ನಡುತೋಪಿನಿಂದ ಮಾಯವಾಗಿದ್ದ ಸಾಗುವಾನಿ ಪತ್ತೆ ಮಾಡಿದ ಅರಣ್ಯ ಇಲಾಖೆ! ಸಿಕ್ಕಿಬಿದ್ದವರು ಯಾರು ಗೊತ್ತಾ?

Forest department traces stolen saguvani tree Do you know who was caught?

ನಡುತೋಪಿನಿಂದ  ಮಾಯವಾಗಿದ್ದ ಸಾಗುವಾನಿ ಪತ್ತೆ ಮಾಡಿದ ಅರಣ್ಯ ಇಲಾಖೆ!  ಸಿಕ್ಕಿಬಿದ್ದವರು ಯಾರು ಗೊತ್ತಾ?

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS

ಸೊರಬ ತಾಲ್ಲೂಕಿನ  ಸರಕಾರಿ ನಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿತಲೆ ಮಾಡಿದ ಆರೋಪಿಯನ್ನು ಮಾಲು ಸಮೇತ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸರಕಾರಿ ಸಾಗುವಾನಿ ನಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ ಸಾಗಿಸಿದ ಆರೋಪದ ಮೇಲೆ ಸದಾನಂದ(31) ಎಂಬವನನ್ನು ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಹಾಲಗಳಲೆ ಸ್ಟೇಟ್ ಪಾರೆಸ್ಟ್ ಕಪ್ಪಗಳಲೆ ಗ್ರಾಮದ ಸರ್ವೆ ನಂಬರ್ 16ರ ನಡುತೋಪಿನಲ್ಲಿ ಎರಡು ಸಾಗುವಾನಿ ಮರಗಳನ್ನು ಕಡಿದು ಮಾವಲಿ ಗ್ರಾಮದ ಜಗದೀಶ ಎಂಬುವರ ಮನೆಯ ಹಿಂಭಾಗದ ಕೊಟ್ಟಿಗೆ ಜಾಗದಲ್ಲಿ ದಾಸ್ತಾನು ಮಾಡಲಾಗಿತ್ತು. 

ಈ ಸಂಬಂಧ ವಲಯ ಅರಣ್ಯಾಧಿಕಾರಿ ಜಾವೆದ್ ಬಾಷ ಅಂಗಡಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿ 5 ಸಾಗುವಾನಿ ತುಂಡುಗಳನ್ನು ಪತ್ತೆ ಹಚ್ಚಿ ಅರಣ್ಯ ಇಲಾಖೆ ಕಚೇರಿಗೆ ಸಾಗಿಸಿದ್ದಾರೆ.


ಸಕ್ರೆಬೈಲ್ ಕ್ರಾಸ್​ ನಲ್ಲಿ ಭೀಕರ ಅಪಘಾತ! ಕ್ಯಾಂಟರ್​ ಮತ್ತು ಕಾರಿನ ನಡುವೆ ಡಿಕ್ಕಿ!

ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಸಮೀಪ ತೀರ್ಥಹಳ್ಳಿ ರಸ್ತೆಯಲ್ಲಿ ಕಾರು ಹಾಗೂ ಕ್ಯಾಂಟರ್​ ನಡುವೆ ಡಿಕ್ಕಿಯಾಗಿದ್ದು ಘಟನೆಯಲ್ಲಿ ಓರ್ವರು ಗಂಭೀರ ಗಾಯಗೊಂಡಿದ್ದಾರೆ.  ಶಿವಮೊಗ್ಗದಿಂದ  ತೀರ್ಥಹಳ್ಳಿ ಕಡೆ ಹೋಗುತ್ತಿದ್ದ ಕೆಎ 14 ಪಿ 2982  ನಂಬರ್​ನ ಕಾರಿಗೆ ಸಕ್ರೇಬೈಲಿನ ಬಳಿಯಲ್ಲಿ ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಕೆಎ 11-7360 ಕ್ಯಾಂಟರ್ ಡಿಕ್ಕಿ ಹೊಡೆದಿದೆ.  ಮುಖಾಮುಖಿ ಡಿಕ್ಕ್ಕಿಯಾಗಿದೆ ಅಪಘಾತ ನಡೆದ ಬೆನ್ನಲ್ಲೆ ಸ್ಥಳದಿಂದ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಆಶಾ( 35) ಎಂಬುವರಿಗೆ ತಲೆಗೆ ಪೆಟ್ಟಾಗಿದ್ದು ಅವರನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನೆಯಲ್ಲಿ ಕಾರಿನ ಬಲಭಾಗ ನುಜ್ಜುಗುಜ್ಜಾಗಿದೆ.  ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 


ಅಡಿಕೆ ತೋಟಕ್ಕೆ ಹುಲ್ಲು ಕೊಯ್ಯಲು ಹೋಗಿದ್ದ ಮಹಿಳೆಗೆ ಎದುರಾಗಿದ್ದು ಸಾವು!

ಹಿತ್ತಲಿನಲ್ಲಿರುವ ಅಡಿಕೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ಧಾಗ ಹಾವು ಕಚ್ಚಿ ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹರತಾಳಿ ಸಮೀಪದ ಕೆಕೆ ಹುಣಸವಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ

ಹೇಗಾಯ್ತು ಘಟನೆ

ಗ್ರಾಮದ ನಿವಾಸಿ 72 ವರ್ಷದ ಜಯಮ್ಮ ಶನಿವಾರ ಮಧ್ಯಾಹ್ನ ಹುಲ್ಲು ಕೊಯ್ಯುಲು ತೋಟಕ್ಕೆ ತೆರಳಿದ್ದಾರೆ. ಈ ವೇಳೆ ಅವರಿಗೆ ವಿಷದ ಹಾವು ಕಚ್ಚಿದೆ. ಕೂಡಲೇ ಅವರನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಅಷ್ಟರಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಳಿಸಿಕೊಂಡಿದ್ಧಾರೆ.