ಮಂಡ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಿವಮೊಗ್ಗದಲ್ಲಿ ಆತ್ಮಹತ್ಯೆ! ಅಪ್ರಾಪ್ತೆ ಮೇಲೆ ಮಾವನ ದೌರ್ಜನ್ಯ! ಕಾಣೆಯಾದ ಯುವಕ! today crime

Shivamogga Mar 31, 2024 Shivamogga  today crime  ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ ಪ್ರಜ್ವಲ್ ಎಂಬುವರು ಚಿಕಿತ್ಸೆ ಫಲಕಾರಿಯಾಗದೇ ಕಳೆದ ಶುಕ್ರವಾರದ ರಾತ್ರಿ ಮೃತಪಟ್ಟಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ಯವರಾದ ಪ್ರಜ್ವಲ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲೇ ಇದ್ದರು. ವಿದ್ಯಾರ್ಥಿ ಆತ್ಮಹತ್ಯೆ ಕಾರಣ ಸ್ಪಷ್ಟವಾಗಿಲ್ಲವಾದರೂ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. 

ಕಾಣೆಯಾದ ಯುವಕ ಸುಳಿವಿಗಾಗಿ ಪೊಲೀಸ್‌ ಪ್ರಕಟಣೆ

ಇನ್ನೂ ಕಾಣೆಯಾದ ಯುವಕನೊಬ್ಬನ ಬಗ್ಗೆ ಶಿವಮೊಗ್ಗ ಪೊಲೀಸ್ ಪ್ರಕಟಣೆಯನ್ನ ನೀಡಿದ್ದು ಅದರ ವಿವರ ಹೀಗಿದೆ.  ಅಭಿಷೇಕ್, 25 ವರ್ಷ, ಶಿವಮೊಗ್ಗ ಇವರು ದಿ: 09-03-2023 ರಂದು ಮಾಧ್ಯಹ್ನ 1 ಗಂಟೆಗೆ ಮನೆಯಿಂದ ಹೊರಗೆ ಹೋದವರು ಮತ್ತೆ ಬಂದಿರುವುದಿಲ್ಲ. ಕಾಣೆಯಾದ ಅಭಿಷೇಕ್ ಸುಮಾರು 5.4 ಅಡಿ ಎತ್ತರ, ಕೋಲುಮುಖ, ಗೋಧಿ ಮೈ ಬಣ್ಣ ಹಾಗೂ ಕಪ್ಪು ಕೂದಲನ್ನು ಹೊಂದಿರುತ್ತಾರೆ. ಈ ಯುವಕನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಪಿಐ, ವಿನೋಬನಗರ ಪೋಲಿಸ್ ಠಾಣೆ ಶಿವಮೊಗ್ಗ ಅಥವಾ ಪೋಲಿಸ್ ಕಂಟ್ರೋಲ್ ರೂಮ್ ಶಿವಮೊಗ್ಗ ದೂ; 9480803300 / 9480803308 ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಮರು ಪ್ರಕಟಣೆ ತಿಳಿಸಿದ್ದಾರೆ.

ಅಪ್ರಾಪ್ತೆಯ ಮೇಲೆ ಮಾವನ ದೌರ್ಜನ್ಯ!

ಅಪ್ರಾಪ್ತ ಮಗಳ ಮೇಲೆ ತನ್ನ ತಮ್ಮ ಸಹೋದರನೇ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ಮಹಿಳೆಯೊಬ್ಬರು ಶಿವಮೊಗ್ಗ ಜಿಲ್ಲೆಯ ಪೊಲೀಸ್‌ ಸ್ಠೇಷನ್‌ ಒಂದರಲ್ಲಿ ಕೇಸ್‌ ದಾಖಲಿಸಿದ್ದು ಪೋಕ್ಸೋ ಪ್ರಕರಣ ಸಂಬಂಧ ಆರೋಪಿಯನ್ನ ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.  

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು