SHIVAMOGGA | Dec 3, 2023 | ಶಿವಮೊಗ್ಗ ಹೊರವಲಯದ ಬೆಳಲಕಟ್ಟೆ ಸನಿಹ ಇಂದು ಬೆಳಿಗ್ಗೆ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬೆಂಕಿಗೆ ಸಿಲುಕಿದ ವ್ಯಕ್ತಿ ಮಲಗಿ ಒದ್ದಾಡುತ್ತಿದ್ದ ನೋವಿನ ದೃಷ್ಯ ಕಣ್ಣಾಲೆಗಳನ್ನೇ ಒದ್ದೆ ಮಾಡುವಂತಿದೆ. ಇದು ಸಹೋದರರಿಬ್ಬರ ಕುಟುಂಬದ ನಡುವೆ ಇದ್ದ ಜಮೀನು ವಿವಾದದಲ್ಲಿ ನಡೆದ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬೆಳಲಕಟ್ಟೆ ಸನಿಹದ ಒಂದು ಕಿಲೋಮೀಟರ್ ದೂರದಲ್ಲಿ ಬೆಳಿಗ್ಗೆ 8.30 ರ ಸುಮಾರಿಗೆ ಮಹೇಶಪ್ಪ(65) ಸ್ಕೂಟಿ ಬೈಕ್ ನಲ್ಲಿ ಮಗಳ ಮನೆಗೆ ತೆರಳಿದ್ದರು. ಮನೆಯಿಂದ ಹೊರಟ ಕೆಲವೇ ಹೊತ್ತಿನಲ್ಲಿ ಅವರು ಸಹೋದರ ಹಾಗು ಆತನ ಪುತ್ರನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಅಸಲಿಗೆ ಮಹೇಶಪ್ಪ ಹಾಗು ಕುಮಾರಪ್ಪ ಸಹೋದರರಾಗಿದ್ದು ಇಬ್ಬರ ನಡುವೆ ಜಮೀನು ವಿಚಾರದಲ್ಲಿ ಗಲಾಟೆಗಳಾಗಿದ್ದು.,ಪರಸ್ಪರ ದ್ವೇಷಿಗಳಾಗಿದ್ದರು. ಹೀಗಾಗಿಯೇ ಕುಮಾರಪ್ಪ ತನ್ನ ಸಹೋದರ ಮಹೇಶಪ್ಪನನ್ನ ಕೊಲ್ಲಲು ಸ್ಕೆಚ್ ಹಾಕಿದ್ದ. ಇಂದು ಮಹೇಶಪ್ಪ ಬಿಕ್ಕನಹಳ್ಳಿಯಲ್ಲಿರುವ ಮಗಳ ಮನೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕುಮಾರಪ್ಪ ಹಾಗು ಪುತ್ರ ಕಾರ್ತಿಕ್ ದಾಳಿ ಮಾಡಿ, ಮೈ ಮುಖದ ಮೇಲೆ ಪೆಟ್ರೋಲ್ ಎರಚಿದ್ದಾರೆ.
READ : ರಸ್ತೆಗಿಳಿದ ಆರಕ್ಷಕರು! 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ ! ರಸ್ತೆ ತಡೆ! ಕಾರಣವೇನು ಗೊತ್ತಾ?
ಜಮೀನನ್ನು ಬೇರೆಯವರಿಗೆ JV ಮಾಡಿಕೊಟ್ಟಿದ್ದೀಯ ಎಂದು ಬೆದರಿಸಿ ಕಾರ್ತಿಕ್ ಪೆಟ್ರೋಲ್ ಸುರಿದಿದ್ದಾನೆ. ಬೆಂಕಿಗೆ ಸಿಲುಕಿದ ಮಹೇಶಪ್ಪ ಅಕ್ಷರ ಸಹ ಬೆಂಕಿಯಲ್ಲಿ ಬೆಂದು ಹೋಗಿದ್ದು ಬಟ್ಟೆಗಳೆಲ್ಲಾ ಸುಟ್ಟು ಹೋಗಿದೆ.ಬೆತ್ತಲೆಯಾಗಿ ನೆಲದಲ್ಲಿ ಉರುಳಾಡಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ದೃಷ್ಯ ಹೃದಯ ಕಲುಕುವಂತಿತ್ತು .
ನರಳಿ ನರಳಿ ಒದ್ದಾಡಿ ಮಹೇಶಪ್ಪ ಸಾವನ್ನಪ್ಪಿದ್ದಾರೆ. ಬೆಂಕಿಗೆ ಸಿಲುಕಿದ ಸ್ಕೂಟಿ ಸಂಪೂರ್ಣ ಸುಟ್ಟುಹೋಗಿದ್ದು, ಜಮೀನಿನಲ್ಲಿ ಬೋರ್ ಮೋಟಾರು ಹಾಕಿಸಲು ಮಹೇಶಪ್ಪ ಕೊಂಡೊಯ್ಯುತ್ತಿದ್ದ 60 ಸಾವಿರ ಹಣ ಕೂಡ ಸುಟ್ಟು ಹೋಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಕಾರ್ತಿಕ್ ಮತ್ತು ಕುಮಾರಪ್ಪ ತಲೆ ಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
