ಹೆಸರಿದೆ, ಅಧಿಕೃತ ವಿಳಾಸವಿಲ್ಲ! ಊರಿದೆ , ದಾರಿಯಿಲ್ಲ! ಮನೆ ಕಟ್ಟಂಗಿಲ್ಲ, ಹೆಣ್ಣು ಕೊಡೋದಿಲ್ಲ! ಮಲೆನಾಡ ಈ ಹಳ್ಳಿಗೆ ಬೇಕಿದೆ ಅಭಿವೃದ್ಧಿಯ ಗ್ಯಾರಂಟಿ

A special story about a village in Malnad Shimoga district that does not have any basic amenities

ಹೆಸರಿದೆ, ಅಧಿಕೃತ ವಿಳಾಸವಿಲ್ಲ! ಊರಿದೆ , ದಾರಿಯಿಲ್ಲ! ಮನೆ ಕಟ್ಟಂಗಿಲ್ಲ, ಹೆಣ್ಣು ಕೊಡೋದಿಲ್ಲ! ಮಲೆನಾಡ ಈ ಹಳ್ಳಿಗೆ ಬೇಕಿದೆ ಅಭಿವೃದ್ಧಿಯ ಗ್ಯಾರಂಟಿ

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

ಶಿವಮೊಗ್ಗ/ ಇದು ಭಾರತದ ಭೂಪಟದಲ್ಲಿ ಇದ್ದು ಇಲ್ಲದಂತಿರುವ ಹಳ್ಳಿಯ ಶೋಚನೀಯ ಬದುಕಿನ ನೋವಿನ ಕಥೆ-ವ್ಯಥೆ. ಒಂದು ಕಾಲದಲ್ಲಿ ಕಂದಾಯ ಕಟ್ಟುತ್ತಿದ್ದ ಗ್ರಾಮಸ್ಥರು ಈಗ  ವಂಚಿತರಾಗಿದ್ದಾರೆ. ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಶಿವಮೊಗ್ಗ ಜಿಲ್ಲೆಯ ಗಡಿಗ್ರಾಮವಾಗಿರುವ  ಬೆಳಗಲ್ಲು ಗ್ರಾಮದ ಕಟು ವಾಸ್ತವದ ಚಿತ್ರಣವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. 

ಡಿಸಿಎಂ ಡಿ ಕೆ ಶಿವಕುಮಾರ್​ರನ್ನ ಭೇಟಿಯಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ! OPS ವಿಚಾರದಲ್ಲಿ ಮಾತುಕತೆ

ನಾಗರೀಕ ಪ್ರಪಂಚದಿಂದ ದೂರ ಉಳಿದಿದೆ ಈ ಬೆಳಗಲ್ಲು ಗ್ರಾಮ. ತುಂಗಾ ಹಿನ್ನೀರಿನ ನಿಸರ್ಗದ ಸೌಂದರ್ಯವನ್ನ ತನ್ನೊಳಗೆ ಅಡಗಿಸಿಕೊಂಡಿರುವ ಈ ಗ್ರಾಮಕ್ಕೆ  ಮೊದಲ ಬಾರಿ ಯಾರೇ ಭೇಟಿ ನೀಡಿದರೂ ಇಲ್ಲಿನ ಸೌಂದರ್ಯಕ್ಕೆ ಬೆರಗಾಗಿ ಹೋಗುತ್ತಾರೆ.ಇಲ್ಲಿ ನೆಲಿಸಿರುವ ಜನರೇ ಧನ್ಯರು ಎಂದು ಉದ್ಗರಿಸುತ್ತಾರೆ. 

ಇಲ್ಲಿದೆ ನಿಜವಾದ ಅರಣ್ಯರೋಧನ! 

