ಪೊಲೀಸ್ ಸ್ಟೇಷನ್​ಗೂ ಬಂತು ಕ್ಯೂ ಆರ್​ ಕೋಡ್! ಕಂಪ್ಲೆಂಟ್ ಕೇಳದಿದ್ದರೇ ಮೊಬೈಲ್​ನಲ್ಲಿಯೇ ನೀಡಬಹುದು ರೆಸ್ಪಾನ್ಸ್! ಏನಿದು ಹೊಸ ವ್ಯವಸ್ಥೆ ! ಎಲ್ಲಿ ಜಾರಿ?

Malenadu Today

KARNATAKA NEWS/ ONLINE / Malenadu today/ Jul 2, 2023 SHIVAMOGGA NEWS

ಪೊಲೀಸ್ ಸ್ಟೇಷನ್​ಗೆ ಹೋದಾಗ ಸರಿಯಾದ ರೆಸ್ಪಾನ್ಸ್ ಸಿಗದ್ದಿದ್ದರೇ ಬೇಸರ ಆಗುತ್ತೆ, ನ್ಯಾಯ ಕೇಳಿಬಂದಾಗ, ಅಸಡ್ಡೆ ಮಾಡಿದರೆ, ಮುಂದೇನು ಮಾಡೋದು, ನ್ಯಾಯ ಯಾರನ್ನ ಕೇಳೋದು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಅಂತಹ ಸನ್ನಿವೇಶದಲ್ಲಿ ಪೊಲೀಸರ ರೆಸ್ಪಾನ್ಸ್ ಹೀಗಿತ್ತು ಅಂತಾ ಗೌಪ್ಯವಾಗಿ ಮೊಬೈಲ್​ನ ಮೂಲಕ ಎಸ್​ಪಿಯವರಿಗೆ ನೇರವಾಗಿ ತಿಳಿಸಬಹುದಾದ ವ್ಯವಸ್ಥೆಯೊಂದನ್ನ ಚಿಕ್ಕಮಗಳೂರು ಪೊಲೀಸರು ಜಾರಿಗೆ ತಂದಿದ್ದಾರೆ. ಇದು ಇತರೇ ಜಿಲ್ಲೆಗಳಿಗೂ ವ್ಯಾಪಿಸುವ ಸಾಧ್ಯತೆಯು ಇದೆ. 

ಹೇಗಿದೆ ನೋಡಿದ್ರಾ ಕಿಚ್ಛಾ ಸುದೀಪ್​ ರ ಹೊಸ ಸಿನಿಮಾ ಟೀಸರ್​!

ಈ ಸಂಬಂಧ ಚಿಕ್ಕಮಗಳೂರು ಪೊಲೀಸರು ಪತ್ರಿಕಾ ಪ್ರಕಟಣೆಯನ್ನು ಸಹ ನೀಡಿದ್ದು, ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸರ ಸಹಾಯ ಬಯಸಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಹೋದವರು ತಮಗಾದ ಅನುಭವಗಳನ್ನು ಆ ಠಾಣೆಯಲ್ಲಿರುವ ಕ್ಯು.ಆರ್ ಕೋಡ್ (Q.R code) ಬಳಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ವ್ಯವಸ್ಥೆ ಜಾರಿಗೆ ತಂದಿದ್ದು ಈ ಕ್ಯು.ಆರ್ ಕೋಡ್‌ಗೆ “ಅವಲೋಕನ” ಎಂದು ಹೆಸರಿಸಲಾಗಿದೆ ಎಂದು ತಿಳಿಸಿದ್ದಾರೆ.  

112 ವಾಹನ ಡಿಕ್ಕಿ ಪಾದಚಾರಿ ಸಾವು! ಸಾಗರ ಗ್ರಾಮಾಂತರ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದ್ದೇನು?

