BREAKING NEWS ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪರಿಂದ ಬಿಗ್ ಸ್ಟೇಟ್ಮೆಂಟ್​! ಇಲ್ಲಿದೆ 8 ಪಾಯಿಂಟ್ಸ್​

SHIVAMOGGA  |  Jan 25, 2024  |  ಶಿವಮೊಗ್ಗದಲ್ಲಿ ಮತ್ತೆ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ  ಗುಡುಗಿದ್ದಾರೆ. ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಾಜಿ ಸಿಎಂ ಜಗದೀಶ್​ ಶೆಟ್ಟರ್ ವಿಚಾರದಲ್ಲಿಯು ಪ್ರತಿಕ್ರಿಯಿಸಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದನ್ನ ನೋಡುವುದಾದರೆ ವಿವರ ಇಲ್ಲಿದೆ 

ಜಗದೀಶ್ ಶೆಟ್ಟರ್ ಮೈಯಲ್ಲಿ ಹರಿಯುತ್ತಿರೋದು RSS ರಕ್ತ

ಜಗದೀಶ್​ ಶೆಟ್ಟರ್ ವಾಪಸ್ ಬಿಜೆಪಿಗೆ ಬರುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಈಶ್ವರಪ್ಪರವರು,  ನಾನು  ಅವತ್ತೇ ಹೇಳಿದ್ದೆ ಜಗದೀಶ್ ಶೆಟ್ಟರ್ ಮೈಯಲ್ಲಿ ಹರಿಯುತ್ತಿರೋದು  RSS ರಕ್ತ ಎಂದು. ನಿಮ್ಮಲ್ಲಿ ಬೇರಕೆ ರಕ್ತ ಇಲ್ಲ ಅಂತ. ಉಏನೋ ಆಸೆಯಿಂದ ಸಿಟ್ಟಿನಿಂದ ಬೇರೆ ಪಕ್ಷಕ್ಕೆ ಹೋದ್ರು. ಭಾರತೀಯ ಜನತಾ ಪಕ್ಷಕ್ಕೆ ಬರಬಹುದು. ಇವತ್ತು ನಾಳೆಗೆ ಏನಾಗುತ್ತೆ ನೋಡೋಣ ಎಂದಿದ್ದಾರೆ. 

ಜಗದೀಶ್ ಅಂತ ನಾಯಕರನ್ನು ಯಾಕೇ ಕರೆದುಕೊಂಡಿದ್ದಿರಾ? ನಿಮ್ಮಲ್ಲಿ ಆಗ ನಾಯಕರ ಕೊರತೆ ಇತ್ತಾ? ಎಂದು ಇದೇ ವೇಳೆ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ರು. ತುರ್ತು ಪರಿಸ್ಥಿತಿ ಯಲ್ಲಿ ಸರ್ವಾಧಿಕಾರಿ ದೊರಣೆ ವಿರುದ್ಧ ಹೋರಾಡಿದ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನಾ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಅಭಿನಂಧಿಸುತ್ತೇನೆ ಎಂದರು

ಜಾತಿ ಜನಗಣತಿ ಬಿಡುಗಡೆ ಏಕೆ ಮಾಡುತ್ತಿಲ್ಲ

ಇನ್ನೂ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ನವರನ್ನ ಕೇಳಲು ಇಚ್ಚೆ ಪಡುತ್ತೇನೆ. ಜಾತಿ ಜನಗಣತಿ ವರದಿ ತಯಾರಿದ್ರೂ ಕೂಡ ಬಿಡುಗಡೆ ಮಾಡಿಲ್ಲ . ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರ ಯಾವತ್ತು ಕೇಳ್ತಾರೋ ಅವತ್ತು ವರದಿ ಕೊಡುತ್ತೇವೆ ಅಂದಿದ್ದಾರೆ. ಹಿಂದುಳಿದ ವರ್ಗಗಳಿಗೆ ಸರ್ಕಾರ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ರು. 