ಇಲ್ಲಿನ ಸೌಂದರ್ಯ ಎಷ್ಟು ಶ್ರೀಮಂತವೋ ಇಲ್ಲಿನ ಜನರ ಬವಣೆಗಳು ಕೂಡ ಅಷ್ಟೇ ಬಡವಾಗಿ ಹೋಗಿದೆ. ಶಿವಮೊಗ್ಗದಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿರುವ ಬೆಳಗಲ್ಲು ಗ್ರಾಮದ ಶೋಚನೀಯ ಪರಿಸ್ಥಿತಿ ಇದು. ಬೆಳಗಲ್ಲು ಗ್ರಾಮದ ಜನರ ಬದುಕನ್ನು ಹತ್ತಿರದಿಂದ ನೋಡಿದಾಗ ಇವರು ನಾಗರೀಕ ಪ್ರಪಂಚದಿಂದ ದೂರ ಉಳಿದಿದ್ದಾರೆ ಎಂಬುದು ಭಾಸವಾಗುತ್ತದೆ. ಅತ್ತ ಕಂದಾಯ ಭೂಮಿಯೂ ಅಲ್ಲದ ಇತ್ತ ಅರಣ್ಯ ಭೂಮಿಯೂ ಅಲ್ಲದ ತುಂಗಾ ಬ್ಯಾಕ್ ವಾಟರ್  ಬಫರ್ ಏರಿಯಾದಲ್ಲಿ ಬದುಕು ಜೀಕುತ್ತಿರುವ  ಗ್ರಾಮಸ್ಥರ ನೋವಿನ ಸಂಗತಿ ಇದು

VIRAL VIDEO / ಪ್ರೀತಿಸುವ ಪ್ರೇಮಿಗಳು ಈ ವಿಡಿಯೋ ನೋಡಲೇ ಬೇಕು! ಮನೆಗೆ ಬಾ ಮಗಳೇ ಅಂತಾ ಕಾಲಿಗೆ ಬಿದ್ದು ಬೇಡುತ್ತಿದ್ಧಾನೆ ಅಪ್ಪ!

ಕಾಡಿಗೆ ಹೆಣ್ಣು ಕೊಡ್ತಿಲ್ಲ

ಈ ಊರಿಗೆ  ದುರ್ಗಮ ಕಾಡಿನಲ್ಲಿ ನಡೆದು ಹೋಗಬೇಕು. ಏನಾದರೂ ಬೇಕು ಅಂದರೆ, ಎನಾದರೂ ಆಯಿತು ಅಂದರೆ, ನಾಲ್ಕು ಕಿಲೋಮೀಟರ್  ನಡೆದೇ ಸಾಗಬೇಕು. ಹೇಳಲು ಒಂದು ಗಟ್ಟಿಯಾದ ಸೌಲಭ್ಯಗಳು ಇಲ್ಲದ ಈ ಊರಿಗೆ  ಯಾರು ಹೆಣ್ಣು ಗಂಡು ಸಂಬಂಧ ಮಾಡಲು ಬರುತ್ತಿಲ್ಲ. ಈ ಹೈಟೆಕ್​ ಯುಗದಲ್ಲಿಯು ಇಲ್ಲಿಯ ಮಂದಿಗೆ ರೇಷನ್​ ಕಾರ್ಡೆ ಆಧಾರ.  

ಊರು ಬಿಟ್ಟಿರುವ ಮಂದಿ

ಗ್ರಾಮದಲ್ಲಿನ ಜ್ವಲಂತ ಸಮಸ್ಯೆಗಳಿಂದ ನಾಲ್ಕೈದು ಕುಟುಂಬಗಳು ಗ್ರಾಮ ತೊರೆದು ಬೇರೆಡೆ ಹೋಗಿದೆ. ಗ್ರಾಮದ ಸಮಸ್ಯೆಯಿಂದಾಗಿ ಇಲ್ಲಿನ ಯುವಕ ಯುವತಿಯರಿಗೆ ಹೊರಗಿನಿಂದ ಸಂಬಂಧಗಳೇ ಬರುತ್ತಿಲ್ಲ. ಹೀಗಾಗಿ ಸಂಬಂಧಿಗಳನ್ನೇ ಅನಿವಾರ್ಯವಾಗಿ ಮದುವೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರು-ಬಸ್​ ಡಿಕ್ಕಿ/ ತುಂಗಾ ನದಿಗೆ ಹೊಸ ಬೋಟ್/ ಅಳಿಮಯ್ಯನ ಗಲಾಟೆಗೆ ಪೊಲೀಸರ ಪಾಠ/ ಜನರ ಕೈಗೆ ಸಿಕ್ಕಿಬಿದ್ದ ಅಡಿಕೆ ಕಳ್ಳ! ಶಿವಮೊಗ್ಗ ಜಿಲ್ಲೆಯ ಟಾಪ್​ @5 ಸುದ್ದಿ

