ಈಶ್ವರಪ್ಪರನ್ನ ಸನ್ಮಾನಿಸಲ್ಲವೆಂದರಾ ಸಿದ್ದರಾಮಯ್ಯ? ಪುತ್ರನಿಗೆ ಸಚಿವಸ್ಥಾನ ಬಿಎಸ್​ವೈ ಹೇಳಿದ್ದೇನು? ಬೆಳ್ತಂಗಡಿಯಲ್ಲಿ ಶಿವಮೊಗ್ಗ ಯುವಕನ ಶವ! ನವಿಲಿನ ವಿರುದ್ಧ ಕೇಸ್​, ರೂಮ್​ಮೆಟ್ಸ್​ ಫೈಟ್​ TODAY @NEWS

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS


ಈಶ್ವರಪ್ಪರಿಗೆ ಸನ್ಮಾನ ಮಾಡಲು ನಿರಾಕರಿಸಿದ್ರಾ ಸಿದ್ದರಾಮಯ್ಯ

ಮಾಜಿ ಶಾಸಕ ಈಶ್ವರಪ್ಪಗೆ ಸನ್ಮಾನ ಮಾಡಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ರಾ ಎಂಬ ಪ್ರಶ್ನೆಯೊಂದು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮೂಡಿದೆ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಪಾಲ್ಗೊಂಡಿದ್ದರು. ಈ ವೇಳೆ ಈಶ್ವರಪ್ಪನವರಿಗೆ ಅಭಿನಂದನೆ ಸಲ್ಲಿಸಲು ನಿರಂಜನಾನಂದಪುರಿ ಶ್ರೀಗಳು ಸಿಎಂ ಸಿದ್ದರಾಮಯ್ಯರಿಗೆ ಸನ್ನೆ ಮಾಡಿದರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಸನ್ನೆಯಿಂದಲೇ ನೀವೇ ಹಾಕಿ ಅಂತ ಹೇಳಿದರು.  

Malenadu Today


ಪುತ್ರನಿಗೆ ಸಚಿವ ಸ್ಥಾನ ಬಿಎಸ್​ವೈ ಹೇಳಿದ್ದೆನು?

ಕೇಂದ್ರ ಸಚಿವ ಸಂಪುಟದಲ್ಲಿ ಬಿವೈ ರಾಘವೇಂದ್ರರವರಿಗೆ ಸಚಿವ ಸ್ಥಾನ ಸಿಗುತ್ತೆ ಎಂಬ ಊಹಾಪೋಹ ಹಬ್ಬಿರುವ ಬಗ್ಗೆ ಸಂಸಸ ಬಿವೈ ರಾಘವೇಂದ್ರ ಇದೆಲ್ಲಾ ಸತ್ಯಕ್ಕೆ ದೂರವಾಗಿದ್ದು ಎಂದು ತಿಳಿಸಿದ್ದರು. ಇನ್ನೂ ಈ ಬಗ್ಗೆ ದೆಹಲಿಗೆ ಹೊರಟಿದ್ದ ವೇಳೆ ಮಾತನಾಡಿರುವ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಕೇಂದ್ರ ಸಂಪುಟದಲ್ಲಿ ಸಂಸದ ಬಿ.ವೈ.ರಾಘವೇಂದ್ರಗೆ ಸ್ಥಾನ ಸಿಗುವ ಸಾಧ್ಯತೆ  ನನಗೆ ಗೊತ್ತಿಲ್ಲ ಎಂದಿದ್ದಾರೆ. ಆ ವಿಚಾರವಾಗಿ ಹೆಚ್ಚೇನು ಮಾತನಾಡದ ಬಿಎಸ್​ವೈ ರೇಣುಕಾಚಾರ್ಯರ ಹೇಳಿಕೆಗೂ ಪ್ರತಿಕ್ರಿಯಿಸಿಲ್ಲ  


