ನರಹಂತಕ ಕಾಡಾನೆ ಸಾವು? ಕಾರ್ಯಾಚರಣೆ ವೇಳೆ ಮೃತಪಟ್ಟ ಕಾಡಾನೆ!

death of a wild elephant was reported from Chikkamagaluru district and the incident took place at Urubagai village in Mudigere taluk ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಸಾವಪ್ಪಿರುವ ಬಗ್ಗೆ ವರದಿಯಾಗಿದೆ, ಮೂಡಿಗೆರೆ ತಾಲ್ಲೂಕು ಉರುಬಗೆ ಗ್ರಾಮದಲ್ಲಿ ಘಟನೆ ನಡೆದಿದೆ

ನರಹಂತಕ ಕಾಡಾನೆ ಸಾವು? ಕಾರ್ಯಾಚರಣೆ ವೇಳೆ ಮೃತಪಟ್ಟ ಕಾಡಾನೆ!

CHIKKAMAGALURU  | WILD ELEPHANT  Dec 2, 2023 |  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ಒಂದು ಕಾಡಾನೆ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಸಾವು 

ಮೂಡಿಗೆರೆ ತಾಲ್ಲೂಕು ಉರುಬಗೆ ಗ್ರಾಮ ಪಂಚಾಯಿತಿಯ ಮೇಕನಗದ್ದೆ ಗ್ರಾಮದಲ್ಲಿ ಕಾಡಾನೆಯೊಂದನ್ನ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿತ್ತು. ಒಟ್ಟು ಮೂರು ಕಾಡಾನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಈಗಾಗಲೇ ಆದೇಶವನ್ನು ಸಹ ಮಾಡಿತ್ತು. ಅದರಂತೆ ಕಾರ್ಯಾಚಣೆ ನಡೆಯುತ್ತಿತ್ತು,. 

READ : ಚಿಕ್ಕಮಗಳೂರು ಆನೆ ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದಾಗ ನಡೀತು ಮನಕಲಕುವ ಈ ಘಟನೆ!

ಈ ನಡುವೆ ಇಲ್ಲಿ ಕಾಣಸಿಕ್ಕ ಕಾಡಾನೆಯನ್ನು ಸುತ್ತುವರಿದ ಅರಣ್ಯ ಇಲಾಖೆ ಸಿಬ್ಬಂದಿ, ಅದಕ್ಕೆ ತಜ್ಞರಿಂದ ಅರವಳಿಕೆ ಚುಚ್ಚುಮದ್ದನ್ನು ಶೂಟ್ ಮಾಡಿ ಇಂಜೆಕ್ಟ್​ ಮಾಡಿದ್ದರು. ಆದರೆ ಅರವಳಿಕೆ ಚುಚ್ಚುಮದ್ದು ಬಿದ್ದ ಬೆನ್ನಲ್ಲೆ ಕಾಡಾನೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ

READ : ಕಾಡಾನೆ ದಾಳಿ! ಆನೆ ನಿಗ್ರಹ ಪಡೆಯ ಸದಸ್ಯ ಸಾವು! ಇನ್ನಿಬ್ಬರಿಗೆ ಗಂಭೀರ ಗಾಯ!

ಮೂಲಗಳ ಪ್ರಕಾರ, ಗುಡ್ಡದ ಮೇಲಿದ್ದ ಆನೆ ಅರವಳಿಕೆ ಚುಚ್ಚುಮದ್ದು ಬಿದ್ದ ಮೇಲೆ ಕೆಳಕ್ಕೆ ಬಿದ್ದಿದೆ ಎನ್ನಲಾಗಿದ್ದು, ಇದೇ ಆನೆ ಕಾರ್ತಿಕ್​ ಗೌಡರವರ ಮೇಲೆ ದಾಳಿ ನಡೆಸಿತ್ತು ಎಂದು ನಂಬಲಾಗಿದೆ