ನಮ್ಮ ಸಾಧನೆ ನಮ್ಮ ಕೈ ಹಿಡಿಯುತ್ತೆ | ಶಿವಮೊಗ್ಗದಲ್ಲಿ ಬಿಎಸ್‌ವೈ ಮಾತು | ಎನಂದ್ರು ಮಾಜಿ ಸಿಎಂ?

Former CM BS Yediyurappa expressed confidence in BJP candidates Dr. Dhananjay Sarji and Bhojegowda winning the graduate and teachers' constituency elections respectively.

ನಮ್ಮ ಸಾಧನೆ ನಮ್ಮ ಕೈ ಹಿಡಿಯುತ್ತೆ | ಶಿವಮೊಗ್ಗದಲ್ಲಿ ಬಿಎಸ್‌ವೈ ಮಾತು | ಎನಂದ್ರು ಮಾಜಿ ಸಿಎಂ?
Former CM BS Yediyurappa , BJP candidates , Dr. Dhananjay Sarji , Bhojegowda, graduate and teachers constituency elections

SHIVAMOGGA | MALENADUTODAY NEWS | May 30, 2024  ಮಲೆನಾಡು ಟುಡೆ

ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಮಾಡಿದ ಸಾಧನೆಗಳನ್ನು ಗಮನಿಸಿ ಮತದಾರರು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.‌ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡ ಅವರನ್ನು ಮೊದಲ ಪ್ರಾಶಸ್ತ್ಯ ಮತದಲ್ಲಿಯೇ ಗೆಲ್ಲಿಸಲಿದ್ದಾರೆ ಅಂತಾ  ಬಿಜೆಪಿ ಹಿರಿಯ ಮುಖಂಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ನಿನ್ನೆ ನಡೆದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು,  ನಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಶಾಲಾ– ಕಾಲೇಜುಗಳನ್ನು ಆರಂಭಿಸಲಾಗಿದೆ. ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಹೆಣ್ಣು ಮಕ್ಕಳಿಗೆ ಸೈಕಲ್ ನೀಡಲಾಗಿದೆ. ನಮ್ಮ ಸಾಧನೆಗಳೇ ನಮ್ಮ ಕೈ ಹಿಡಿಯಲಿವೆ ಎಂದಿದ್ದಾರೆ. 

ವಿಧಾನ‌ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ ಪದವೀಧರರ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ  ಆದರೆ ಮತಗಳು ಜಾಸ್ತಿ ಅಪಮೌಲ್ಯ ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.  

ಇನ್ನೂ ಶಾಸಕ ಎಸ್.ಎನ್.‌ಚನ್ನಬಸಪ್ಪ ಮಾತನಾಡ್ತಾ  ಬಿಜೆಪಿಗೆ ಮತ್ತೊಮ್ಮೆ ಆಶೀರ್ವಾದ ಮಾಡಿ. ಅಪಪ್ರಚಾರ ಮಾಡುವವರಿಗೆ ತಕ್ಕಪಾಠ ಕಲಿಸಬೇಕು ಎಂದರು. ಇವರ ಬಳಿಕ ಮಾತನಾಡಿದ  ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ‌ ಮೊದಲ ಪ್ರಾಶಸ್ತ್ಯ ಮತದಲ್ಲಿಯೇ ನಾನು ಗೆಲ್ಲುತ್ತೇನೆ. ಇದು ಶತಸಿದ್ದವಾಗಿದೆ. ಸೋಲಿನ ಭಯದಿಂದ ಕಾಂಗ್ರೆಸ್ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದರು.

Former CM BS Yediyurappa expressed confidence in BJP candidates Dr. Dhananjay Sarji and Bhojegowda winning the graduate and teachers' constituency elections respectively.