ಕಾಡಾನೆ ದಾಳಿಗೆ ತುತ್ತಾಗಿದ್ದ ಡಾ.ವಿನಯ್ ಈಗ ಹೇಗಿದ್ದಾರೆ ಗೊತ್ತಾ! ಒಂದು ತಿಂಗಳಿನಲ್ಲಿ ವಿಧಿಯನ್ನೆ ಗೆದ್ದ ವನ್ಯಜೀವಿ ವೈದ್ಯ!

Do you know how Dr. Vinay, who was attacked by a wild elephant

ಕಾಡಾನೆ ದಾಳಿಗೆ ತುತ್ತಾಗಿದ್ದ ಡಾ.ವಿನಯ್ ಈಗ ಹೇಗಿದ್ದಾರೆ ಗೊತ್ತಾ! ಒಂದು ತಿಂಗಳಿನಲ್ಲಿ ವಿಧಿಯನ್ನೆ ಗೆದ್ದ ವನ್ಯಜೀವಿ ವೈದ್ಯ!

KARNATAKA NEWS/ ONLINE / Malenadu today/ May 25, 2023 SHIVAMOGGA NEWS

Malenadu today/ ಕಾಡಾನೆ ದಾಳಿಗೆ ತುತ್ತಾಗಿದ್ದ ವನ್ಯಜೀವಿ ಡಾಕ್ಟರ್​ ವಿನಯ್​ ಈಗ ಹೇಗಿದ್ಧಾರೆ. ಈ ಬಗ್ಗೆ ಮಲೆನಾಡು ಟುಡೆ ತಂಡಕ್ಕೆ ಹಲವರು ವಿಚಾರಿಸಿದ್ದರು. ಓದುಗರ ಪ್ರಶ್ನೆಗೆ ಉತ್ತರ ಇಲ್ಲಿದೆ.  ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದ ಡಾ. ವಿನಯ್​ ಈಗೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸಾಕಷ್ಟು ಗುಣಮುಖವಾಗಿದೆ. ವಿಶೇಷ ವಾರ್ಡ್​ಗೆ ಅವರನ್ನ ಶಿಫ್ಟ್ ಮಾಡಲಾಗಿದ್ದು, ಕುಟುಂಬದ ಆಪ್ತರು ಮತ್ತು ಅರಣ್ಯ ಇಲಾಖೆ ವಿನಯ್​ರವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದೆ. 

ವೈದ್ಯರ ವಿಶೇಷ ತಂಡ ನೀಡುತ್ತಿದ್ದ ಚಿಕಿತ್ಸೆಗೆ ಡಾ.ವಿನಯ್ ಸ್ಪಂದಿಸಿದ್ದಾರೆ. ಅಲ್ಲದೆ, ಅವರೊಳಗಿನ ದೈರ್ಯದ ಸ್ವಭಾವ ಅವರನ್ನ ಗುಣಮುಖರನ್ನಾಗಿ ಮಾಡುತ್ತಿದೆ. ಸದ್ಯದಲ್ಲಿಯೇ ಅವರು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿ, ಮನೆಗೆ ಶಿಫ್ಟ್ ಆಗಲಿದ್ದಾರೆ ಎನ್ನುತ್ತಿದ್ದಾರೆ ವಿನಯ್​ರವರ ಆಪ್ತರು! ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಶೇಷವಾಗಿ ಸ್ಪಂದಿಸಿದ್ದು, ಶೀಘ್ರವಾಗಿ ವಿನಯ್ ಗುಣಮುಖರಾಗಲಿದ್ಧಾರೆ ಎನ್ನುತ್ತಿದ್ದಾರೆ ಅಧಿಕಾರಿಗಳು. 

ಮೂರು ಸಲ ಆನೆ ದಾಳಿಗೆ ತುತ್ತಾಗಿದ್ದ ಡಾ. ವಿನಯ್

ಆನೆಯ ದಾಳಿಯಿಂದ ಸಾವನ್ನು ಪಾರಾದವನಿಗೆ ಮತ್ತೆ ಸಾವೇ ಇಲ್ಲ ಎನ್ನುತ್ತಾರೆ ಹಿರಿಯರು, ಇದು ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್ ಪಾಲಿಗೆ ಸತ್ಯವಾಗಿದೆ. ಮೂರು ಬಾರಿ ಆನೆ ದಾಳಿಗೆ ಒಳಗಾದ ವಿನಯ್ ಸಾವನ್ನು ಗೆದ್ದಿದ್ದೇ ಒಂದು ರೋಚಕ ಸಂಗತಿ. ಎರಡು ಬಾರಿ ಆನೆ ದಾಳಿಯಿಂದ ಪಾರಾದ್ರೂ, ಮೂರನೇ ಬಾರಿ ವಿನಯ್ ಆನೆಯಿಂದ ಮಿಸ್ ಆಗಲಾಗಲಿಲ್ಲ. 

