ಸಾಗರ ಪೇಟೆ ಸ್ಟೇಷನ್​ನಲ್ಲಿ ನಡೀತು ಈ ವಿಶೇಷ ಕಾರ್ಯಕ್ರಮ

Malenadu Today

ಸಾಗರ ಸುದ್ದಿ :  ಜನ ಕಾಯುವ ಕೆಲಸ ಪೊಲೀಸ್​ ಕೆಲಸ. ದಿನವಿಡಿ ಡ್ಯೂಟಿಯಲ್ಲಿ ಮೈಮರೆಯುವ ಪೊಲೀಸರು , ತಮ್ಮ ಸಹೋಧ್ಯೋಗಿಗಳ ಯೋಗಕ್ಷೇಮ ವಿಚಾರಿಸುವುದು ಅಪರೂಪವಾಗಿರುತ್ತದೆ. ಅಂತಹ ಸನ್ನಿವೇಶದ ನಡುವೆಯು ಸಾಗರ ಟೌನ್​ ಪೊಲೀಸರು ತಮ್ಮ ಸಿಬ್ಬಂದಿಯ ಸೀಮಂತ ಆಚರಿಸಿ , ತುಂಬು ಗರ್ಭಿಣಿಯನ್ನು ಆಶೀರ್ವದಿಸಿದ್ದಾರೆ. 

ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಶಿವಮೊಗ್ಗ ಜಿಲ್ಲೆ ಸಾಗರ ಪೇಟೆ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಶ್ರೀಮತಿ ಶಿಲ್ಪಾ  ತುಂಬು ಗರ್ಭಿಣಿ. ಇವರಿಗೆ ಸೀಮಂತ ಕಾರ್ಯಕ್ರಮವನ್ನು ಠಾಣೆಯಲ್ಲೇ ಮಾಡುವ ನಿರ್ಧಾರ, ಠಾಣೆಯ ಸಿಬ್ಬಂದಿ ಕೈಗೊಂಡಿದ್ದರು. ಅದಕ್ಕೆ ಮೇಲಾಧಿಕಾರಿಗಳು ಸಹ ಹೂ ಮಾಡಿ..ಮಾಡಿ ಒಳ್ಳೆ ಕೆಲಸ ಎಂದಿದ್ದರು.

ಹಾಗಾಗಿ ಅಲ್ಲಿಯ ಮಹಿಳಾ ಪೊಲೀಸರು, ಸಿಬ್ಬಂದಿ ಅಚ್ಚುಕಟ್ಟಿನ ಕಾರ್ಯಕ್ರಮವೊಂಧನ್ನ ಸಿದ್ಧಪಡಿಸಿದರು. ಅಂದುಕೊಂಡಂತೆ ನಿನ್ನೆ ಸೋಮವಾರ ಶಿಲ್ಪಾ ಅವರ ಸೀಮಂತ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನೆರವೇರಿತು.ಬಸರಿ ಬಯಕೆಯ ತಿನಿಸುಗಳು ಸೇರಿದಂತೆ ವಿವಿಧ ಉಡುಗೊರೆಗಳ ಜೊತೆ ಚೆಂದದ ಸೀಮಂತ ಸಿಂಪಲ್ ಆಗಿ ನಡೆಯಿತು. 

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp link

Share This Article