ಹಿಂದುಳಿದವರ ಚಾಂಪಿಯನ್ ಸಿದ್ದರಾಮಯ್ಯ

ಹಿಂದುಳಿದವರ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ರವರು ಜಾತಿ ಜನಗಣತಿಯನ್ನು ಟೆಕ್ನಿಕಲ್ ಆಗಿ ಸರಿಯಿಲ್ಲ ಅಂತ ಇಷ್ಟು ದಿನ ತಳ್ಳಿಕೊಂಡು ಬಂದಿದ್ದಾರೆ. ಶಾಸಕರ ಸಹಿ ಸಂಗ್ರಹ ಸಹ ಮಾಡಿದ್ದಾರೆ.ಓಟ್ ಗಾಗಿ ಸಮಾವೇಶ ಮಾಡುತ್ತಿದ್ದಾರೆ. ಜಾತಿ ಜನಗಣತಿ ಬಗ್ಗೆ ನಿಮ್ಮ ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿದ್ರು. 9 ವರ್ಷ ಆಯ್ತು ಜಾತಿ ಜನಗಣತಿ ಬಿಡುಗಡೆ ಮಾಡುತ್ತೇವೆ ಅಂತಾ.. ಆದರೆ ಇದುವರೆಗೂ ಬಿಡುಗಡೆ ಮಾಡಿಲ್ಲ. ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಬೇಕು ಅಂತ ಬಿಜೆಪಿ ಹೇಳಿದೆ.ಆದರೆ ಈ ಬಗ್ಗೆ ಸಿಎಂ ಮೌನ ವಹಿಸಿದ್ದಾರೆ.ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದಿರಾ ಎಂದು ಕೇಳಿದ ಕೆ.ಎಸ್​.ಈಶ್ವರಪ್ಪರವರು ಕಾಂಗ್ರೆಸ್ ಸರ್ಕಾರ ಸುಳ್ಳು ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದಿದೆ ಎಂದಿದ್ಧಾರೆ. 

ಇಂಡಿಯಾ ಹೆಸರಿಗೆ ಅವಮಾನ

ಬಿಜೆಪಿ ಪಕ್ಷವನ್ನ ದೇಶದಲ್ಲೇ ನಿರ್ನಾಮ‌ಮಾಡ್ತೇವೆ ಅಂದಿದ್ದೀರಿ. ನಿಮ್ಮ ಹಣೆ ಬರಹಕ್ಕೆ ಒಬ್ಬ ಶಾಸಕನ್ನ ಕರೆದುಕೊಳ್ಳಲು ಆಗಲಿಲ್ಲ.ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿಚಾರದಲ್ಲಿ ಜಗಳ ಆಡುತ್ತಿದ್ದೀರಾ. ನಮ್ಮ ಪಕ್ಷವನ್ನು ಯಾರು ಒಪ್ಪುತ್ತಿಲ್ಲ‌ ಅಂತ ಸ್ಪಷ್ಟವಾಗಿ ಹೇಳಬೇಕು ನೀವು.  ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಬಾರದು ಅಂತ ಇಂಡಿಯಾ ಒಕ್ಕೂಟ ಮಾಡಿಕೊಂಡ್ರಿ. ಇಂಡಿಯಾ ಅನ್ನುವ ಹೆಸರಿಗೆ ಅಪಮಾನ ಸಹ ಮಾಡಿದ್ರಿ ಎಂದು ಮೂದಲಿಸಿದ್ರು

ಈಗ ಕಾಂಗ್ರೆಸ್ ಜೊತೆ ಹೋಗಲ್ಲ‌ ಅಂತ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂಡಿಯಾ ಒಕ್ಕೂಟ ಛೀದ್ರ,ಛೀದ್ರ ಆಗುತ್ತೆ.ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ‌ ಆಗ್ತಾರೆ. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರಿಯಲ್ಲ.ರಾಮ ಭಕ್ತರ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೆ ಎಂದು ಭವಿಷ್ಯ ನುಡಿದ್ರು. 

 

ವೀರಪ್ಪ ಮೊಯ್ಲಿ ಕ್ಷಮೆ ಕೇಳಲಿ

ಇದೇ ವೇಳೆ ವೀರಪ್ಪ ಮೊಯ್ಲಿ ಸಮಾಜವನ್ನು ಓಡೆಯುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಪಕ್ಷದಿಂದ ವಜಾ ಮಾಡಬೇಕು .ಲೋಕಸಭಾ ಟಿಕೆಟ್ ಪಡೆಯಲು ಈ ರೀತಿಯ ಹೇಳಿಕೆ ಕೋಡುತ್ತಿದ್ದಾರೆ. ವೀರಪ್ಪ ಮೊಯ್ಲಿ ಕೂಡಲೇ ಪ್ರಧಾನಿಗಳ ಕ್ಷೇಮೆ ಕೇಳಬೇಕು ಎಂದರು