ಒಂದು ತಿಂಗಳ ಅವಧಿಯಲ್ಲಿ ವಿಧಿಯನ್ನೆ ಗೆದ್ದ ಡಾ. ವಿನಯ್

11-04-23  ರಂದು ಕಾಡಾನೆ ತುಳಿತಕ್ಕೆ ಒಳಗಾದ ವಿನಯ್ ಬದುಕುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಕೇವಲ ಒಂದು ತಿಂಗಳ ಅವಧಿಯಲ್ಲಿ ಸಾವನ್ನೇ ಗೆದ್ದು, ಸಹಜ ಸ್ಥಿತಿಗೆ ಮರುಳಿದ್ದಾರೆ ಡಾಕ್ಟರ್ ವಿನಯ್. ಇನ್ನು ಕೆಲವೇ ದಿನಗಳಲ್ಲಿ ಕರ್ತವ್ಯಕ್ಕೆ ವಿನಯ್ ಹಾಜರಾಗಲಿದ್ದಾರೆ. 

ಅಂದು ನಡೆದಿದ್ದೇನು?

ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕಿನ ಗಡಿಭಾಗದ ಗ್ರಾಮಸ್ಥರಿಗೆ ತೀವೃ ಕಿರುಕುಳ ನೀಡುತ್ತಿದ್ದ ಸುಮಾರು 12 ವರ್ಷದ ಕಾಡಾನೆ  ಹೊಲಕ್ಕೆ ಹೋಗಿದ್ದ ಓರ್ವ ಬಾಲಕಿಯನ್ನು ಬಲಿಪಡೆದಿದ್ದಿತ್ತು. ಸುಮಾರು ಐದು ಮಂದಿಗೆ ಗಾಯಗೊಳಿಸಿದ ಕಾಡಾನೆಯನ್ನು ಸೆರೆಹಿಡಿಯಲು ಗ್ರಾಮಸ್ಥರಿಂದ ಒತ್ತಡ ಹೆಚ್ಚಾಗಿತ್ತು. 

ಕಾಡಾನೆ ಸೆರೆ ಹಿಡಿದು ದೂರದ ಕಾಡಿಗೆ ಬಿಡಲು ನಿರ್ಧರಿಸಿದ್ದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕಾಡಾನೆ ಸೆರೆಗೆ ಅನುಮತಿಯನ್ನು ನೀಡಿತ್ತು.ಡಾಕ್ಟರ್ ವಿನಯ್, ಸೇರಿದಂತೆ ಮೂವರು ವೈದ್ಯರ ತಂಡ, ಫುಟ್ ಟ್ರಾಕರ್ಸ್ ಮಾವುತ ಕಾವಾಡಿಗಳ ತಂಡ ಕಾರ್ಯಾಚರಣೆಗೆ ಅಣಿಯಾಯಿತು. 

ಸಕ್ರೆಬೈಲು ಬಿಡಾರದಿಂದ ಕುಮ್ಕಿ ಆನೆಗಳನ್ನು ಕರೆದೊಯ್ಯಲಾಗಿತ್ತು. ಎರಡು ದಿನಗಳಾದ್ರೂ, ಆನೆ ಓಡಾಡಿದ ಪರಿಸರದಲ್ಲಿ ಲದ್ದಿ ಕೂಡ ಕಂಡು ಬಂದಿರಲಿಲ್ಲ. ಎರಡು ದಿನಗಳ ನಂತರ ಅಂದರೆ 11 ರಂದು ಬೆಳಗಿನ ಜಾವರಿಂದ ಕುಮ್ಕಿ ಆನೆಗಳಿದ್ದ ಕ್ಯಾಂಪ್ ತೊರೆದ ತಂಡ ಜೀನಹಳ್ಳಿಯವರಿಗೆ ಜೀಪಿನಲ್ಲಿ ಫಾಲೋ ಮಾಡಿಕೊಂಡು ಬಂದಿದೆ. 