ತುಂಗಾ ಪಾಲಾದ ಬದುಕು

1991 ರವರೆಗೆ ಗ್ರಾಮ ಪಂಚಾಯಿತಿಯವರು ಮನೆ ಕಂದಾಯ ಕಟ್ಟಿಸಿಕೊಳ್ಳುತ್ತಿದ್ದರು. ಯಾವಾಗ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡರೋ ಜನರು ಆವಾಗ ಬಫರ್ ಏರಿಯಾಕ್ಕೆ ಅಂದರೆ ಮುಳುಗಡೆ ಪ್ರದೇಶದ ಮೇಲಕ್ಕೆ ಸ್ಥಳಾಂತರಗೊಂಡಿದ್ದಾರೆ. ಇದರ ಜೊತೆಜೊತೆಯಲ್ಲಿ ತಮ್ಮ ಊರಿನ ಅಡ್ರೆಸ್​ನ್ನ ಸಹ ಈ ಊರಿನ ಮಂದಿ ಕಳೆದುಕೊಂಡರು. ಅತ್ತ ಕಂದಾಯ ಗ್ರಾಮವೂ ಆಗದೇ ಇತ್ತ ಅರಣ್ಯ ಇಲಾಖೆಯು ಸುಪರ್ದಿಗೂ ಸಿಗದೇ ಊರು ಅಭಿವೃದ್ದಿ ಕಾಣದೇ ಅನಾಥವಾಗಿದೆ.  ಗ್ರಾಮಸ್ಥರಿಗೆ ಒಂದು ಆಶ್ರಯ ಮನೆಯನ್ನು ನೀಡಿಲ್ಲ. ಕುಟುಂಬಗಳು ಬೆಳೆದಂತೆ ಮನೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಪಕ್ಕದಲ್ಲಿ ಮನೆ ನಿರ್ಮಿಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಹೀಗಾಗಿ ಒಂದು ಮನೆಯಲ್ಲಿ ಆರರಿಂದ ಒಂಬತ್ತು ಮಂದಿ ನೆಲೆಸುವಂತಾಗಿದೆ. ಮೇಲಾಗಿ ಈ  ಗ್ರಾಮದಲ್ಲಿ ಯಾರಿಗೂ ಕೂಡ ಸ್ವಂತ ಸೂರಿಲ್ಲ ಬಹುತೇಕ ಜನರು ಗುಡಿಸಿನಲ್ಲೇ ಮಣ್ಣಿನ ನೆಲದಲ್ಲಿಯೇ ಇಂದಿಗೂ ಬದುಕನ್ನು ಸಾಗಿಸುತ್ತಿದ್ದಾರೆ 



ಸರ್ಕಾರದ ಯೋಜನೆಗಳು ಈ ಗ್ರಾಮಕ್ಕಿಲ್ಲ

ಸರ್ಕಾರದ ಯಾವ ಯೋಜನೆಗಳು ಈ ಗ್ರಾಮಕ್ಕೆ ಸಿಕ್ಕಿಲ್ಲ.  ಇಲ್ಲಿನ ಜನರ ಮತಕ್ಕಾಗಿ ಓಟರ್ ಐಡಿ, ಆದಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಹೊರತು ಪಡಿಸಿದರೆ, ಇವರಿಗೆ ಇನ್ಯಾವ ಸವಲತ್ತುಗಳು ದಕ್ಕಿಲ್ಲ.ಅಸಲಿಗೆ ಬೆಳಗಲ್ಲು ಎಂಬುದು ಗ್ರಾಮವಾಗಿಯೇ ಅಧಿಕೃತವಾಗಿ ಗುರುತಿಸಿಕೊಂಡಿಲ್ಲ. 

ಗ್ರಾಮಕ್ಕೆ ಕುಡಿಯುವ ನೀರು ದಕ್ಕಿಲ್ಲ.. 

ತುಂಗಾ ನದಿ ನೀರನ್ನೇ ನೇರವಾಗಿ ಸೇವಿಸುವ ಪರಿಸ್ಥಿತಿ ಇವರದ್ದು, ಗ್ರಾಮದಲ್ಲಿ ಎಲ್ಲರೂ ಎಸ್ಸಿ ಸಮುದಾಯವರೇ ಇದ್ದು, ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಗುಂಟೆ ಲೆಕ್ಕದಲ್ಲಿ ಬಗರ್ ಹುಕಂ ಭೂಮಿಯನ್ನು ಉಳಿಮೆ ಮಾಡಿಕೊಂಡು ಕೂಲಿನಾಲಿ ಮಾಡಿ, ಜೀವನ ಸಾಗಿಸುತ್ತಿದ್ದಾರೆ. 

