ಶಿವಮೊಗ್ಗ-ಬೆಂಗಳೂರು ನಡುವೆ ಎಲೆಕ್ಟ್ರಿಕ್​ ಟ್ರೈನ್​ ಓಡಾಟ ಆರಂಭ! ಶಿವಮೊಗ್ಗ ರೈಲು ನಿಲ್ದಾಣಕ್ಕೆ ಆಗಮಿಸಿದ ಜನಶತಾಬ್ದಿ!

Electric train to run between Shivamogga and Bengaluru Janashatabdi arrives at Shimoga railway station

ಶಿವಮೊಗ್ಗ-ಬೆಂಗಳೂರು ನಡುವೆ ಎಲೆಕ್ಟ್ರಿಕ್​ ಟ್ರೈನ್​ ಓಡಾಟ ಆರಂಭ! ಶಿವಮೊಗ್ಗ ರೈಲು ನಿಲ್ದಾಣಕ್ಕೆ ಆಗಮಿಸಿದ ಜನಶತಾಬ್ದಿ!

KARNATAKA NEWS/ ONLINE / Malenadu today/ Jun 9, 2023 SHIVAMOGGA NEWS

ಶಿವಮೊಗ್ಗ-ಬೆಂಗಳೂರು ರೈಲ್ವೆ ಮಾರ್ಗ ವಿದ್ಯುತೀಕರಣ ಪೂರ್ಣಗೊಂಡಿದ್ದು ಇದೇ ಜೂನ್ 17 ರಿಂದ ಈ ಮಾರ್ಗದಲ್ಲಿ ಮೂರು ಟ್ರೈನ್​ಗಳು ವಿದ್ಯುತ್ ಚಾಲಿತ ಇಂಜಿನ್​ನೊಂದಿಗೆ ಸಂಚರಿಸಲಿದೆ ಎಂದು ಹೇಳಲಾಗಿತ್ತು. 

ಇದಕ್ಕೆ ಪೂರಕವಾಗಿ ನಿನ್ನೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮೊದಲ ವಿದ್ಯತ್ ಚಾಲಿತ ಇಂಜಿನ್​​ ಹೊಂದಿರುವ ಟ್ರೈನ್ ಆಗಮಿಸಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಜನಶತಾಬ್ದಿ ಎಕ್ಸ್​ಪ್ರೆಸ್​ ಟ್ರೈನ್​ (12089/KSR Bengaluru - Shivamogga Town Janshatabdi Express)ಆಗಮಿಸುವ ಮೂಲಕ ಇತಿಹಾಸದ ಪುಟದ ದಾಖಲೆಯನ್ನು ಬರೆಯಿತು! 

ಬೆಂಗಳೂರು-ಶಿವಮೊಗ್ಗ ಮಧ್ಯೆ ಮೊದಲ ಬಾರಿಗೆ ವಿದ್ಯುತ್ ರೈಲು ಸಂಚಾರ

ಶಿವಮೊಗ್ಗ-ಬೆಂಗಳೂರು ನಡುವೆ ಮೊದಲ ಬಾರಿಗೆ ಎಲೆಕ್ನಿಕ್‌ ಇಂಜಿನ್‌ ಮೂಲಕ  ಜನಶತಾಬ್ದಿ ರೈಲು ಆಗಮಿಸಿತು. ಈ ಮೊದಲು ಡೀಸೆಲ್ ಎಂಜಿನ್ ನೊಂದಿಗೆ ಈ ಟ್ರೈನ್ ಬರುತ್ತಿತ್ತು.  ಅಂದಾಜು 2 ತಿಂಗಳ ಹಿಂದೆಯೇ  ಶಿವಮೊಗ್ಗ -ಬೆಂಗಳೂರು ನಡುವಿನ ವಿದ್ಯುತೀಕರಣ ಕಾಮಗಾರಿ ಪೂರ್ಣಗೊಂಡಿತ್ತಷ್ಟೆ ಅಲ್ಲದೆ ಅದರ ವಿವಿಧ ಟೆಸ್ಟ್​ಗಳು ನಡೆದಿದ್ದವು. ಇನ್ನೂ ಇದೀಗ ನಿನ್ನೆ ಪರೀಕ್ಷಾರ್ಥ ಸಂಚಾರ ನಡೆಸಿದ್ದು, ಜೂನ್​ 17 ರಂದು ಅಧಿಕೃತವಾಗಿ ಎಲೆಕ್ಟ್ರಿಕ್​ ಲೋಕೊಮೋಟಿವ್ ಇಂಜಿನ್​ ನೊಂದಿಗೆ ಜನಶತಾಬ್ದಿ ಸಂಚರಿಸಲಿದೆ. 

