ರಸ್ತೆಗಿಳಿದ ಆರಕ್ಷಕರು! 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ ! ರಸ್ತೆ ತಡೆ! ಕಾರಣವೇನು ಗೊತ್ತಾ?

More than 200 policemen staged a protest in Chikkamagaluru district demanding action against the lawyers who ransacked the station

ರಸ್ತೆಗಿಳಿದ ಆರಕ್ಷಕರು! 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ ! ರಸ್ತೆ ತಡೆ! ಕಾರಣವೇನು ಗೊತ್ತಾ?

CHIKKAMAGALURU  | POLICE PROTEST |  WILD ELEPHANT  Dec 2, 2023 | ನೆರೆಯ ಚಿಕ್ಕಮಗಳೂರು ಅಪರೂಪದ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿದೆ. ಪೊಲೀಸರು ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆ ವಕೀಲರು ಪ್ರತಿಭಟನೆ ನಡೆಸಿದರು. ಅಲ್ಲದೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. 

READ : ನರಹಂತಕ ಕಾಡಾನೆ ಸಾವು? ಕಾರ್ಯಾಚರಣೆ ವೇಳೆ ಮೃತಪಟ್ಟ ಕಾಡಾನೆ!

ಈ ಮಧ್ಯೆ  ಚಿಕ್ಕಮಗಳೂರು ಪೊಲೀಸರು ಸಹ ಚಿಕ್ಕಮಗಳೂರು ಟೌನ್​ ಪೊಲೀಸ್ ಸ್ಟೇಷನ್ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಸ್ಟೇಷನ್​ನೊಳಗೆ ನುಗ್ಗಿ ದಾಂಧಲೆ ವಕೀಲರು ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಪೊಲೀಸರು ಅಂತಹವರ ವಿರುದ್ಧ ಎಫ್ಐಆರ್​ ದಾಖಲಿಸಲಬೇಕು ಎಂದು ಆಗ್ರಹಿಸಿದ್ದಾರೆ. ಬರೋಬ್ಬರಿ 200 ಕ್ಕೂ ಹೆಚ್ಚು ಪೊಲೀಸರು ಪ್ರತಿಭಟನೆ ನಡೆಸ್ತಿರುವುದು ಕಾನೂನು ಸುವ್ಯವಸ್ಥೆಯ ಸೂಕ್ಷ್ಮತೆಯ ವಿಚಾರವಾಗಿದೆ. 

ಚಿಕ್ಕಮಗಳೂರು ಎಸ್​ಪಿಯವರು ಸಮ್ಮುಖದಲ್ಲಿಯೇ ತಮ್ಮ ಅಸಮಾಧಾನ ಹೊರಹಾಕಿದ ಪೊಲೀಸರ ಜೊತೆಗೆ ಈಗಾಗಲೇ ಅಮಾನತ್ತಾದ ಸಿಬ್ಬಂದಿಯ ಕುಟುಂಬಸ್ಥರು ಕೂಡು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಳಿಕ ಸಾರ್ವಜನಿಕರು ಹಾಗೂ ಹಲವು ಸಂಘಟನೆಗಳ ಸದಸ್ಯರು ಪೊಲೀಸರ ಪ್ರತಿಭಟನೆಗೆ ಸಾಥ್ ನೀಡಿದರು. 

READ : ಅಮೀರ್ ಅಹಮದ್ ಸರ್ಕಲ್​ನಿಂದ ಕೆಳಗೆ, K.R. ಪುರಂ ರಸ್ತೆಯಲ್ಲಿರುವ ಲಾಡ್ಜ್ ಮೇಲೆ ಪೊಲೀಸರ ರೇಡ್! ಸಿಕ್ಕಿಬಿದ್ರಾ ಸ್ಟೂಡೆಂಟ್ಸ್!

ನಂತರ ಪ್ರತಿಭಟನೆ ಇಲ್ಲಿನ ಹನುಮಂತಪ್ಪ ಸರ್ಕಲ್​ಗೆ ಶಿಫ್ಟ್ ಆಯ್ತು. ಅಲ್ಲಿ ಹಲ್ಲೆಗೊಳಗಾದ ವಕೀಲರ ವಿರುದ್ಧ ಪೊಲೀಸರು ಆರೋಪ ಮಾಡಿದರು. ಪೊಲೀಸರ ಮೇಲೆ ಹಲ್ಲೆ ನಡೆಸಿ, ಹೆಲ್ಮೆಟ್ ವಿಚಾರವನ್ನು ಮಾತ್ರ ಹೇಳಲಾಗುತ್ತಿದೆ ಎಂದು ದೂರಿದ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದರೇ ಸಸ್ಪೆಂಡ್​ ಶಿಕ್ಷೆ ನೀಡುವುದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದರು. 

ಅಲ್ಲದೆ ನಾಳೆ ಸೋಮವಾರ ಜಿಲ್ಲೆಯ ಎಲ್ಲಾ ಠಾಣೆ ಸಿಬ್ಬಂದಿ ಜಿಲ್ಲಾ ಕೇಂದ್ರಕ್ಕೆ ಬಂದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡುವ ಮೂಲಕ ಪೊಲೀಸರು ಪ್ರಕರಣವನ್ನು ಇನ್ನಷ್ಟು ಗಂಭೀರವಾಗಿಸಿದ್ದಾರೆ.