ಚಿರತೆ ಮೇಲೆ ಕಾಡು ಹಂದಿಯ ಅಟ್ಯಾಕ್​! ನೀರು ಅರಸಿ ಬಂದು ಪ್ರಾಣ ಬಿಟ್ಟ ವನ್ಯಜೀವಿ!

ನಾಲ್ಕು ಕಿಲೋಮೀಟರ್ ನಡಿಬೇಕು ಶಾಲೆಗೆ

ಗ್ರಾಮದ ಜನಸಂಖ್ಯೆ 80 ರ ಗಡಿಯನ್ನು ದಾಟಿಲ್ಲ ಈ ಗ್ರಾಮದಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳು ವಿದ್ಯಾವಂತರಾಗಿದ್ದಾರೆ ಇನ್ನು ಕೆಲವು ವಿದ್ಯಾರ್ಥಿಗಳು ದುರ್ಗಮ ಕಾಡಿನಲ್ಲಿ ನಾಲ್ಕು ಕಿಲೋಮೀಟರ್ ನಡೆದು ಸಾಗಲು ಹಿಂದೇಟು ಹಾಕಿ ಶಾಲೆಯನ್ನು ತೊರೆದಿದ್ದಾರೆ. ಗ್ರಾಮದಲ್ಲಿ ಕೇವಲ ಒಬ್ಬ ವಿದ್ಯಾರ್ಥಿನಿ ಮಾತ್ರ ಬಿಎಸ್ಸಿ ಪದವಿಯನ್ನು ಮುಗಿಸಿ ಮನೆಯಲ್ಲಿಯೇ ಇದ್ಧಾರೆ.  ಇನ್ನೂ ಗ್ರಾಮದಲ್ಲಿ ಸುಮಾರು 20 ಮಕ್ಕಳಿದ್ದರೂ ಒಂದು ಅಂಗನವಾಡಿಯ ವ್ಯವಸ್ಥೆ ಇಲ್ಲ 

ಕಿಮ್ಮನೆ ಕೊಡಿಸಿದ್ರು ಕರೆಂಟ್

ಈ ಹಿಂದೆ ಕಿಮ್ಮನೆ ರತ್ನಾಕರ್ ಅವಧಿಯಲ್ಲಿ ಈ ಗ್ರಾಮಕ್ಕೆ ಮಾನವೀಯತೆ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದೊಂದು ಬೆಳಕು ಇವರನ್ನು ಕತ್ತಲಿನಿಂದ ದೂರವಾಗಿಸಿದೆ.

ಬೇಕಾಗಿದೆ ಕಾಯಕಲ್ಪ

ನಾಲ್ಕು ಕಿಲೋಮೀಟರ್​ ದೂರ ನಡೆದುಕೊಂಡು ಹೋಗಿ ತಲುಪಬೇಕಾದ ಊರಿನಲ್ಲಿ ಒಂದಷ್ಟು ಅಭಿವೃದ್ದಿ ಆಗಬೇಕಿದೆ. ಕೊನೆ ಪಕ್ಷ ಊರಿನ ಬಗ್ಗೆ ನಾಗರಿಕ ಸಮಾಜ ಅರಿಯಬೇಕಿದೆ. ಇಷ್ಟು ವರ್ಷದ ಸರ್ಕಾರಗಳ , ಜನಪ್ರತಿನಿಧಿಗಳ ಕಣ್ಣಿಗೆ ಕಾಣದ ಊರು ಇನ್ನಾದರೂ ಆಡಳಿತ ವ್ಯವಸ್ಥೆಯ ಕಣ್ಣಿಗೆ ಬಿದ್ದು ಮಾನವೀಯ ದೃಷ್ಟಿಯಲ್ಲಿ ಸೌಲಭ್ಯಗಳು ಊರಿಗೆ ದೊರಕಬೇಕಿದೆ.  ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ದ ವತಿಯಿಂದ ಜಿಲ್ಲೆಯ ಕುಗ್ರಾಮಗಳ ಸ್ಥಿತಿಗತಿಗಳನ್ನು ಅರಿಯುವ ಪ್ರಯತ್ನದ ಭಾಗವಾಗಿ ಇವತ್ತು ಬೆಳಗಲ್ಲು ಗ್ರಾಮಕ್ಕೆ ಪತ್ರಕರ್ತರ ತಂಡ ಭೇಟಿಕೊಟ್ಟು, ಅಲ್ಲಿನ ಅನಿವಾರ್ಯತೆಗಳನ್ನು ಹಾಗೂ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದ್ರು. 


