ಶಿವಮೊಗ್ಗ ನಗರದಲ್ಲಿ ಸಿಟ್ ಬಸ್​ಗಳು ಎಲ್ಲೆಲ್ಲಿ ಸ್ಟಾಪ್​ ನೀಡಬೇಕು!? ಜಿಲ್ಲಾಡಳಿತದಿಂದ ಮಹತ್ವದ ಅಧಿಸೂಚನೆ! ಬಸ್​ ಸ್ಟಾಪ್​ಗಳ ವಿವರ ಇಲ್ಲಿದೆ ನೋಡಿ

Here is the notification issued by the district administration regarding city bus stands in shivamogga city east and west traffic police station limits.

ಶಿವಮೊಗ್ಗ ನಗರದಲ್ಲಿ ಸಿಟ್ ಬಸ್​ಗಳು ಎಲ್ಲೆಲ್ಲಿ ಸ್ಟಾಪ್​ ನೀಡಬೇಕು!? ಜಿಲ್ಲಾಡಳಿತದಿಂದ ಮಹತ್ವದ ಅಧಿಸೂಚನೆ! ಬಸ್​ ಸ್ಟಾಪ್​ಗಳ ವಿವರ ಇಲ್ಲಿದೆ ನೋಡಿ

ಶಿವಮೊಗ್ಗ ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಮುಖ್ಯವಾಗಿ ಇನ್ನು ಮುಂದೆ ಎಲ್ಲಂದರಲ್ಲಿ ಸಿಟಿ ಬಸ್​ಗಳನ್ನು ನಿಲ್ಲಿಸುವ ಹಾಗಿಲ್ಲ. ಜಿಲ್ಲಾಡಳಿತ ಸಿಟಿ ವ್ಯಾಪ್ತಿಯಲ್ಲಿ ನಿಗದಿತ ಬಸ್​ಸ್ಟಾಪ್​ಗಳನ್ನು ಗುರುತಿಸಿ ಈ ಸಂಬಂಧ ಅಧಿಸೂಚನೆ  ಹೊರಡಿಸಿದೆ.

ವಿಷಯ ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಟಿ ಬಸ್‌ ನಿಲುಗಡೆಗೆ ಸಂಬಂಧಿಸಿದಂತೆ ಸಿಟಿ ಬಸ್ ಸ್ಟ್ಯಾಂಡ್ ಗಳ ಕುರಿತು ಜಿಲ್ಲಾಡಳಿತ ಹೊರಡಿಸಿರುವ ಅಧಿಸೂಚನೆ ವಿವರ ಇಲ್ಲಿದೆ ನೋಡಿದೆ. 

ಇದನ್ನು ಸಹ ಓದಿ: ಮಲೆನಾಡಿಗರಿಗೆ ಆರಗ ಜ್ಞಾನೇಂದ್ರರವರು ವಿಶ್ವಾಸ ದ್ರೋಹ ಮಾಡಿದ್ದಾರೆ

ಶಿವಮೊಗ್ಗ ನಗರದ ಸಂಚಾರ ವೃತ್ತದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್‌ ಠಾಣಾ ವ್ಯಾಪಿಯಲ್ಲಿ ಪ್ರತಿ ದಿನ ಒಟ್ಟು 61 ಸಿಟಿ ಬಸ್‌ಗಳು ಸಂಚರಿಸುತ್ತಿರುತ್ತವೆ, ಸದರಿ ಎಲ್ಲಾ ಸಿಟಿ ಬಸ್‌ನ ಚಾಲಕರುಗಳು ಜಿಲ್ಲಾಡಳಿತದಿಂದ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ಬಸ್ ನಿಲ್ದಾಣಗಳಲ್ಲಿ ಬಸ್‌ಗಳನ್ನು ನಿಲ್ಲಿಸದೇ ಪ್ರಯಾಣಿಕರು ಕೈ ತೋರಿಸಿದ ಕಡೆಗಳಲ್ಲೆಲ್ಲ ರಸ್ತೆ ಮಧ್ಯದಲ್ಲೇ ಬಸ್‌ಗಳನ್ನು ನಿಲುಗಡೆ ಮಾಡುತ್ತಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾರೆ

BREAKING NEWS/ ನಸುಕಿನಲ್ಲಿ ತೀರ್ಥಹಳ್ಳಿ ಪೇಟೆಗೆ ಬಂದ ಕಾಡಾನೆ

ಈ ರೀತಿ ವರ್ತನೆಯಿಂದ ಅವರ ಹಿಂದೆ ಬರುವ ವಾಹನಗಳು ಮುಂದೆ ಅಥವಾ ಹಿಂದೆ ಹೋಗಲು ಆಗದೇ ಅವರು ಅಲ್ಲಿಂದ ಹೊರಡುವವರೆಗೂ ಕಾಯುವ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ ಇದರಿಂದಾಗಿ ಸಾರ್ವಜನಿಕರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ನಗರ ಸಂಚಾರ ಠಾಣೆಯ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಕಂಟ್ರೋಲ್ ರೂಮಿಗೆ ಸಾಕಷ್ಟು ದೂರುಗಳು ಬರುತ್ತಿದೆ.

ಸದರಿ ವಿಚಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಗರ ಸಂಚಾರ ಠಾಣೆಯ ಅಧಿಕಾರಿಗಳಿಗೆ ಮಾರ್ಗೋಪಾಯಗಳನ್ನು ಸೂಚಿಸಿರುತ್ತೇನೆ.ಅದರಂತೆ ನಗರದಲ್ಲಿ ಓಡಾಡುವ ಸಿಟಿ ಬಸ್ಸುಗಳಿಗೆ ಮುಂದಿನ ಸ್ಥಳಗಳಲ್ಲಿ ನಿಲುಗಡೆ ಮಾಡಿದ್ದಲ್ಲಿ ಸಾರ್ವಜನಿಕ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಉಲ್ಲೇಖಿತ ಪತ್ರದಲ್ಲಿ ತಿಳಿಸುತ್ತಾ ಸುಗಮ ಸಂಚಾರಕ್ಕೆ ಆದೇಶವನ್ನು ಹೊರಡಿಸುವಂತೆ ಕೋರಿರುತ್ತಾರೆ.

ಮಲೆನಾಡು ಟುಡೆ. ಕಾಂ  INSTAGRAM ಪೇಜ್​ ಫಾಲೋ ಮಾಡಿ :  malenadutoday

ಸಲ್ಲಿಕೆಯಾದ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಡಾ.ಸೆಲ್ವಮಣಿ. ಆರ್, ಭಾ.ಆ.ಸೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ ಆದ ನಾನು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮೋಟಾರು ವಾಹನ ಕಾಯ್ದೆ 1988 ಕಲಂ 177 ರನ್ವಯ ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಟಿ ಬಸ್‌ ನಿಲುಗಡೆ ಸಂಬಂಧಿಸಿದಂತೆ ಸಿಟಿ ಬಸ್ ಸ್ಟ್ಯಾಂಡ್ ಗಳ ಸಂಬಂಧ ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.