ಬೆಳಿಗ್ಗೆ ಸುಮಾರು 8.30 ರ ಸಮಯ. ವಿನಯ್ ಮತ್ತು ತಂಡ ಜೀನಹಳ್ಳಿಯ  ಪ್ರದೇಶದಲ್ಲಿ ಕಾಡಾನೆ ಇರುವುದನ್ನು ಪತ್ತೆ ಹಚ್ಚಿತು. ತಕ್ಷಣ ಆನೆಯನ್ನು ಡಾರ್ಟ್ ಮಾಡಲು ಉಳಿದ ವೈದ್ಯರು ಗನ್ ಸಮೇತ ಸನಿಹಕ್ಕೆ ಅಣಿಯಾದ್ರು..ಜಾಲಿ ಮರಗಳ ಪೊದೆಯೊಳಗೆ ಹೋಗಿದ್ದ ಕಾಡಾನೆ, ಒಮ್ಮಲೆ ತಿರುಗಿ ದಾಳಿಗೆ ಅಣಿಯಾಯ್ತು. ಆಗ ಅಲ್ಲಿದ್ದ ಸಿಬ್ಬಂದಿಗಳು ಎದ್ದುಬಿದ್ದು ಓಡಿದರು. ಆದ್ರೆ ವಿನಯ್ ಗೆ ಓಡಲು ಸಾಧ್ಯವಾಗದೆ ಎಡವಿ ಬಿದ್ದರು. ಆಗ ಕಾಡಾನೆ ಸೊಂಡಲು ಮತ್ತು ಬಲಗಾಲನ್ನು ವಿನಯ್ ಎದೆಯ ಮೇಲೆ ಸವರಿದೆ. ಅಷ್ಟರಲ್ಲಿ ಅಕ್ಕಪಕ್ಕದಲ್ಲಿದ್ದ ಸಿಬ್ಬಂದಿಗಳು ಏರ್ ಫೈರ್ ಮಾಡಿ ಸದ್ದು ಮಾಡಿದ್ದಾರೆ. ಆನೆ ಬಿಟ್ಟು ಕದಲಿದಾಗ ಮತ್ತೊಬ್ಬ ವೈದ್ಯರು ಕಾಡಾನೆಯನ್ನು ಡಾರ್ಟ್ ಮಾಡಿದ್ದಾರೆ. ಗಾಯಾಳು ವಿನಯ್ ಗೆ ತಕ್ಷಣ ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಯ್ತು.

ಹಗಲು ರಾತ್ರಿ ಆಸ್ಪತ್ರೆಯ ಬಳಿ ಇದ್ದ ಅರಣ್ಯಾಧಿಕಾರಿಗಳು

ವಿನಯ್ ನಂಜಪ್ಪ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ವನ್ಯಜೀವಿ ಡಿಸಿಎಫ್ ಪ್ರಸನ್ನ ಪಟಗಾರ್ ಎಸಿಎಫ್ ಸುರೇಶ್ ಆರ್.ಎಫ್ ಓ ಹಾಲ್ ಬಾವಿ ಹಾಗು ಭದ್ರಾವತಿ ಡಿವಿಜನ್ ನ ಎಲ್ಲಾ ಅರಣ್ಯ ಅಧಿಕಾರಿಗಳು ಆಸ್ಪತ್ರೆಯತ್ತ ದೌಡಾಯಿಸಿದ್ರು. ಸಿಸಿಎಫ್ ಹನುಮಂತಪ್ಪ ರಾತ್ರಿಯೆಲ್ಲಾ ಆಸ್ಪತ್ರೆಯ ಬಳಿ ಇದ್ದು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ರು. ವಿನಯ್ ಆಸ್ಪತ್ರೆಯ ಖರ್ಚು ವೆಚ್ಚಗಳನ್ನೆಲ್ಲಾ ಇಲಾಖೆಯೇ ಭರಿಸುತ್ತೆ ಎಂದು ಕುಟುಂಬದವರಿಗೆ ಸಾಂತ್ವನ ಹೇಳಿದ್ರು. ಅಲ್ಲದೆ ಆಸ್ಪತ್ರೆಯಲ್ಲಿಯೇ ಕುಟುಂಬದವರ ಜೊತೆಯಿದ್ದು ಸಮಾಧಾನ ಹೇಳಿದ್ರು. 

ವಿಶೇಷ ಆ್ಯಂಬುಲೆನ್ಸ್​ನಲ್ಲಿ ಬೆಂಗಳೂರಿಗೆ ಶಿಫ್ಟ್

ಇತ್ತ ವಿನಯ್ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಗಾಯಾಳುವನ್ನು ಏರ್ ಲಿಫ್ಟ್ ಮಾಡಬೇಕೆಂದು ವೈದ್ಯರು ಸಲಹೆ ನೀಡಿದಾಗ ಅಧಿಕಾರಿಗಳು ಹಿಂದೆ ಮುಂದೆ ನೋಡದೆ ಗ್ರೀನ್ ಸಿಗ್ನಲ್ ನೀಡಿದ್ರು. ಆದರೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅನುಮತಿ ಸಿಗಲಿಲ್ಲ. ಎರಡನೆಯದಾಗಿ ಬಾಡಿ ತುಂಬಾ ಶೇಖ್ ಆದ್ರೆ ರೋಗಿ ಆರೋಗ್ಯ ಮತ್ತಷ್ಟು ಗಂಭೀರವಾಗುತ್ತೆ. ಹೀಗಾಗಿ ಬೈ ರೂಟ್ ಅಂಬುಲೆನ್ಸ್ ಮೂಲಕ ಎಕ್ಮಾ ಟ್ರೀಟ್ ಮೆಂಟ್ ನಲ್ಲಿ ಝಿರೋ ಟ್ರಾಫಿಕ್ ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ನುರಿತ ವೈದ್ಯರ ಚಿಕಿತ್ಸೆಗೆ ವಿನಯ್ ಸ್ಪಂಧಿಸಿದ್ದು, ದಿನದಿನಕ್ಕೂ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.ಸದ್ಯದಲ್ಲಿಯೇ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಮನೆಯಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯಲಿದ್ದಾರೆ.