ಅಮೀರ್ ಅಹಮದ್ ಸರ್ಕಲ್ನಿಂದ ಕೆಳಗೆ, K.R. ಪುರಂ ರಸ್ತೆಯಲ್ಲಿರುವ ಲಾಡ್ಜ್ ಮೇಲೆ ಪೊಲೀಸರ ರೇಡ್! ಸಿಕ್ಕಿಬಿದ್ರಾ ಸ್ಟೂಡೆಂಟ್ಸ್!
Police raid on lodge on KR Puram Road, down from Ameer Ahmed Circle

SHIVAMOGGA | POLICE RAID Dec 2, 2023 | ಹಳೇ ಶಿವಮೊಗ್ಗ ಭಾಗದಲ್ಲಿ ಇವತ್ತು ಪೊಲೀಸರು ರೇಡ್ ನಡೆಸಿದ್ದಾರೆ. ಲಾಡ್ಜ್ವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಸ್ತಿದ್ದ ಆರೋಪವೊಂದು ಕೇಳಿಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಕೆ.ಆರ್.ಪುರಂ ರಸ್ತೆಯಲ್ಲಿರುವ ಲಾಡ್ಜ್ ಮೇಲೆ ರೇಡ್ ಮಾಡಿದ್ದಾರೆ. ಈ ವೇಳೆ ಕಾಲೇಜು ವಿದ್ಯಾರ್ಥಿಗಳು ಲಾಡ್ಜ್ನಲ್ಲಿ ಪತ್ತೆಯಾಗಿದ್ದು ಅವರನ್ನು ಪೊಲೀಸರು ವಿಚಾರಣೆ ನಡೆಸ್ತಿರುವುದಾಗಿ ತಿಳಿದು ಬಂದಿದೆ
READ : ಶಾಸಕರ ಅನುಪಸ್ಥಿತಿಯ ನಡುವೆ ಬೇಳೂರು ಗೋಪಾಲಕೃಷ್ಣರವರ ಕಚೇರಿಗೆ ಭೇಟಿಕೊಟ್ಟ ಮಧು ಬಂಗಾರಪ್ಪ!
ಲಾಡ್ಜ್ ಮೇಲೆ ಪೊಲೀಸರ ರೇಡ್
ಇಲ್ಲಿನ ಕೆಆರ್ ಪುರಂ ರಸ್ತೆಯಲ್ಲಿರುವ ಬ್ಲೂ ಕ್ರಿಸ್ಟಲ್ ಲಾಡ್ಜ್ ಮೇಲೆ ಪೊಲೀಸರು ರೇಡ್ ನಡೆಸಿದ್ದಾರೆ. ಈ ಲಾಡ್ಜ್ಗೆ ಯುವಕ ಯುವತಿಯರು ಹೋಗಿ ಬರುತ್ತಿರುವುದನ್ನ ಸ್ಥಳೀಯರು ಕಂಡಿದ್ದಾರೆ. ಈ ಬಗ್ಗೆ ಅನುಮಾನಗೊಂಡಿದ್ದರು. ಈ ಮಧ್ಯೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಲಾಡ್ಜ್ಗೆ ಬರುವುದನ್ನ ಕಂಡು ವಿಡಿಯೋ ಮಾಡಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದ ಪೊಲೀಸರು ರೇಡ್ ನಡೆಸಿದ್ದು ಸದ್ಯ ವಿಚಾರಣಾ ಹಂತದಲ್ಲಿದೆ. ಇನ್ನೂ ಸ್ತಳೀಯ ವ್ಯಕ್ತಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ ಸೇರಿದ ಜಾಗ ಇದಾಗಿದ್ದು, ಮಂಗಳೂರು ಮೂಲದವರೊಬ್ಬರು ಲಾಡ್ಜ್ ನಡೆಸ್ತಿರುವುದಾಗಿ ತಿಳಿದುಬಂದಿದೆ. ದೊಡ್ಡಪೇಟೆ ಇನ್ಸ್ಪೆಕ್ಟರ್ ರವಿ ಸಂಗನಗೌಡ ನೇತೃತ್ವದಲ್ಲಿ ಈ ರೇಡ್ ನಡೆದಿದೆ