ಎಲ್ಲೆಲ್ಲಿ ಸ್ಟಾಪ್​ ಇದೆ 

ಬಿಎಚ್​ ರೋಡ್​ : ಶಿವಪ್ಪನಾಯಕ ವೃತ್ತ,ಸರ್ಕಾರಿ ಮೈನ್ ಮಿಡ್ಡ ಸ್ಕೂಲ್​ ಎದುರು, ಕರ್ನಾಟಕ ಸಂಘ ಬಸ್​ಸ್ಟಾಪ್,ಡಿಡಿಪಿಐ ಕಛೇರಿ ದ್ವಾರದ ಬಳಿ,ಕೃಷ್ಣ ಕೆಫೆ ಹೋಟೆಲ್ ಎದುರು,ಮೀನಾಕ್ಷಿಭವನ, ಕರ್ನಾಟಕ ಪಬ್ಲಿಕ್ ಶಾಲೆ ಎದುರು ತುಂಗಾ ಹೊಳೆ ಬಸ್​ಸ್ಟಾಪ್​, ಹೊಳೆಹೊನ್ನೂರುಕ್ರಾಸ್ ಎನ್‌ಸಿಸಿ ಆಫೀಸ್ ಹತ್ತಿರ, ಮಹಾದೇವಿ ಟಾಕೀಸ್, ವಿದ್ಯಾನಗರ ಗಣೇಶ್ ಭವನ,ಗಣಪತಿ ದೇವಸ್ಥಾನ ಎಡಭಾಗ, ವಿದ್ಯಾನಗರ, ಗಣಪತಿ ದೇವಸ್ಥಾನ ಬಲಭಾಗ ವಿದ್ಯಾನಗರ,ಸಹ್ಯಾದ್ರಿಕಾಲೇಜ್ ಹತ್ತಿರ ವಿದ್ಯಾನಗರ ,ದೂರದರ್ಶನ ಕೇಂದ್ರದ ಬಳಿ, ಎಂಆರ್‌ಎಸ್ ಸರ್ಕಲ್‌ಎಡಭಾಗ, ಎಂಆರ್‌ಎಸ್ ಸರ್ಕಲ್‌ ಬಲಭಾಗ,ಹರಿಗೆ ,ಹಾಥಿನಗರಕ್ರಾಸ್.ಹಾಥಿನಗರಕ್ರಾಸ್,ಶುಗರ್‌ಪ್ಯಾಕ್ಟರಿ, ಮಲವಗೊಪ್ಪ, ದೇವಸ್ಥಾನದ ಹತ್ತಿರ,ಕಾಡಾ ಆಫೀಸ್‌ ಎದುರು,ಚನ್ನಬಸವೇಶ್ವರ ದೇವಸ್ಥಾನದ ಎದುರು, ಕಾಡಾ ಆಫೀಸ್ ಹತ್ತಿರ.

ಹೊಳೆಹೊನ್ನೂರು ರಸ್ತೆ : ಸಿದ್ದೇಶ್ವರ ನಗರ 9ನೇ ಕ್ರಾಸ್,ಕೆನರಾ ಬ್ಯಾಂಕ್‌ಎದುರು,ಗುರುಪುರ, ಸುಬ್ಬಯ್ಯ ಮೆಡಿಕಲ್‌ಕಾಲೇಜ್‌, ಪುರಲೆ

ಎನ್​ಆರ್​ಪುರ ರಸ್ತೆ: ಜ್ಯೋತಿ ನಗರ,ವಡ್ಡಿನಕೊಪ್ಪ,ಮುಖ್ಯ ಅಂಚೆ ಕಛೇರಿ ಎದುರು, ತಾನಿಷ್ಕ ಜ್ಯೂಯಲರ್ಸ್ ಎದುರು,ತಾಲ್ಲೂಕು ಕಛೇರಿ ಎದುರು

ಬಾಲರಾಜ ಅರಸ್ ರಸ್ತೆ:   ಕೆಇಬಿ ಸರ್ಕಲ್, ಮುಖ್ಯ ರೈಲ್ವೆ ನಿಲ್ದಾಣ

ಹೊನ್ನಾಳಿ ರಸ್ತೆ : ಸಂಗೊಳ್ಳಿ ರಾಯಣ್ಣ ಸರ್ಕಲ್, ಶೃತಿ ಶೋ ರೂಂ ಎದುರು ಹೊನ್ನಾಳಿ ರಸ್ತೆ (ಶಾಂತಿ ನಗರ), ಶ್ರೀ ನಾಗಪ್ಪ ಸರ್ಕಲ್ ಶಾಂತಿನಗರ, ಪೇಸ್ ಕಾಲೇಜ್ ಎದುರು, ತ್ಯಾವರೆ ಚಟ್ನಳ್ಳಿ

ಸವಳಂಗ ರಸ್ತೆ: ಈದ್ಗಾ ಮೈದಾನದ ಎದುರು (ಡಿಸಿ ಕಚೇರಿ ಮುಂಭಾಗ), ಜಯನಗರ ಠಾಣೆ ಬಳಿ, ವಂದನಾ ಬೇಕರಿ ಬಳಿ, ಉಷಾ ನರ್ಸಿಂಗ್ ಹೋಂ ಬಳಿ, ಎಲ್.ಬಿ.ಎಸ್ ನಗರ 2ನೇ ಕ್ರಾಸ್, ನವುಲೆ, ತ್ರಿಮೂರ್ತಿ ನಗರ ಗಣಪತಿ ದೇವಸ್ಥಾನ, ಕುವೆಂಪು ನಗರ ಕ್ರಾಸ್, JNNCE ಕಾಲೇಜು, ಅಕ್ಷರ ಕಾಲೇಜು, ಕೃಷಿ ಕಾಲೇಜು, ಚನ್ನಮುಂಭಾಪುರ ಕ್ರಾಸ್, ಬಸವನಗಂಗೂರು ಕ್ರಾಸ್, ರತ್ನಾಕರ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ರತ್ನಗಿರಿ ಬಡಾವಣೆ, ಕುವೆಂಪು ನಗರ ಎ ಬ್ಲಾಕ್ ವಿದ್ಯಾ ಭಾರತಿ ಕಾಲೇಜು ಬಳಿ, ಎನ್.ಇ.ಎಸ್ ಲೇಔಟ್ ಕುವೆಂಪು ನಗರ

