SHIVAMOGGA | RIPPONPETE | WILD ELEPHANT Dec 3, 2023 | ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಬಳಿಕ ನಾಪತ್ತೆಯಾಗಿದ್ದ ಯುವಕನನ್ನ ರಿಪ್ಪನ್ಪೇಟೆ ಪೊಲೀಸ್ ಸ್ಟೇಷನ್ (Ripponpete Police Station) ಪೊಲೀಸರು ಬಂಧಿಸಿದ್ದಾರೆ
ರಿಪ್ಪನ್ಪೇಟೆ ಪೊಲೀಸ್ ಸ್ಟೇಷನ್
ಇಲ್ಲಿನ ಗ್ರಾಮವೊಂದರ ನಿವಾಸಿ ಯುವಕನೊಬ್ಬ ಅದೇ ಪ್ರದೇಶದ ಯುವತಿಯೊಬ್ಬಳ್ಳನ್ನ ಪ್ರೀತಿಸಿದ್ದ. ಆನಂತರ ಆಕೆಯ ಜೊತೆಗೆ ಲೈಂಗಿಕ ಸಂಪರ್ಕವನ್ನು ಹೊಂದಿದ್ದ. ಈ ಮಧ್ಯೆ ಯುವತಿ ಗರ್ಭಿಣಿಯಾಗಿದ್ದಾಳೆ. ಅಲ್ಲದೆ ಯುವಕನಿಗೆ ವಿಷಯ ತಿಳಿಸಿದ್ದಾಳೆ. ವಿಚಾರ ತಿಳಿದು ಯುವಕ ವಿಷಯ ಯಾರಿಗಾದರೂ ತಿಳಿಸದರೇ ಯುವತಿ ಹಾಗೂ ಅವರ ತಂದೆಯನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಮಾನ ಕಳೆಯುವ ಬೆದರಿಕೆ ಒಡ್ಡಿದ್ದನಂತೆ. ಇಷ್ಟೆಲ್ಲದ ನಡುವೆ ಯುವತಿಯ ನಂಬರ್ ಬ್ಲಾಕ್ ಮಾಡಿದ್ದ ಆರೋಪಿ ಬಳಿಕ ಯುವತಿಯು ಗರ್ಭಿಣಿಯಾಗಲು ತಾನಲ್ಲ ಕಾರಣ ಇನ್ಯಾರೋ ಕಾರಣ ಎಂದು ಬಿಂಬಿಸಲು ಹೊರಟಿದ್ದಾನೆ ಎಂಬುದು ಆರೋಪ.
READ : ರಸ್ತೆಗಿಳಿದ ಆರಕ್ಷಕರು! 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ ! ರಸ್ತೆ ತಡೆ! ಕಾರಣವೇನು ಗೊತ್ತಾ?
ಕೊನೆಗೆ ಯುವತಿ ಹೊಸನಗರ ತಾಲ್ಲೂಕು ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ ಯುವಕ ತನ್ನ ತಪ್ಪು ಒಪ್ಪಿಕೊಂಡು ಆಕೆಯನ್ನು ಮದುವೆಯಾಗುತ್ತೇನೆ ಎಂದಿದ್ದಕ್ಕೆ ಪೋಷಕರು ಆತನ ವಿರುದ್ಧ ದೂರು ನೀಡಿರಲಿಲ್ಲ. ಬಳಿಕ ಸ್ವಿಚ್ ಆಫ್ ಮಾಡಿಕೊಂಡ ಆರೋಪಿ, ಬೆಂಗಳೂರು ಸೇರಿಕೊಂಡು ಅಲ್ಲಿಯೇ ಕೆಲಸ ಮಾಡುತ್ತಿದ್ದನಂತೆ.
ನೋಡುವವರೆಗೂ ನೋಡಿದ ಹೆಣ್ಣು ಹೆತ್ತವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದಾಖಲಾದ ದೂರಿನನ್ವಯ ಪೊಲೀಸರು ಕ್ರಮ ಕೈಗೊಂಡು ಬೆಂಗಳೂರಿನಲ್ಲಿದ್ದ ಆರೋಪಿಯನ್ನು ಅರೆಸ್ಟ್ ಮಾಡಿಕೊಂಡು ಬಂದು ಸ್ಟೇಷನ್ಗೆ ಹಾಜರು ಪಡಿಸಿದ್ದಾರೆ.
