ಮಲೆನಾಡ ಗ್ಯಾಂಗ್‌ ವಾರ್‌ ಮೀರಿಸಿದ ಉಡುಪಿ ಕಾರ್‌ ವಾರ್‌ ವಿಡಿಯೋ !

A video of a gang war between two rival gangs in Udupi on May 18th has gone viral. The video shows the gangs fighting with longs and crashing their cars into each other. 

ಮಲೆನಾಡ ಗ್ಯಾಂಗ್‌ ವಾರ್‌ ಮೀರಿಸಿದ ಉಡುಪಿ ಕಾರ್‌ ವಾರ್‌ ವಿಡಿಯೋ !
Udupi gang war

SHIVAMOGGA | MALENADUTODAY NEWS | May 25, 2024  ಮಲೆನಾಡು ಟುಡೆ 

ಕಳೆದ ಮೇ 18 ರಂದು ಉಡುಪಿಯಲ್ಲಿ ನಡೆದಿದ್ದು ಎನ್ನಲಾದ ರೌಡಿಗಳ ಗ್ಯಾಂಗ್‌ ವಾರ್‌ ವಿಡಿಯೋವೊಂದು ಇವತ್ತು ವೈರಲ್‌ ಆಗಿದ್ದು, ದೃಶ್ಯ ಭೀಬತ್ಸವಾಗಿದೆ. ಇನ್ನೂ ಘಟನೆ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 

ವಿಡಿಯೋದ ವಿವರ ನೋಡುವುದಾದರೆ, ಉಡುಪಿಯ ಕುಂಜಿಬೆಟ್ಟು ರಸ್ತೆಯಲ್ಲಿ ನಡೆದ ಘಟನೆ ಇದಾಗಿದೆ. ಮೇ 18 ರಂದು ನಡೆದ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದರು. ಅದರ ದೃಶ್ಯ ಇದೀಗ ಬಯಲಿಗೆ ಬಂದಿದೆ. 

ಕಾಪು ತಾಲ್ಲೂಕಿನ ಎರಡು ರೌಡಿ ತಂಡಗಳ ನಡುವೆ ಹೊಡೆದಾಟ ನಡೆದಿದ್ದು ಎರಡು ಕಾರುಗಳಲ್ಲಿ ರೌಡಿಶೀಟರ್‌ಗಳು ಮುಖಾಮುಖಿಯಾಗಿದ್ದಾರೆ. ಸರ್ಕಲ್‌ ವೊಂದರ ತಿರುವಿನಲ್ಲಿ ಎದುರಾಗುವ ರೌಡಿಗಳ ತಂಡ ಕಾರುಗಳನ್ನ ಪರಸ್ಪರ ಡಿಕ್ಕಿ ಹೊಡೆಸಿಕೊಂಡು ಲಾಂಗ್‌ಗಳಿಂದ ಹೊಡೆದಾಡುತ್ತಾರೆ. 

ಈ ನಡುವೆ ಓರ್ವನ ಮೇಲೆ ಕಾರನ್ನ ಹತ್ತಿಸಲಾಗುತ್ತದೆ ಅಷ್ಟೆ ಅಲ್ಲದೆ ಲಾಂಗ್‌ಗಳಿಂದ ಆತನ ಮೇಲೆ ಹಲ್ಲೆ ಮಾಡಲಾಗುತ್ತದೆ. ಸದ್ಯ ಈ ವಿಡಿಯೋ ವೈರಲ್‌ ಆಗುತ್ತಿದ್ದು, ಜನರು ಪೊಲೀಸ್‌ ವ್ಯವಸ್ಥೆಯು ವೈಫಲ್ಯಗೊಳ್ಳುತ್ತಿದೆಯೇ ಎಂದುಆತಂಕ ವ್ಯಕ್ತಪಡಿಸುತ್ತಿದ್ದಾರೆ. 

A video of a gang war between two rival gangs in Udupi on May 18th has gone viral. The video shows the gangs fighting with longs and crashing their cars into each other.