ದಾವಣಗೆರೆ, ಉತ್ತರ ಕನ್ನಡ, ಶಿವಮೊಗ್ಗ ಪೊಲೀಸರಿಗೆ ಬೇಕಾಗಿದ್ದ ಕಳ್ಳನ ಬಂಧನ!

ಶಿಕಾರಿಪುರ/ ಕಳೆದ ವರ್ಷದ ಆಗಸ್ಟ್ ನಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣ ಸಂಬಂಧ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿದ್ದು, ಆತನ ಮೂಲಕ,  ದಾವಣಗೆರೆ ಹಾಗೂ ಉತ್ತರ ಕನ್ನಡ ಪೊಲೀಸ್ ಸ್ಟೇಷನ್​ಗಳಲ್ಲಿ ದಾಖಲಾಗಿದ್ದ ಪ್ರಕರಣವೂ ಸೇರಿದಂತೆ ಮೂರು ಪ್ರಕರಣಗಳನ್ನ ಭೇದಿಸಿದ್ದಾರೆ. 

ಪ್ರಕರಣವೇನು?

ದಿನಾಂಕಃ 27-08-2022 ರಂದು  ಶಿಕಾರಿಪುರ ತಾಲ್ಲೂಕಿನ ಬಿಳಕಿ ಗ್ರಾಮದ ವಾಸಿ  ತಮ್ಮ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಶಿರಾಳಕೊಪ್ಪ ಬಸ್ ನಿಲ್ದಾಣದ ಹತ್ತಿರ ಕಳೆದುಕೊಂಡಿದ್ದರು. ಈ ಸಂಬಂಧ ಕಳ್ಳತನದ ದೂರು ದಾಖಲಿಸಿದ್ದರು.  379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಿಸಿದ್ದ ಪೊಲೀಸರು ಇದೀಗ ಪ್ರಕರಣ ಭೇದಿಸಿದ್ದಾರೆ. 

ಮೂರು ಸ್ಟೇಷನ್ ವ್ಯಾಪ್ತಿಯಲ್ಲಿ ಕಳ್ಳತನ

ಈ ಸಂಬಂಧ  08-06-2023  ರಂದು ಪ್ರಕರಣದ ಆರೋಪಿ  ಶಿರಾಳಕೊಪ್ಪ  ಟೌನ್ ನ ನೆಹರೂ ಕಾಲೋನಿ, ನಿವಾಸಿ ಜಿಯಾವುಲ್ಲಾ @ ಜಿಯಾ ನನ್ನ ಬಂಧಿಸಿದ್ದಾರೆ.  

ಆರೋಪಿಯಿಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯ - 01, ದಾವಣಗೆರೆ ಜಿಲ್ಲೆಯ ಬಸವನಗರ ಪೊಲೀಸ್ ಠಾಣೆಯ - 01 ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯ - 01 ಪ್ರಕರಣ ಸೇರಿದಂತೆ ಒಟ್ಟು 03  ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 1,19,000/-  ರೂಗಳ 03 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

ಡಿಸಿಎಂ ಡಿ ಕೆ ಶಿವಕುಮಾರ್​ರನ್ನ ಭೇಟಿಯಾದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ! OPS ವಿಚಾರದಲ್ಲಿ ಮಾತುಕತೆ

ಶಿವಮೊಗ್ಗ/ ಮಹತ್ವದ ಬೆಳವಣಿಗೆಯಲ್ಲಿ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ಹಾಗೂ ಸರ್ಕಾರಿ ನೌಕರರ ನಿಯೋಗ ಡಿಸಿಎಂ ಡಿಕೆ ಶಿವಕುಮಾರ್​ರವರನ್ನ ಭೇಟಿಯಾಗಿದೆ. 

ಸರ್ಕಾರದಲ್ಲಿ ಡಿಸಿಎಂ ಸ್ಥಾನಕ್ಕೆ ಏರಿದ ಡಿಕೆಶಿಯವರನ್ನ  ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಭಿನಂದಿಸಿದರು. ಇನ್ನೂ ಇದೇ ವೇಳೆ  ಪ್ರಣಾಳಿಕೆಯಲ್ಲಿನ ಭರವಸೆಯಂತೆ ಎನ್.ಪಿ.ಎಸ್ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ  ಮನವಿ ಮಾಡಿದ್ರು. ಇದೇ ವೇಳೆ  7ನೇ ವೇತನ ಆಯೋಗದ ವರದಿಯನ್ನು ಪಡೆದು ಶೀಘ್ರ ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಯಿತು.