ಶಿವವಮೊಗ್ಗ ನಗರ ಜಯನಗರ ಪೊಲೀಸ್ ಲಿಮಿಟ್ನಲ್ಲಿ ಚಿನ್ನದ ಸರ ಕಳ್ಳತನ ಆಗಿರುವ ಬಗ್ಗೆ ಮಾಹಿತಿಯೊಂದು ಲಭ್ಯವಾಗಿತ್ತು. ಈ ಬಗ್ಗೆ ಇದೀಗ ಬೇರೆಯದ್ದೆ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನು ಸಹ ಓದಿ: ಬೈಕ್ ಓಡಿಸುವ ಮಕ್ಕಳ ಪೋಷಕರಿಗೆ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ
ಇವತ್ತು ಗ್ಯಾಸ್ ಏಜೆನ್ಸಿಯೊಂದರ ಪಕ್ಕ ಮಹಿಳೆಯೊಬ್ಬರನ್ನು ತಡೆದು, ರಸ್ತೆ ದೂರದಲ್ಲಿ ಮರ್ಡರ್ ಆಗಿದೆ, ಚಿನ್ನಕೋಸ್ಕರ ಕೊಲೆಯಾಗಿದೆ. ಹೀಗಾಗಿ ತಾಳಿಸರವನ್ನು ಪೇಪರ್ನಲ್ಲಿ ಬಚ್ಚಿಟ್ಟುಕೊಳ್ಳಿ ಎಂದಿದ್ದಾರೆ. ಅವರು ಮಾಡಿದ ಗಾಬರಿಗೆ ಮಹಿಳೆಯು ಸಹ ತಾಳಿ ಸರ ತೆಗೆದಿದ್ದಾರೆ. ಕೊಡಿ ಮಡಚಿಕೊಡುತ್ತೇವೆ ಎಂದು ಅದನ್ನು ಮಡಚಿ , ಅದಾಗಲೇ ಮಡಚಿಟ್ಟುಕೊಂಡಿದ್ದ ಇನ್ನೊಂದು ಪೇಪರ್ ಪಿಂಡಿ ಕೊಟ್ಟಿದ್ಧಾರೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಆದರೆ ಸಿಕ್ಕಿರುವ ಮಾಹಿತಿ ಪ್ರಕಾರ, ಮಹಿಳೆ ರೋಲ್ಡ್ ಗೋಲ್ಡ್ ಚಿನ್ನದ ಸರ ಹಾಕಿಕೊಂಡಿದ್ದರು. ಹಾಗಾಗಿ ಅವರಿಗೆ ನಡೆದ ಘಟನೆಯಿಂದ ನುಕ್ಸಾನ್ ಆಗಿಲ್ಲ. ಆದಾಗ್ಯು ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ಧಾರೆ. ಇನ್ನೂ ಇದೇ ರೀತಿಯ ಘಟನೆ ಇತ್ತೀಚೆಗೆ ವಿದ್ಯಾನಗರದ ಬಳಿಯಲ್ಲಿ ನಡೆದಿತ್ತು. ಹೀಗಾಗಿ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