ರೂಮ್​ಮೆಟ್ಸ್​ ನಡುವೆ ಹೊಡೆದಾಟ

ಹಳೆಯ ವಿಚಾರಕ್ಕೆ, ರೂಮ್​ಮೆಟ್ಸ್​ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಪ್ರಕರಣ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಮೆಟ್ಟಿಲೇರಿದೆ. ಘಟನೆ ಸಂಬಂಧ ಎಫ್ಐಆಋ್​ ಆಗಿದೆ.  ಸಿಮ್ಸ್ ನಲ್ಲಿ ಬಿಎಸ್ ಸಿ ಲ್ಯಾಬ್ ಟೆಕ್ಷಿಷಿಯನ್ ಆಗಿರುವ ವಿದ್ಯಾರ್ಥಿ ಹಾಗೂ ಇನ್ನಿಬ್ಬರು ಒಂದೇ ರೂಮ್​ನಲ್ಲಿದ್ದರಂತೆ. ಆನಂತರ ಇಬ್ಬರು ಸಿಮ್ಸ್ ವಿದ್ಯಾರ್ಥಿಯನ್ನು ಬಿಟ್ಟು ಬೇರೆ ಕಡೆ ರೂಮ್​ ಮಾಡಿಕೊಂಡಿದ್ದರಂತೆ. ಈ ಮಧ್ಯೆ ಇಬ್ಬರು ಬಂದು ಯಾವುದೋ ಹಳೆ ವಿಚಾರಕ್ಕೆ ಸಿಮ್ಸ್​ ವಿದ್ಯಾರ್ಥಿಯನ್ನ ಭೇಟಿಯಾಗಿ ಹೊಡೆದಿದ್ದಾರೆ ಎಂಬದು ಆರೋಪ 


ಬೆಳ್ತಂಗಡಿಯಲ್ಲಿ ಶಿವಮೊಗ್ಗ ಯುವಕನ ಶವ ಪತ್ತೆ

ಬೆಳ್ತಂಗಡಿ ತಾಲೂಕಿನ ಉಜಿರೆ ಲಾಡ್ಜ್ ವೊಂದರಲ್ಲಿ ಶಿವಮೊಗ್ಗದ ಕೋಟೆ ರಸ್ತೆಯ ಯುವಕನೋರ್ವನ ಶವ ಪತ್ತೆಯಾಗಿದೆ. ಕಳೆದ ಜೂನ್ 29 ರಂದು ಈ ಘಟನೆ ಸಂಭವಿಸಿದ್ದು, ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಈತ ಕೋಟೆ ರೋಡ್‌ ನಲ್ಲಿರುವ ಅಪ್ಪಾಜಿರಾವ್‌ ಕಾಂಪೌಂಡ್‌ ನಿವಾಸಿ ಕಾರ್ತಿಕ್‌ ಎಂದು ಗೊತ್ತಾಗಿದೆ.  ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. 


ನವಿಲಿನ ವಿರುದ್ಧ ದೂರು ದಾಖಲು

ನವಿಲೊಂದು ತನ್ನ ಮೇಲೆ ಪದೇ ಪದೇ ದಾಳಿ ಮಾಡುತ್ತಿದೆ ಎಂದು ಆರೋಪಿಸಿ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಮಹಿಳೆಯೊಬ್ಬರು ಅರಣ್ಯ ಇಲಾಖೆ ದೂರು ನೀಡಿದ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.  ಗ್ರಾಮದ ಲಿಂಗಮ್ಮ ಎಂಬುವರು ‘ನವಿಲೊಂದು ನನ್ನ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದು ಗಾಯಗಳಾಗಿವೆ ಅದನ್ನ ಹಿಡಿಯಿರಿ ಎಂದು ದೂರು ನೀಡಿದ್ಧಾರೆ. ಈ ಸಂಬಂಧ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವ ದಾಖಲೆಯನ್ನು ಸಹ ಅವರು ನೀಡಿದ್ದಾರಂತೆ. 

Leave a Comment