MALENADUTODAY.COM | SHIVAMOGGA NEWS
ಶಿವವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಬರುವ ಟ್ರೀಪಾರ್ಕ್ನ ಸಮೀಪ ದರೋಡೆಯೊಂದು (Dacoity) ನಡೆದಿರುವ ಬಗ್ಗೆ ವರದಿಯಾಗಿದೆ. ತರಿಕೆರೆಯ ವಸಂತ್ ಎಂಬವರು ಕಾರಿನಲ್ಲಿ ಮಾರಿಜಾತ್ರೆಗೆ ಹೋಗುತ್ತಿದ್ದ ವೇಳೆ ಅವರನ್ನು ಟ್ರೀಪಾರ್ಕ್ ಬಳಿ ಅಡ್ಡಗಟ್ಟಲಾಗಿದೆ. ಕಾರಿನಲ್ಲಿ ಹೋಗುತ್ತಿದ್ದವರನ್ನ ತಡೆದು ಕುತ್ತಿಗೆಗೆ ಮಚ್ಚು ಹಿಡಿದು ಕ್ಯಾಶ್ ಹಾಗೂ ಚಿನ್ನವನ್ನು ದೋಚಿ ಹೋಗಿದ್ದಾರೆ.
ಮೂತ್ರ ವಿಸರ್ಜನೆಗೆ ಎಂದು ಕಾರು ನಿಲ್ಲಿಸಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮೂತ್ರ ವಿಸರ್ಜನೆ ಮುಗಿಸಿ ವಾಪಸ್ ಕಾರು ಹತ್ತುವಾಗ ಅಲ್ಲಿಗೆ ಡಿಯೋ ಬೈಕ್ನಲ್ಲಿ ಬಂದ ಇಬ್ಬರು ವಸಂತ್ರನ್ನ ಮಚ್ಚು ತೋರಿಸಿ ಹೆದರಿಸಿದ್ದಾರೆ. ಬಳಿಕ ಅಲ್ಲಿಂದ ಸಾಗರ ಕಡೆಗೆ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ಆಗಿದೆ.

ಇನ್ನೂ ಲಯನ್ ಸಫಾರಿಯ ಸುತ್ತಮುತ್ತ ಇಂತಹ ದರೋಡೆ ಕೃತ್ಯಗಳು ನಡೆಯುತ್ತಲೇ ಇದ್ದು, ಈ ಭಾಗದಲ್ಲಿ ಬೀಟ್ ವ್ಯವಸ್ತೇಯು ಸಹ ಸುಸೂತ್ರವಾಗಿಲ್ಲ. ವಾಹನಗಳು ಸೈಡಿಗೆ ನಿಲ್ಲುವುದನ್ನ ಗಮನಿಸುವ ದುಷ್ಕರ್ಮಿಗಳು ಅವರನ್ನು ದೋಚಿ ಎಸ್ಕೇಪ್ ಆಗುತ್ತಿದ್ದಾರೆ. ಈ ಹಿಂದಿನ ಹಲವು ಪ್ರಕರಣಗಳು ಸಹ ಇದುವರೆಗೂ ಇತ್ಯರ್ಥ ಕಂಡಿಲ್ಲ. ಕಳ್ಳರಿಗೆ ಇದು ವರದಾನವಾಗಿ ಕಾಣುತ್ತಿದ್ದು, ಸಾರ್ವಜನಿಕರನ್ನು ದೋಚಿ ಆರೋಪಿಗಳು ಎಸ್ಕೇಪ್ ಆಗುತ್ತಿದ್ದಾರೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