ದೂರು ದಾಖಲಿಸಲು ಅಥವಾ ಪೊಲೀಸರ ನೆರವು ಬಯಸಿ ಪೊಲೀಸ್ ಠಾಣೆಗೆ ಹೋದವರು ಠಾಣೆಯಲ್ಲಿರುವ ಕ್ಯುಆರ್ ಕೋಡ್ ಅನ್ನು ತಮ್ಮ ಮೊಬೈಲ್‌ನಲ್ಲಿರುವ ಕ್ಯು.ಆರ್ ಕೋಡ್ (Q.R code) ಸ್ಕ್ಯಾನರ್ ಅನ್ನು (ಉ.ದಾ: ಗೂಗಲ್ ಲೆನ್ಸ್, ಕ್ರೋಮ್, ಕ್ಯು.ಆರ್ ಕೋಡ್ ಸ್ಕ್ಯಾನರ್ ಇತ್ಯಾದಿ) ಬಳಸಿ ಸ್ಕ್ಯಾನ್ ಮಾಡಿದ್ದಲ್ಲಿ ಅವಲೋಕನ ಪುಟದ ಲಿಂಕ್ ತೆರೆದುಕೊಳ್ಳುತ್ತದೆ. ಅದರಲ್ಲಿ ಅವರು ಹೋಗಿರುವ ಪೊಲೀಸ್ ಠಾಣೆಯ ಹೆಸರು ಅಲ್ಲಿಗೆ ಹೋದ ಉದ್ದೇಶ ತಮ್ಮ ಹೆಸರು, ತಮ್ಮ ಮೊಬೈಲ್ ಸಂಖ್ಯೆ, ದೂರಿಗೆ ಸ್ವೀಕೃತಿ ನೀಡಲಾಯಿತೇ ಎಂಬ ಮಾಹಿತಿಯನ್ನು ದಾಖಲಿಸಬಹುದಾಗಿದೆ.

ವಿಶೇಷವೆಂದರೇ ಪೊಲೀಸ್ ಠಾಣೆಗೆ ಹೋದಾಗ ಆ ಠಾಣೆಯ ಪೊಲೀಸರು ವರ್ತಿಸಿದ ರೀತಿಯನ್ನು ತಿಳಿಸಬಹುದಾಗಿದೆ. ಆ ವರ್ತನೆ ಅತ್ಯತ್ತಮವಾಗಿತ್ತೋ?, ಉತ್ತಮವಾಗಿತ್ತೋ?, ಸಾಧಾರಣವೋ? ಅಥವಾ ತೃಪ್ತಿಕರವಾಗಿಲ್ಲದಿದ್ದರೇ ಹಾಗೆಂದೇ ನಮೂದಿಸಲೂ ಅವಕಾಶವಿದೆ. ದೂರುದಾರರು ಕ್ಯು.ಆರ್ ಕೋಡ್ ಸ್ಕ್ಯಾನ್ ಮಾಡಿ ನೀಡಿದ ಈ ಎಲ್ಲಾ ಪ್ರತಿಕ್ರಿಯೇ ನೇರವಾಗಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವ ಅಧಿಕೃತ ಘಟಕಕ್ಕೆ ತಲುಪಿ ಅಲ್ಲಿಂದ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಬರುತ್ತದೆ. ಇದನ್ನು ಗೌಪ್ಯವಾಗಿಡಲಿದ್ದು, ಅದನ್ನು ಬಹಿರಂಗಪಡಿಸಲಾಗುವುದಿಲ್ಲ.

ಪೊಲೀಸ್ ಠಾಣೆಗೆ ಹೋದ ಸಾರ್ವಜನಿಕರು ನಿರ್ಭಯವಾಗಿ ತಮ್ಮ ಠಾಣೆಯಲ್ಲಿ ಆದ ಅನುಭವದ ವಿವರಗಳನ್ನು ನೀಡಬಹುದೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಉಮಾ ಪ್ರಶಾಂತ್,  ಐ.ಪಿ.ಎಸ್. ರವರು ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಪ್ರತಿ ಪೊಲೀಸ್ ಠಾಣೆ ಮತ್ತು ಕಚೇರಿಗಳನ್ನು ಜನಸ್ನೇಹಿ ಆಗಿಸುವ ಉದ್ದೇಶದಿಂದ ಈ ಮಾಹಿತಿಯನ್ನು ಪಡೆಯಲಾಗುವುದು. ಮತ್ತು ಕಹಿ ಅನುಭವಗಳಾಗಿದ್ದಲ್ಲಿ ಅದರ ಬಗ್ಗೆ ಪರಿಶೀಲಿಸಿ ಮತ್ತೆ ಅದು ಮರುಕಳಿಸದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Malenadu Today


BIG BREAKING NEWS / ಶಿವಮೊಗ್ಗದಲ್ಲಿ ಮೂರು ದಿನ ಅಸಾಧಾರಣ ಭಾರೀ ಮಳೆ ! ಯಲ್ಲೋ, ಆರೆಂಜ್, ರೆಡ್ ಅಲರ್ಟ್ ಘೋಷಣೆ! ಪೂರ್ತಿ ವಿವರ ಇಲ್ಲಿದೆ!

