ದಿಢೀರ್ ದೆಹಲಿಗೆ ತೆರಳಿದ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ! ಕಾರಣದ ವಿವರ ಇಲ್ಲಿದೆ

SHIVAMOGGA  |  Jan 10, 2024  | ಮಹತ್ವದ ಬೆಳವಣೆಗೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ದೆಹಲಿಗೆ ದೌಡಾಯಿಸಿದ್ದಾರೆ. 

ಪುತ್ರ ಕೆ.ಇ.ಕಾಂತೇಶ್​ ರವರಿಗೆ ಲೋಕಸಭೆ ಟಿಕೆಟ್ ಕೊಡಿಸುವ ಸಲುವಾಗಿ ವರಿಷ್ಟರ ಜೊತೆ ಮಾತುಕತೆ ನಡೆಸಲು ಅವರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. 

ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಮಗನನ್ನು ಸ್ಪರ್ಧೆಗಿಳಿಸಲು ಹಿರಿಯ ನಾಯಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಯಸಿದ್ದಾರೆ. 

READ : ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರ ಸಾವು! ಸೊರಬದಲ್ಲಿ ಇಬ್ಬರು ಮಿಸ್ಸಿಂಗ್​ !

ಈ ಹಿನ್ನೆಲೆಯಲ್ಲಿ, ವರಿಷ್ಠರ ಬಳಿ ಈ ಬಗ್ಗೆ ಪ್ರಸ್ತಾಪಿಸಲು ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಸೋಮವಾರ ನಡೆದ ಪ್ರಮುಖರ ಸಭೆಯಲ್ಲಿ ಪುತ್ರನಿಗೆ ಹಾವೇರಿ ಟಿಕೆಟ್ ವಿಚಾರ ಪ್ರಸ್ತಾಪಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್  (arun singh)ಸೇರಿ ಯಾರೊಬ್ಬರೂ ಸ್ಪಂದಿಸದ ಕಾರಣ ದೆಹಲಿಗೆ ದೌಡಾಯಿಸಿದ್ದಾರೆ ಎಂದು ರಾಜ್ಯ ಮಾಧ್ಯಮವೊಂದು ವರದಿ ಮಾಡಿದೆ. 

ಇನ್ನೊಂದೆಡೆ ಮಾಜಿ ಮಂತ್ರಿ ವಿ.ಸೋಮಣ್ಣ ದೆಹಲಿಗೆ ತೆರಳಿದ್ದಾರೆ. ಕಾಲಾವಕಾಶ ಪಡೆದು ವರಿಷ್ಠರನ್ನು ಭೇಟಿ ಮಾಡಲು ಮುಂದಾಗಿರುವ ಅವರು, ಒಂದೆರಡು ದಿನ ಅಲ್ಲಿಯೇ ಬಿಡಾರ ಹೂಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Leave a Comment