ಬೆಂಗಳೂರು ಟೆಕ್ಕಿ ಮಿಸ್ಸಿಂಗ್! 3 ದಿನಗಳ ಬಳಿಕ ಪತ್ತೆ! ಬೆಳ್ತಂಗಡಿ ಭಾಗದ ಬೆಟ್ಟದ ಬುಡದಲ್ಲಿ ಸಿಕ್ಕ ಶವ

Bengaluru-based techie was found dead after falling from a ranizari in Mudigere taluk of Chikkamagaluru district.

ಬೆಂಗಳೂರು ಟೆಕ್ಕಿ ಮಿಸ್ಸಿಂಗ್!  3 ದಿನಗಳ ಬಳಿಕ ಪತ್ತೆ! ಬೆಳ್ತಂಗಡಿ ಭಾಗದ ಬೆಟ್ಟದ ಬುಡದಲ್ಲಿ ಸಿಕ್ಕ ಶವ

CHIKKAMAGALURU|  Dec 9, 2023 |  ನಾಪತ್ತೆಯಾಗಿದ್ದ ಟೆಕ್ಕಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿಯಲ್ಲಿ ಸಂಭವಿಸಿದೆ. 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು

ಇಲ್ಲಿನ ರಾಣಿಝರಿ ಬಳಿಯಲ್ಲಿ ನಾಪತ್ತೆಯಾಗಿದ್ದ ಯುವಕ ಅಲ್ಲಿಯೇ ಸಮೀಪದಲ್ಲಿರುವ ಬೆಟ್ಟವೇರಿ ಕೆಳಕ್ಕೆ ಬಿದ್ದಿದ್ದಾನೆ ಎನ್ನಲಾಗಿದ್ದು, ಆತನ ಶವ ಪ್ರಪಾತದಲ್ಲಿ ಪತ್ತೆಯಾಗಿದೆ. ಈತ ಬೆಂಗಳೂರು ಮೂಲದ ಭರತ್ ಎಂದು ತಿಳಿದುಬಂದಿದೆ. 

ರಾಣಿಝರಿ

ಕಳೆದ ಡಿಸೆಂಬರ್ ಆರರಂದು ಬೆಂಗಳೂರಿನಿಂದ ಈತ ರಾಣಿಝರಿಗೆ ಬಂದಿದ್ದ ಎಂಬ ಮಾಹಿತಿಯಿದೆ. ಬೆಂಗಳೂರು ನಿಂದ ಹೊರಟಿದ್ದ ಈತ ಟ್ರಕ್ಕಿಂಗ್ ಎಂದು ಹೇಳಿದ್ದ ಎನ್ನಲಾಗಿದೆ. ಆನಂತರ ಈತನ ಮೊಬೈಲ್ ನಾಟ್ ರೀಚಬಲ್​ ಆಗಿತ್ತು. ಅಲ್ಲದೆ ಬೈಕ್ ಹಾಗೂ ಸ್ಲಿಪ್ಪರ್​, ಟೀಶರ್ಟ್​ , ಐಡಿ ಕಾರ್ಡ್​ ಹಾಗೂ ಬ್ಯಾಗ್​ ರಾಣಿಝರಿ ಬಳಿ ಪತ್ತೆಯಾಗಿತ್ತು. ಇದು ಇನ್ನಷ್ಟು ಆತಂಕಕ್ಕೆ ದೂಡಿತ್ತು. 

ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ

ಇದೀಗ ಈತನ ಶವ ಪತ್ತೆಯಾಗಿದೆ ಎಂಬ ವರದಿ ಬಂದಿದೆ. ಈತನಿಗಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಬಣಕಲ್ ನ ಆರೀಫ್ ಹಾಗೂ ಅವರ ತಂಡದವರು ಹುಡುಕಾಡಿದ್ದರು. ಡ್ರೋಣ್ ಮೂಲಕ ಹಡುಕಾಟ ನಡೆದಿತ್ತು. 

ಬೆಳ್ತಂಗಡಿ ತಾಲ್ಲೂಕು 

ಇನ್ನೂ ತೀವ್ರ ಹುಡುಕಾಟದ ಬಳಿಕ ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಗೆ ಬರುವ ಬೆಟ್ಟದ ಬುಡದಲ್ಲಿ ಟೆಕ್ಕಿ ಶವ ಪತ್ತೆಯಾಗಿದೆ. ಬೆಂಗಳೂರು ಮೂಲದ ಭರತ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು ರಾಣಿಝರಿ ವೀವ್ ಪಾಯಿಂಟ್​ ನಿಂದಲೇ ಬಿದ್ದಿರುವ ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. 

ಕಂಪನಿ ಕೆಲಸದಿಂದ ತೆಗೆದುಹಾಕಿದ್ದ ಕಾರಣಕ್ಕೆ ಈ ರೀತಿ ಮಾಡಿಕೊಂಡಿರಬಹುದು ಎಂಬುದರ ಬಗ್ಗೆ ರಾಜ್ಯಮಟ್ಟದ ಮಾಧ್ಯಮವೊಂದು ವರದಿ ಮಾಡಿದೆ. ಈ ಬಗ್ಗೆ ಪೊಲೀಸ್ ಮೂಲಗಳು ಮಾಹಿತಿ ಸ್ಪಷ್ಟಪಡಿಸಿಲ್ಲ.