ಮಲ್ನಾಡ್​ನಲ್ಲಿ ಮಳೆಯಿಲ್ಲ ಎಂಬ ಕೊರಗಿನ ನಡುವೆ ಹವಾಮಾನ ಇಲಾಖೆ ಬಣ್ಣ ಬಣ್ಣದ ಎಚ್ಚರಿಕೆಯ ಮುನ್ಸೂಚನೆಯನ್ನು ನೀಡಿದೆ. ಜುಲೈ 3 ರಿಂದ 5 ನೇ ತಾರೀಖಿನವರೆಗೂ ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಐಎಂಡಿ ಬೆಂಗಳೂರು (IMd banglore) ವೆಬ್​ಸೈಟ್​ನಲ್ಲಿ ನೀಡಿರುವ ಪ್ರಕಟಣೆಯ ಪ್ರಕಾರ, 4ನೇ ಜುಲೈ 2023 ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜುಲೈ 5, 2023 ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳ ನಿರ್ಧಿಷ್ಟ ಸ್ಥಳಗಳಲ್ಲಿ ಭಾರಿಯಿಂದ ಅತಿ ಭಾರೀ ಒಮ್ಮೊಮ್ಮೆ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ.ಇನ್ನೂ ಜುಲೈ ಮೂರರಂದು ಯಲ್ಲೋ ಅಲರ್ಟ್ ನೀಡಲಾಗಿದ್ದು, ಜುಲೈ ನಾಲ್ಕರಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಜುಲೈ ಐದರಂದು ರೆಡ್​ ಅಲರ್ಟ್ ಘೋಷಿಸಲಾಗಿದೆ. ಐಸೋಲೇಟೆಡ್​ ಪ್ಲೇಸ್​ಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯವಾಗಿ ಜಿಲ್ಲಾವಾರು ವಾರ್ನಿಂಗ್​ ಪ್ರಕಟಣೆಯಲ್ಲಿ ಜುಲೈ 3 ರಂದು ಶಿವಮೊಗ್ಗ ಜಿಲ್ಲೆಯ ಅನೇಕ ಕಡೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಜುಲೈ 4 ರಂದು ಜಿಲ್ಲೆ 75 ರಷ್ಟು ಕಡೆಗಳಲ್ಲಿ 115 ಮಿ.ಮೀ ನಿಂದ 204 ಮಿಲಿಮೀಟರ್​ನಷ್ಟು ಮಳೆಯಾಗುವ ಸಾಧ್ಯತೆಯನ್ನು ತಿಳಿಸಲಾಗಿದ್ದು ಆರೆಂಜ್ ಅಲರ್ಟ್ ತಿಳಿಸಲಾಗಿದೆ. ಇನ್ನೂ ಜುಲೈ 5 ಅಸಾಧಾರಣ ಭಾರೀ ಮಳೆ ಎಂದು ತಿಳಿಸಿರುವ ಹವಾಮಾನ ಇಲಾಖೆ 204 ಮಿಲೀಮೀಟರ್​ಗಳಿಗಿಂತಲೂ ಅಧಿಕ ಮಳೆಯಾಗಲಿದೆ ಎಂದು ತಿಳಿಸಿ ರೆಡ ಅಲರ್ಟ್ ಘೋಷಿಸಿದೆ. ನಿನ್ನೆ ಹೊರಡಿಸಿರುವ  ಪತ್ರಿಕಾ ಪ್ರಕಟಣೆಯಲ್ಲಿ ಚಿಕ್ಕಮಗಳೂರು ,ಚಾಮರಾಜನಗರ,ಹಾಸನ, ಮೈಸೂರು,ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. 

Share This Article