30 ನಿಮಿಷದಲ್ಲಿ ನಾಟಿ ಕೋಳಿ ಸಾರಿನ ಜೊತೆ 10 ಮುದ್ದೆ ತಿಂದ 62 ವರ್ಷದ ಯಜಮಾನ

62-year-old man eats 10 mudde with chicken broth planted in 30 minutes in Mandya

30 ನಿಮಿಷದಲ್ಲಿ ನಾಟಿ ಕೋಳಿ ಸಾರಿನ ಜೊತೆ 10 ಮುದ್ದೆ ತಿಂದ 62 ವರ್ಷದ ಯಜಮಾನ
62-year-old man eats 10 mudde with chicken broth planted in 30 minutes in Mandya

MANDYA|  Jan 3, 2024  |  ಸಿರಿಧಾನ್ಯ ಹಬ್ಬದ ಪ್ರಯುಕ್ತ ನಗರದಲ್ಲಿ ಮಂಗಳವಾರ ಮಂಡ್ಯದಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ಸಾರು ಊಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ದೆಯಲ್ಲಿ ಹಿರಿಯ ಯಜಮಾನರೊಬ್ಬರು ಬರೋಬ್ಬರಿ 10 ಮುದ್ದೆಗಳನ್ನ ತಿಂದು ಪ್ರಶಸ್ತಿಗೆದ್ದಿದ್ದಾರೆ. 

ರಾಗಿ ಮುದ್ದೆ , ನಾಟಿ ಕೋಳಿ ಸಾರು

ಸ್ಪರ್ಧೆಗೆ 30 ನಿಮಿಷಗಳ ಕಾಲಾವಕಾಶ ನಿಗದಿಪಡಿಸಿ, ಈ ಅವಧಿಯಲ್ಲಿ ಯಾರು ಹೆಚ್ಚು ಮುದ್ದೆ ತಿನ್ನುತ್ತಾರೆ ಎನ್ನುವುದೇ ನಿಯಮವಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಈರೇಗೌಡ (62), 30 ನಿಮಿಷಗಳಲ್ಲಿ ಒಟ್ಟು 2.7 ಕೆ.ಜಿ. ತೂಕದ 10 ಮುದ್ದೆಗಳನ್ನು ಉಂಡು ಪ್ರಥಮ ಬಹುಮಾನ ಪಡೆದುಕೊಂಡರು.

ಅರಕೆರೆಯ ದಿಲೀಪ್ ಎಂಬುವರು 6 ಮುದ್ದೆ ತಿಂದು ಎರಡನೇ ಬಹುಮಾನ ಗಳಿಸಿದರು. ಪ್ರಥಮ ಬಹುಮಾನವಾಗಿ 3,000 ರು. ಹಾಗೂ ದ್ವಿತೀಯ ಬಹುಮಾನವಾಗಿ 2,000 ರು.ಗಳನ್ನು ನೀಡಿ, ವಿಜೇತರನ್ನು ಗೌರವಿಸಲಾಯಿತು. ಸ್ಪರ್ಧೆಗೆ 500 ರು. ಪ್ರವೇಶ ಶುಲ್ಕವಿತ್ತು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ 9 ಜನ ನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.