿ 12 ಲಕ್ಷ ರೂ. ಆದಾಯ ಬಂದಿದೆ ಎಂದು ಇದೇ ವೇಳೆ ತಿಳಿಸಿದರು . ಆ.11ರಂದು ನಿಲ್ದಾಣ ಕಾರ್ಯಾರಂಭಗೊಳಲಿದ್ದು, ಅಂದು ಮೊದಲ ವಿಮಾನ‌ ಹಾರಾಟ ನಡೆಸಲಿದೆ. ಈ ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಗಲು ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಯೋಜನೆಯಂತೆ ನಡೆದರೆ ಆ.11ರಂದು ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗ ನಿಲ್ದಾಣದಲ್ಲಿ ಇಳಿಯಲಿದೆ ಎಂದರು.