ಗೋಡ್ಸೆ ರಾಮ ಗಾಂಧಿ ರಾಮ

ಇನ್ನೂ ಕಾಂಗ್ರೆಸ್ ನವರು ಭಾರತ ಮಾತೆಯ ಮಕ್ಕಳು ಅಲ್ವಾ. ದೇಶವನ್ನು ಒಡೆದು ಛೀದ್ರ ಮಾಡಿ ಆಯ್ತು. ಈಗ ಗೋಡ್ಸೆ ರಾಮ ಗಾಂಧಿ ರಾಮ ಮಾಡುತ್ತಿದ್ದಾರೆ. ನಿನ್ನೆ ತನಕ ಜೈ ಟಿಪ್ಪು ಜೈ ಟಿಪ್ಪು ಅನ್ನುತ್ತಿದ್ದರು. ಈಗ ಜೈ ಶ್ರೀರಾಮ್ ಅನ್ನುತ್ತಿದ್ದಾರೆ. ಹಣೆಗೆ ಕುಂಕುಮ ಇಡುವ ಸಂದರ್ಭದಲ್ಲಿ ನಿಮ್ಮ ಹೆಸರಲ್ಲಿ ರಾಮ‌ ಇದಾನೆ ಅಂತ ಗೋತ್ತಿರಲ್ವ ರಾಮನ ಜೊತೆಗೆ ಹೋಗಲಿಲ್ಲ ಅಂದ್ರೆ ಕಾಂಗ್ರೆಸ್ ಅಡ್ರೇಸ್ ಇಲ್ಲದೆ ಹೋಗುತ್ತೆ . ಬರೇ ಟಿಪ್ಪು ಟಿಪ್ಪು ಅಂತ ಕೂಗುತ್ತಿದ್ರಿ. ಈಗ ರಾಮ ನೆನಪಾಗಿದ್ದಾನೆ.

ಡಿಕೆ ಶಿವಕುಮಾರ್ ವಿರುದ್ಧ ಗುಡುಗು

ಡಿಕೆ ಶಿವಕುಮಾರ್ ರಾಮ ಇವರಪ್ಪನ‌ ಆಸ್ತಿ ನಾ ಅಂತಾ ಕೇಳಿದ್ದಾರೆ. ಡಿ.ಕೆ ಶಿವಕುಮಾರ್ ಅವರೇ ನಿಮ್ಮಪ್ಪ ರಾಮ ಅಂದ್ರಲ್ಲ ಅದು ಸಂತೋಷ ಆಯ್ತು. ಕನಿಷ್ಠ ವಿರೋಧ ಪಕ್ಷದ ಸ್ಥಾನನಾದ್ರೂ ಸಿಗಲಿ ಅಂತ ರಾಮನ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಕಾಲ್ಪನಿಕ ರಾಮ‌ ಅಂತ ಕೋರ್ಟಿಗೆ ಹೋಗಿದ್ರೂ. ಈಗ ಏನು ಹೇಳ್ತಿರಾ ತಪ್ಪು ಆಯ್ತು ಅಂತ ಒಪ್ಪಿಕೊಳ್ತೀರಾ.ಮುಸ್ಲಿಮರ ಸಹ ರಾಮನನ್ನು ಒಪ್ಪಿಕೊಳ್ಳುತ್ತಿದ್ದಾರೆ.  

ಸಿದ್ದರಾಮಯ್ಯ ದೊಡ್ಡ ವಿಜ್ಞಾನಿನಾ

ಈಗ ಪ್ರತಿಷ್ಠಾಪನೆ ಆಗಿರೋದು ಬಾಲ ರಾಮ . ಬಾಲ ರಾಮನನ್ನು ಈಗಲೇ ಮದುವೆ ಮಾಡಲು ಆಗುತ್ತಾ? ಸಿದ್ದರಾಮಯ್ರರಿಗೆ ಇದು ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ ದೊಡ್ಡ ವಿಜ್ಞಾನಿನಾ ಎಂದು ಪ್ರಶ್ನಿಸಿದ ಕೆ.ಎಸ್.ಈಶ್ವರಪ್ಪರವರು ರಾಮನ ಭಕ್ತಿ ರಾಷ್ಟ್ರ ಭಕ್ತಿ ಇಟ್ಟುಕೊಂಡು ನಾವು ಚುನಾವಣೆಗೆ ಹೋಗ್ತೇವೆ. ನೀವು ನಕಲಿ ಗ್ಯಾರಂಟಿ ಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗಿ ಯಾರು ಗೇಲ್ತಾರೆ ನೋಡೋಣ ಎಂದು ಸವಾಲು ಹಾಕಿದ್ರು.  


Leave a Comment