ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರ ಸಾವು! ಸೊರಬದಲ್ಲಿ ಇಬ್ಬರು ಮಿಸ್ಸಿಂಗ್​ !

Bike rider killed after being hit by unidentified vehicle Two missing in Soraba!

ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರ ಸಾವು! ಸೊರಬದಲ್ಲಿ ಇಬ್ಬರು ಮಿಸ್ಸಿಂಗ್​ !
Bike rider killed after being hit by unidentified vehicle Two missing in Soraba!

SHIVAMOGGA  |  Jan 10, 2024  |  ಶಿವಮೊಗ್ಗ ದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್  ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ವಾಹನದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

ಸ್ಟೇಷನ್​ ವ್ಯಾಪ್ತಿಯಲ್ಲಿ  ಬೈಕ್​ ಅಪಘಾತವಾದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದಾಗ ಬೈಕ್ ಸವಾರ ಸಾವನ್ನಪ್ಪಿರುವುದು ಗೊತ್ತಾಗಿದೆ. ಇನ್ನೂ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ. 

ಕಾಣೆಯಾಗಿದ್ದಾರೆ 

ಸೊರಬ: ಪ್ರತ್ಯೇಕ ಪ್ರಕರಣದಲ್ಲಿ ತಾಲೂಕಿನ ಇಬ್ಬರು ವ್ಯಕ್ತಿಗಳು ನಾವತ್ತೆಯಾದ ಘಟನೆ ನಡೆದಿದೆ. ಸೊರಬ ತಾಲೂಕಿನ ಹಿರೇಶಕುನ ಗ್ರಾಮದ ಜಗದೀಶ್ (30) ಕಾಣೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ ಎಂದು ಅವರ ತಂದೆ ಹಿರಿಯಪ್ಪ ಸೊರಬ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಇನ್ನೊಂದು ಘಟನೆಯಲ್ಲಿ ತಾಲೂಕಿನ ಗುಂಜನೂರಿನ ಶ್ರೀಕಾಂತ್ (53) ಈ ನಾಪತ್ತೆಯಾಗಿದ್ದಾರೆ ಎಂದು ಅವರ ಮಗ ಕೃಷ್ಣಮೂರ್ತಿಯವರು  ಸೊರಬ ಪೋಲೀಸ್ ಠಾಣೆಗೆ ನೀಡಿದ್ದಾರೆ.  ಸುಳಿವು ಕಂಡುಬಂದಲ್ಲಿ: 08182- 261400, 94808 03323, 9480803339, 9480803368 ಮಾಹಿತಿ ತಿಳಿಸಲು ಪೊಲೀಸ್ ಇಲಾಖೆ ಕೋರಲಾಗಿದೆ.