ಶಿವಮೊಗ್ಗ-ಬೆಂಗಳೂರು ರೈಲ್ವೆ ಪ್ರಯಾಣದ ಸಮಯ ಕಡಿಮೆಯಾಗಬಹುದು! ಕಾರಣವೇನು ಗೊತ್ತಾ? ಸಾರ್ವಜನಿಕರಿಗೆ ರೈಲ್ವೆ ಇಲಾಖೆ ನೀಡಿದೆ ಎಚ್ಚರಿಕೆ!? ಏನದು? ವಿವರ ಓದಿ


ಶಿವಮೊಗ್ಗದಿಂದ ವಿಮಾನ ಹಾರಾಟದ ಬಗ್ಗೆ ಸಿಟ್ಟಾದ ಸಂಸದ ಬಿ.ವೈ.ರಾಘವೇಂದ್ರ! ನೀಡಿದ್ರು ಎಚ್ಚರಿಕೆ !

 

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (shivamogga airport) ವಿಮಾನಗಳು ಯಾವಾಗ ಹಾರಾಟ ನಡೆಸುತ್ತವೆ? ಸದ್ಯ ಶಿವಮೊಗ್ಗದ ಜನರ ಆಸಕ್ತಿಯನ್ನೆ ಕೆರಳಿಸುತ್ತಿರುವ ಪ್ರಶ್ನೆಯಿದು! ಒಂದಲ್ಲ ಕಾರಣಗಳಿಂದಾಗಿ ಶಿವಮೊಗ್ಗದಿಂದ ವಿಮಾನ ಟೇಕಾಫ್ ಆಗುತ್ತಿಲ್ಲ. ಇನ್ನೇನು ಮಳೆಗಾಲದಲ್ಲಿಯು ಆಗುವುದು ಡೌಟು ಎನ್ನಲಾಗುತ್ತಿದೆ. ಈ ಮಧ್ಯೆ ಇದೇ ವಿಚಾರಕ್ಕೆ ಸಂಸದ ಬಿ.ವೈ ರಾಘವೇಂದ್ರರವರು ಕೂಡ ಸಿಟ್ಟಾಗಿದ್ದಾರೆ. 

ಹಾವಳಿ ಕೊಟ್ರೆ ಜೈಲು ಗ್ಯಾರಂಟಿ! ಶಿವಮೊಗ್ಗ ಸಿಟಿ ಮೇಲಿದೆ ಪೊಲೀಸರ ಡ್ರೋಣ್​ ಕಣ್ಣು! ಯಾಮಾರಿದ್ರೆ ಖತಂ! ಏನಿದು ಗೊತ್ತಾ ವ್ಯವಸ್ಥೆ

ಈ ಸಂಬಂಧ ನಿನ್ನೆ ಶಿವಮೊಗ್ಗ ನಗರದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಏರ್​ಪೋರ್ಟ್​ ಉದ್ಗಾಟನೆಯಾಗಿದೆ, ಫ್ಲೈಟ್​ ಆಪರೇಷನ್​ಗೆ ಬೇಕಿರುವ ಎಲ್ಲಾ ಸವಲತ್ತುಗಳನ್ನ ನೀಡಲಾಗಿದೆ. ಇಂಡಿಗೋ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡು, ಅವರಿಗೆ ಬೇಕಿರುವ ವಾರ್ಷಿಕ ಸಬ್ಸಿಡಿಯನ್ನ ಸಹ ಒದಗಿಸಲಾಗಿದೆ. ಆದಾಗ್ಯು ಉಡಾನ್​ ಯೋಜನೆಯಡಿಲ್ಲಿ ವಿಮಾನ ಹಾರಾಟಕ್ಕೆ ಇಂಡಿಗೋ ಸಂಸ್ಥೆ ಪ್ರಯತ್ನ ನಡೆಸುತ್ತಿದೆ. ಈ ಕಾರಣಕ್ಕೆ ವಿಮಾನ ಹಾರಾಟ ವಿಳಂಬವಾಗುತ್ತಿದ್ದು, ಇದೆ ವಿಚಾರವಾಗಿ ಎಚ್ಚರಿಕೆಯನ್ನ ಸಹ ನೀಡಲಾಗಿದೆ ಎಂದಿದ್ದಾರೆ. 


ಚೋರಡಿ ಆಕ್ಸಿಡೆಂಟ್​ ನೆನಪಿಸಿದ ಜಕ್ಕನಹಳ್ಳಿ ಅಪಘಾತ! ಲಗೇಜ್​ ಗಾಡಿ ಬೊಲೆರೋ ವಾಹನ ಡಿಕ್ಕಿ! ಹಲವರಿಗೆ ಗಾಯ! ಆಸ್ಪತ್ರೆಗೆ ದೌಡಾಯಿಸಿದ ಸಂಸದ

ಶಿಕಾರಿಪುರ ತಾಲ್ಲೂಕಿನ ಜಕ್ಕನಹಳ್ಳಿ ಬಳಿಯಲ್ಲಿ ಲಗೇಜು ಗಾಡಿಗೆ ಬೊಲೆರೋ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸರಕು ಸಾಗಾಟ ವಾಹನದಲ್ಲಿ ಕುಳಿತಿದ್ದವರು ಸೇರಿದಂತೆ  ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು ಅವರನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಆಸ್ಪತ್ರೆಗೆ ಸಂಸದ ಬಿವೈ ರಾಘವೇಂದ್ರರವರು ಭೇಟಿಕೊಟ್ಟು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. 