100 ಅಡಿ ರಸ್ತೆ : ನಿರ್ಮಲಾ ಆಸ್ಪತ್ರೆ ಬಳಿ, ರಾಜೇಂದ್ರ ನಗರ ಚಾನಲ್ ಬಳಿ, ಗಾಂಧಿ ನಗರ, ರವೀಂದ್ರ ನಗರ ಗಣಪತಿ ದೇವಸ್ಥಾನ, ಬ್ಲಡ್ ಬ್ಯಾಂಕ್ ಬಳಿ

ಮಿಳಘಟ್ಟ ಕ್ರಾಸ್ ನಿಂದ ಗೋಪಾಲಗೌಡ ಬಡಾವಣೆ : ಮಿಳಘಟ್ಟ, ಲಕ್ಷ್ಮೀ ಕ್ಯಾಂಟೀನ್, ಪದ್ಮಾ ಟಾಕೀಸ್, ಅಣ್ಣಾ ನಗರ ಚಾನಲ್, ಗೋಪಾಳ ವಿನಾಯಕ ಸರ್ಕಲ್, ಗುಡ್ ಲಕ್ ಸರ್ಕಲ್ (ಸ್ವಾಮಿ ವಿವೇಕಾನಂದ ಬಡಾವಣೆ),  ವೃದ್ಧಾಶ್ರಮ (ಎಲ್.ಹೆಚ್.ಎಸ್)

ಗೋಪಾಲ ಗೌಡ 100 ಅಡಿ ರಸ್ತೆ : ಮೋರ್ ಶಾಪ್ ಬಳಿ, ಗೋಪಾಲಗೌಡ ಬಡಾವಣೆ ಹೆಚ್.ಬ್ಲಾಕ್ ಪೆಟ್ರೋಲ್ ಬಂಕ್ ಎದುರು

ವಿಜಯ ನಗರ ಮುಖ್ಯ ರಸ್ತೆ : ನೇತಾಜಿ ಸರ್ಕಲ್, ದ್ರೌಪದಮ್ಮ ಸರ್ಕಲ್

ತುಂಗಾ ನಗರ 100 ಅಡಿ ರಸ್ತೆ: ಚಾಲುಕ್ಯ ನಗರ (ಎಡಭಾಗ), ಚಾಲುಕ್ಯ ನಗರ (ಬಲಭಾಗ), ಚಾಲುಕ್ಯ ನಗರ ಓಪನ್ ಗ್ರೌಂಡ್, ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರ ವರ್ತುಲ ರಸ್ತೆ

ಸಾಗರ ರಸ್ತೆ : ಮೆಗ್ಗಾನ್ ಆಸ್ಪತ್ರೆ ಹೊರ ಭಾಗ, ಎಸ್.ಪಿ.ಕಚೇರಿ ಎದುರು, ದೊಡ್ಡಪೇಟೆ ಪೊಲೀಸ್ ಠಾಣೆ (ಎಡ ಭಾಗ), ಎಪಿಎಂಸಿ ಹತ್ತಿರ (ಎಡಭಾಗ), ಎಪಿಎಂಸಿ ಹತ್ತಿರ (ಬಲಭಾಗ), ಬಿ.ಕೃಷ್ಣಪ್ಪ ಸರ್ಕಲ್ (ಆಲ್ಕೊಳ ಸರ್ಕಲ್), ಡಿವಿಜಿ ಸರ್ಕಲ್ (ಎಡ ಭಾಗ), ಹೊಟೇಲ್ ಅಶೋಕ ಗ್ರ್ಯಾಂಡ್ (ಕ್ರೈಸ್ತ ಸಮುದಾಯದರ ಸ್ಮಶಾನದ ಬಳಿ), ಹೊಟೇಲ್ ಅಶೋಕ ಗ್ರ್ಯಾಂಡ್ (ಚರ್ಚ್ ಎದುರು), ನಂಜಪ್ಪ ಲೈಫ್ ಕೇರ್, ಗಾಡಿಕೊಪ್ಪ, ಮಹೇಂದ್ರ ಶೋ ರೂಂ ಎದುರು (ಗಾಡಿಕೊಪ್ಪ), ಕಾಸ್ಮೋ ಕ್ಲಬ್, ಪ್ರೊ. ಬಿ.ಕೃಷ್ಣಪ್ಪ ಸರ್ಕಲ್  (FREE LEFT).

