SHIVAMOGGA | Jan 23, 2024 | Woman shouts Allahu Akbar in shivamogga | ಶಿವಮೊಗ್ಗದ ಶಿವಪ್ಪ ನಾಯಕ ಸರ್ಕಲ್ನಲ್ಲಿ ನಿನ್ನೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರವರು ಶ್ರೀರಾಮಮಂದಿರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಿಹಿ ಹಂಚುವ ಸಂದರ್ಭದಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿಚಾರ ಸೋಶಿಯಲ್ ಮೀಡಿಯಾದ ಲ್ಲಿ ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ.
ಸೋಶಿಯಲ್ ಮೀಡಿಯಾ
ಮಹಿಳೆ ಘೋಷಣೆ ಹಾಗೂ ದೃಶ್ಯಗಳನ್ನ ಬಳಸಿಕೊಂಡು ಪ್ರಚೋದನೆ ನೀಡುವ ಪೋಸ್ಟರ್ಗಳನ್ನು ಹಾಕಲಾಗುತ್ತಿದೆ. ವಾಟ್ಸ್ಯಾಪ್, ಇನ್ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್ಬುಕ್ಗಳಲ್ಲಿ ಈ ರೀತಿಯ ಫೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಕೆ.ಎಸ್.ಈಶ್ವರಪ್ಪ
ನಿನ್ನೆ ಪ್ರಕರಣದ ಸಂಬಂಧ ಮಹಿಳೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಆನಂತರ ಆಕೆಯು ಮಾನಸಿಕ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದರು. ಆದರೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರು ಇಡಿ ಘಟನೆ ಹಿಂದೆ ಷಡ್ಯಂತ್ರದ ಆರೋಪ ಹೊರಿಸಿದ್ದರು.
ಶಿವಮೊಗ್ಗ ಪೊಲೀಸ್ ಇಲಾಖೆ
ಸ್ಪಷ್ಟನೆ ಹಾಗೂ ಅನುಮಾನದ ಆರೋಪದ ನಡುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಬೇರೆಯದ್ದೆ ರೀತಿಯಲ್ಲಿ ಪ್ರಚಾರಗೊಳ್ಳುತ್ತಿದೆ. ಗೊತ್ತು ಗುರಿಯಿಲ್ಲದ ಅನೌನ್ ಅಕೌಂಟ್ಗಳು ಆಕ್ಟೀವ್ ಆಗಿದ್ದು ವಿಡಿಯೋವನ್ನು ಅಪ್ಲೋಡ್ ಮಾಡಿ ಆಕ್ಷೇಪಾರ್ಹ ಪದಗಳನ್ನು ಪೋಸ್ಟ್ ಮಾಡುತ್ತಿವೆ.ಈ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಗಮನ ಹರಿಸಬೇಕಿದೆ.
ರಾಗಿಗುಡ್ಡದ ಘಟನೆ
ಶಿವಮೊಗ್ಗದಲ್ಲಿ ಈ ಹಿಂದೆ ರಾಗಿಗುಡ್ಡದ ಘಟನೆ ನಡೆದ ಬೆನ್ನಲ್ಲೆ ಅಲ್ಲಿನ ದೃಶ್ಯಗಳು ಎಂದು ಹೇಳಿಕೊಂಡು ಪರವೂರಿನ ದೃಶ್ಯಗಳನ್ನ ಬಳಸಿ ಪ್ರಚೋದನೆ ಮಾಡಲಾಗುತ್ತಿತ್ತು. ಅಂತಹ ವ್ಯಕ್ತಿಗಳ ವಿರುದ್ಧ ಶಿವಮೊಗ್ಗ ಪೊಲೀಸರು ಸೈಬರ್ ಆಕ್ಟ್ ಪ್ರಕಾರ ಕೇಸ್ ಮಾಡಿದ್ದರು. ಇದೀಗ ಮಹಿಳೆಯ ಘೋಷಣೆಯ ವಿಡಿಯೋವನ್ನು ಬಳಸಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಗುಪ್ತಚರ ಇಲಾಖೆ ಗಮನ ಹರಿಸುವುದು ಒಳ್ಳೆಯದು
ಮಲೆನಾಡು ಟುಡೆ ಮನವಿ
ಇನ್ನೂ ನಿನ್ನೆ ನಡೆದ ಘಟನೆ ಬಗ್ಗೆ ಸ್ವತಃ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಮಹಿಳೆಯ ತಂದೆಯು ಮಗಳ ಅವಸ್ಥೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆದಾಗ್ಯು ಸಲ್ಲದ ಸಂಗತಿಗಳನ್ನು ಹರಿಬಿಡುವ ಕೆಲಸ ನಡೆಯುತ್ತಿದ್ದು, ಸಾರ್ವಜನಿಕರು ಇಂತಹ ಸುದ್ದಿಗಳಿಗೆ ಕಿಮ್ಮತ್ತು ನೀಡಬಾರದು. ಅಂತಹ ಉಲ್ಲೇಖಾರ್ಹ ಆಕ್ಷೇಪಾರ್ಹ ಸೋಶಿಯಲ್ ಮೀಡಿಯಾ ಪೋಸ್ಟ್ಗಳನ್ನು ಪೊಲೀಸರಿಗೆ ರವಾನೆ ಮಾಡಿ ಮಾಹಿತಿ ನೀಡಬಹುದು.
