shivamogga Mar 22, 2024 ಶಿವಮೊಗ್ಗದ ಹೊಸಮನೆಯಲ್ಲಿ ನಿನ್ನೆ ರಾತ್ರಿ ರೌಡಿ ಗ್ಯಾಂಗ್ವೊಂದು ಮಚ್ಚು ಲಾಂಗ್ ಹಿಡಿದು ಅಟ್ಟಹಾಸ ಮೆರೆದಿದೆ. ಈ ಕೃತ್ಯದ ಒಂದಷ್ಟು ಭಾಗ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಮೂಲಗಳ ಪ್ರಕಾರ ಕಡ್ಡಿ ಮಧು ವಿರೋಧಿ ಗ್ಯಾಂಗ್ ಈ ಕೃತ್ಯದಲ್ಲಿ ಪಾತ್ರವಹಿಸಿದೆ ಎನ್ನಲಾಗುತ್ತಿದೆ.
ನಿನ್ನೆ ತಡರಾತ್ರಿ ಹೊಸಮನೆಯ ಏರಿಯಾಕ್ಕೆ ಮೂರು ಬೈಕ್‌ಗಳಲ್ಲಿ ಬಂದ ಆರೋಪಿಗಳು ಕೈಗಳಲ್ಲಿ ಲಾಂಗ್ ಹಿಡಿದು ಪ್ರದರ್ಶನ ಮಾಡಿದ್ದಾರೆ. ಅಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ಕಾರು,ಬೈಕ್ ನ್ನ ಜಖಂಗೊಳಿಸಿದ್ದಾರೆ. ಅಲ್ಲದೆ ಮನೆಯೊಂದಕ್ಕೆ ನುಗ್ಗಿ ಮನೆಯ ವಸ್ತುಗಳನ್ನು ಒಡೆದುಹಾಕಿದ್ದಾರೆ.
ಇಲ್ಲಿನ ನಿವಾಸಿಯೊಬ್ಬರಿಗೆ ಸೇರಿದ ಮನೆಯಲ್ಲಿ ದಾಂಧಲೆ ನಡೆಸಿದ ರೌಡಿಶೀಟರ್ಸ್ ಯಾರು ಎಂಬುದನ್ನ ಶಿವಮೊಗ್ಗ ಪೊಲೀಸರು ತಲಾಶ್ ಮಾಡುತ್ತಿದ್ದಾರೆ. ದೊಡ್ಡಪೇಟೆ ಪೊಲೀಸ್ ಸ್ಟೇಷನ್‌ನಲ್ಲಿ ಈ ಸಂಬಂಧ ದೂರು ದಾಖಲಾಗಿದೆ.