ಸೋಮಿನಕೊಪ್ಪ : ಕಾಶಿಪುರ ಮುಖ್ಯ ರಸ್ತೆ ಎಸ್.ಆರ್.ಎಸ್ ಶಾಮಿಯಾನ ಎದುರು, ಸೋಮಿನಕೊಪ್ಪ ಮುಖ್ಯ ರಸ್ತೆ, ಆದರ್ಶ ನಗರ.

ವಿನೋಬನಗರ 100 ಅಡಿ ರಸ್ತೆ :ಕರಿಯಣ್ಣ ಬಿಲ್ಡಿಂಗ್, ಪೊಲೀಸ್ ಚೌಕಿ (ಪೊಲೀಸ್ ಠಾಣೆ ಹಿಂಭಾಗ), ಇಂದಿರಾ ಗಾಂಧಿ ಸರ್ಕಲ್ (ಬಲ ಭಾಗ), ಇಂದಿರಾ ಗಾಂಧಿ ಸರ್ಕಲ್ (ಎಡ ಭಾಗ),  ವಿನೋಬನಗರದ ಶಿವಾಲಯ, ಹಳೆ ಜೈಲ್ ಹತ್ತಿರ (ಫ್ರೀಡಂ ಪಾರ್ಕ್), ಲಕ್ಷ್ಮೀ ಚಿತ್ರಮಂದಿರ ಬಳಿ, ಮಾಧವ ನೆಲೆ ಬಳಿ (ಕಲ್ಲಹಳ್ಳಿ – ಕಾಶಿಪುರ ರಸ್ತೆ).

ಜೈಲ್ ರಸ್ತೆ:ಹೊಸಮನೆ ಬಡಾವಣೆ

ಬೊಮ್ಮನಕಟ್ಟೆ ರಸ್ತೆ :ಬೊಮ್ಮನಕಟ್ಟೆ (ಬಲ ಭಾಗ), ಬೊಮ್ಮನಕಟ್ಟೆ (ಎಡ ಭಾಗ).

ಎನ್.ಟಿ.ರಸ್ತೆ : ಎನ್.ಟಿ.ರಸ್ತೆ (ಹೆಚ್.ಪಿ.ಪೆಟ್ರೋಲ್ ಬಂಕ್ ಎದುರು), ಮಂಡ್ಲಿ (ಎಡ ಭಾಗ), ಮಂಡ್ಲಿ (ಬಲ ಭಾಗ)

ಬೈಪಾಸ್ ರಸ್ತೆ ತುಂಗಾ ನದಿ ಹೊಸ ಸೇತುವೆ, ಸೂಳೆಬೈಲು (ಎಡ ಭಾಗ), ಊರುಗಡೂರು (ಬಲ ಭಾಗ), ಬೈಪಾಸ್ ರಸ್ತೆ ನರ್ಸಿಂಗ್ ಕಾಲೇಜು ಹತ್ತಿರ ನಂಜಪ್ಪ ಬಡಾವಣೆ, ಊರು ಗಡೂರು ಸರ್ಕಲ್ (ಎಡ ಭಾಗ), ಸೂಳೆಬೈಲು (ಬಲ ಭಾಗ), ನಿಸರ್ಗ ಲೇಔಟ್, ಪ್ರಿಯಾಂಕಾ ಲೇಔಟ್.

ಜಿಲ್ಲಾಡಳಿತ ಸೂಚಿಸಿರುವ ಬಸ್​ನಿಲ್ದಾಣಗಳ ವಿವರ ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ, : ಜಿಲ್ಲಾಡಳಿತದ ಅಧಿಸೂಚನೆಯ ವಿವರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