ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪಲ್ಟಿಯಾದ ಪಿಕಪ್ ವಾಹನ! ನಡೆದಿದ್ದೇಗೆ?

Pick-up vehicle overturns on Charmadi Ghat road Why did it happen?

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪಲ್ಟಿಯಾದ ಪಿಕಪ್ ವಾಹನ! ನಡೆದಿದ್ದೇಗೆ?

KARNATAKA NEWS/ ONLINE / Malenadu today/ Jun 28, 2023 SHIVAMOGGA NEWS

ಚಿಕ್ಕಮಗಳೂರು:  ತಮ್ಮ ಮನೆಗೆ ಪೋಲ್ಸ್​ಗಳನ್ನ ಹಾಗೂ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಪಿಕಪ್​ ವಾಹನವೊಂದು ಚಾರ್ಮಾಡಿ ಘಾಟಿಯಲ್ಲಿ ಪಲ್ಟಿಯಾದ ಘಟನೆ ಬಗ್ಗೆ ನಿನ್ನೆ ವರದಿಯಾಗಿದೆ. 

ಘಾಟಿ ರಸ್ತೆಯ ಮೇಲೆ ವಾಹನ ಪಲ್ಟಿಯಾದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಮಳೆಯಿಂದಾಗಿ ರಸ್ತೆ ತೇವಗೊಂಡಿತ್ತು. ಲೋಡ್​ ಗಾಡಿಯ ಟಯರ್​ ಆಲೇಖಾನ್​ ಬಳಿಯಲ್ಲಿ ರಸ್ತೆಯಿಂದ ಕೆಳಕ್ಕೆ ಇಳಿದಿದೆ. ಇದರಿಂದ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. 

ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.