ಬಾರ್​ ಕ್ಯಾಶಿಯರ್​ ಹತ್ಯೆಗೆ ಸೊರಬದಲ್ಲಿ ಜನಾಕ್ರೋಶ! ಆರೋಪಿಗಳ ವಿರುದ್ಧ ಸಿಡಿದ ಯುವಕರು!

ನಡೆದಿದ್ದೇನು? 

ಲಗೇಜ್ ಗಾಡಿ, 

ಜಕ್ಕನ ಹಳ್ಳಿ ಬಳಿಯಲ್ಲಿ ಬರುತ್ತಿದ್ದ ಲಗೇಜ್​ ಆಟೋಕ್ಕೆ ಹಿಂಬದಿಯಿಂದ ಬಂದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದಲ್ಲಿ ಕಾಲು ಹೊರಕ್ಕೆ ಹಾಕಿ ಕುಳಿತಿದ್ದವರ ಕಾಲಿಗೆ ಬೊಲೆರೋ ನೇರವಾಗಿ ಡಿಕ್ಕಿಯಾಗಿದೆ. ಪರಿಣಾಮ 5 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಒಟ್ಟು 12 ಮಂದಿಗೆ ಗಾಯಗಳಾಗಿರುವ ಮಾಹಿತಿಯಿದ್ದು, ಈ ಪೈಕಿ ಹಲವರನ್ನ ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ  


ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಬಿ.ಕೆ. ಸಂಗಮೇಶ್​! ಕಾರಣ?




ಶಿವಮೊಗ್ಗ/ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (visl ) ಪುನಶ್ಚೇತನಗೊಳಿಸಿ ಬಂಡವಾಳ ತೊಡಗಿಸುವಂತೆ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್​ ನೇತ್ರತ್ವದ ನಿಯೋಗದ ಸಿಎಂ ಸಿದ್ದರಾಮಯ್ಯ ರನ್ನ ಭೇಟಿಯಾಗಿ ಮನವಿ ಸಲ್ಲಿಸಿದೆ. ಈ ಸಂಬಂಧ  ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನ  ಶಾಸಕ ಬಿ.ಕೆ ಸಂಗಮೇಶ್ವರ್  ಒತ್ತಾಯಿಸಿದ್ದಾರೆ. 

ಬೆಂಗಳೂರಿನ ಶಕ್ತಿ ಭವನದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗ ಈ ಬಗ್ಗೆ  ಚರ್ಚೆ ನಡೆಸಿದ್ದು, ಕಾರ್ಖಾನೆ ಅಭಿವೃದ್ಧಿಪಡಿಸಿ ಬಂಡವಾಳ ತೊಡಗಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಮನವಿ ಸಲ್ಲಿಸಿತು

ರಾಜ್ಯ ಸರ್ಕಾರ 2007 ರಲ್ಲಿ  ಮಂಜೂರು ಮಾಡಿರುವ ಕಬ್ಬಿಣದ ಅದಿರು ಗಣಿಯ ಅಭಿವೃದ್ಧಿ ಕಾರ್ಯಗಳು ಜರುಗುತ್ತಿದ್ದು, 2025 ಅದಿರು ಉತ್ಪಾದಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಈ ನಡುವೆ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ತೀರ್ಮಾನ ತೆಗೆದುಕೊಂಡಿದೆ.  

ರಾಂಗ್​ ಸೈಡ್​ನಲ್ಲಿ ವಾಹನ ಓಡಿಸಬೇಡಿ! ಭೀಕರ ಆಕ್ಸಿಡೆಂಟ್​ನ ಸಾಕ್ಷಿ ತೋರಿಸ್ತಿದೆ ನೋಡಿ ಸಿಸಿಟಿವಿ

ಈ ಹಿಂದೆ ಕಬ್ಬಿಣದ ಅದಿರು ಗಣಿ ಮಂಜೂರು ಮಾಡಿದ್ದಲ್ಲಿ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿತ್ತು. ಈ ಹಿನ್ನಲೆಯಲ್ಲಿ  ಕಾರ್ಖಾನೆಗೆ ಉಕ್ಕು ಪ್ರಾಧಿಕಾರ ಸೂಕ್ತ ಬಂಡವಾಳ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುವಂತೆ ನಿಯೋಗ ಕೋರಿತು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಲಾಗುವುದು. ಅಲ್ಲದೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ರವರಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚನೆ ನೀಡಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು.

ನಿಯೋಗದಲ್ಲಿ ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಪ್ರಧಾನ ಕಾರ್ಯದರ್ಶಿ ಬಸಂತ್‌ಕುಮಾರ್, ಕಾರ್ಯದರ್ಶಿ ಕೆ.ಆರ್ ಮನು, ಖಜಾಂಚಿ ಎಸ್. ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.