KARNATAKA NEWS/ ONLINE / Malenadu today/ May 4, 2023 GOOGLE NEWS
ಶಿಕಾರಿಪುರ/ ಶಿವಮೊಗ್ಗ/ ನಟ ಕಿಚ್ಚ ಸುದೀಪ್ ಬಿಜೆಪಿಯ ನಾಯಕರ ಪರವಾಗಿ ಪ್ರಚಾರ ನಡೆಸ್ತಿರುವುದು ಗೊತ್ತೆ ಇದೆ. ಇದೀಗ ಶಿವಮೊಗ್ಗದಲ್ಲಿಯು ಅವರು ಪ್ರಚಾರ ನಡೆಸಲಿದ್ದಾರೆ. ಅದು ಕೂಡ ವಿಶೇಷವಾಗಿ ಶಿಕಾರಿಪುರದಲ್ಲಿ ಕಿಚ್ಚ ಸುದೀಪ್ ಪ್ರಚಾರ ನಡೆಸಲಿದ್ದಾರೆ.
ಈಗಾಗಲೇ ಶಿಕಾರಿಪುರದಲ್ಲಿ ನಟಿ ಶೃತಿ, ತಾರಾ ಬಿ.ವೈ ವಿಜಯೇಂದ್ರರವರ ಪರವಾಗಿ ಪ್ರಚಾರ ನಡೆಸಿದ್ದಾರೆ. ಇದರ ಬೆನ್ನಲ್ಲೆ ಇದೀಗ ಕಿಚ್ಚ ಸುದೀಪ್ ವಿಜಯೇಂದ್ರರವರ ಪರವಾಗಿ ಮತ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
8ಕ್ಕೆ ನಟ ಸುದೀಪ್ ಪ್ರಚಾರ
ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರದ ಕೊನೆಯ ದಿನವಾದ ಮೇ 8 ರಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಪ್ರಚಾರ ಮಾಡಲಿದ್ಧಾರೆ.
ಈ ಬಗ್ಗೆ ಮಾತನಾಡಿರುವ ವಿಜಯೇಂದ್ರರವರು ಅಂದು ಬೆಳಗ್ಗೆ ಶಿಕಾರಿಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ನಟ ಸುದೀಪ್, ಮಧ್ಯಾಹ್ನದ ನಂತರ ಶಿರಾಳಕೊಪ್ಪದಲ್ಲಿ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Malenadutoday.com Social media
