SHIVAMOGGA | Jan 22, 2024 | police investigation , Shivappanayaka Circle | ಶಿವಮೊಗ್ಗ ನಗರದ ಎಸ್ಎನ್ ಸರ್ಕಲ್ ನಲ್ಲಿ ಮಹಿಳೆ ಅಲ್ಲಾಹು ಅಕ್ಬರ್ ಘೋಷಣೆಯನ್ನು ಕೂಗಿದ ವಿಚಾರ ಸಂಬಂಧ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಪ್ಪನಾಯಕ ಸರ್ಕಲ್ ನಲ್ಲಿ ನಡೆದಿದ್ದೇನು?
ಶಿವಮೊಗ್ಗ ನಗರದ ಶಿವಪ್ಪನಾಯಕ ಸರ್ಕಲ್ ನಲ್ಲಿ ನಡೆದ ವಿಚಾರವನ್ನು ಮಾಧ್ಯಮಗಳಿಗೆ ವಿವರಿಸಿದ ಎಸ್ಪಿಯವರು ಇವತ್ತು ಬೆಳಗ್ಗೆ 11 ಗಂಟೆ ಸುಮಾರಿಗೆ ಫ್ಲವರ್ ಮಾರ್ಕೆಟ್ ರೋಡ್ನಿಂದ ಎಸ್ಎನ್ ಸರ್ಕಲ್ನಿಂದ ಅಶೋಕ ಸರ್ಕಲ್ ಗೆ ಬರುತ್ತಿದ್ದರು. ಈ ವೇಳೆ ಶಿವಪ್ಪನಾಯಕ ಸರ್ಕಲ್ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ರಸ್ತೆ ಮಧ್ಯೆ ತಮ್ಮ ವೆಹಿಕಲ್ ನಿಲ್ಲಿಸಿಕೊಂಡು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು.
ಈ ವೇಳೆ ಪೊಲೀಸ್ ಸಿಬ್ಬಂದಿ ದಾರಿಮಧ್ಯೆ ನಿಲ್ಲಿಸ ಬೇಡಿ ವಾಹವನ್ನು ಸೈಡ್ಗೆ ನಿಲ್ಲಿಸಿದ ಟ್ರಾಫಿಕ್ಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಅಲ್ಲಿ ಕೆಲವೊಂದು ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು. ಅದೇ ಸಂದರ್ಭದಲ್ಲಿ ಈಕೆಯು ಸಹ ಘೋಷಣೆಯನ್ನು ಕೂಗಿದ್ದಾಳೆ. ತಕ್ಷಣವೇ ಅಲ್ಲಿಯೇ ಇದ್ದ ಪೊಲೀಸರು ಆಕೆಯನ್ನು ಪೊಲೀಸ್ ವ್ಯಾನ್ನಲ್ಲಿ ಕರೆದುಕೊಂಡು ಬಂದು ಪೊಲೀಸ್ ಸ್ಟೇಷನ್ನಲ್ಲಿ ವಿಚಾರಣೆ ನಡೆಸಿದ್ದಾರ.
ಈ ವಿಚಾರ ನಡೆಯುವುದರಲ್ಲಿಯೇ ಆಕೆಯ ತಂದೆಯು ಸಹ ಆಕೆಯನ್ನ ಹುಡುಕಿಕೊಂಡು ಬಂದಿರುತ್ತಾರೆ. ವಿಷಯ ತಿಳಿದು ಸ್ಠೇಷನ್ಗೆ ಬಂದ ಅವರು ದಾಖಲಾತಿಗಳನ್ನು ಸಹ ತೋರಿಸುತ್ತಾರೆ. ಶಿವಮೊಗ್ಗದ ವಿವಿಧ ನರ್ಸಿಂಗ್ ಹೋಮ್ಗಳಲ್ಲಿ 2018 ರಿಂದಲೂ ಟ್ರೀಟ್ಮೆಂಟ್ ನೀಡಲಾಗುತ್ತಿದೆ ಆಕೆ ಎಂದು ತಿಳಿಸಿದ್ದಾರೆ. ಆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಎಸ್ಪಿ ಮಿಥುನ್ ಕುಮಾರ್ ರವರು ಹೇಳಿದ್ದಾರೆ.
ಆಕೆ ಮೂಲತಃ ಶಿವಮೊಗ್ಗದವರಾಗಿದ್ದು, 2018 ರಿಂದಲೂ ಈಕೆ ಟ್ರೀಟ್ಮೆಂಟ್ನಲ್ಲಿದ್ದಾಳೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮುಂದುವರಿದು ಎಲ್ಲಾ ರೀತಿಯಲ್ಲಿ ಪರಿಶೀಲನೆ ನಡೆಸಿ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
