4 ಸ್ಟೇಷನ್‌ , 8 ಕೇಸ್‌ ಒಂದೇ ದಿನ ಕ್ಲೀಯರ್‌ | 15 ಲಕ್ಷ ಮೌಲ್ಯದ ಮಾಲ್‌ ಸೀಜ್‌ | ಸಾಗರ ಪೊಲೀಸರ ಅಡಕೆ ಆಪರೇಷನ್‌ ಸಕ್ಸಸ್‌

Shivamogga and sagara police have successfully solved a series of areca nut theft cases that have been rampant in the Malenadu region over the past month.

4  ಸ್ಟೇಷನ್‌ , 8 ಕೇಸ್‌  ಒಂದೇ ದಿನ ಕ್ಲೀಯರ್‌ | 15 ಲಕ್ಷ ಮೌಲ್ಯದ ಮಾಲ್‌ ಸೀಜ್‌ | ಸಾಗರ ಪೊಲೀಸರ ಅಡಕೆ ಆಪರೇಷನ್‌ ಸಕ್ಸಸ್‌
Shivamogga and sagara police ,Malenadu region , areca nut theft cases

SHIVAMOGGA | MALENADUTODAY NEWS | May 28, 2024  ಮಲೆನಾಡು ಟುಡೆ

ಮಲೆನಾಡಲ್ಲಿ ಕಳೆದೊಂದು ತಿಂಗಳಿನಲ್ಲಿ ವಿಪರೀತವಾಗಿದ್ದ ಅಡಕೆ ಕಳ್ಳತನ ಪ್ರಕರಣಗಳನ್ನ ಭೇದಿಸುವಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ತನಿಖೆಗಾಗಿ ಶಿವಮೊಗ್ಗ ಎಸ್‌ಪಿ ಕಚೇರಿ ಸಿಬ್ಬಂದಿ ಸೇರಿದಂತೆ ಸಾಗರ ತಾಲ್ಲೂಕು ಪೊಲೀಸರನ್ನ ಒಳಗೊಂಡ ತಂಡವನ್ನ ರಚನೆ ಮಾಡಲಾಗಿತ್ತು. ಈ ತಂಡ ಇದೀಗ 8 ಪ್ರಕರಣಗಳನ್ನು ಪತ್ತೆ ಮಾಡಿ ಐವರು ಆರೋಪಿಗಳನ್ನ ಬಂಧಿಸಿದೆ. 

ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಸ್‌ಪಿ ಮಿಥುನ್‌ ಕುಮಾರ್‌ ಒಟ್ಟು 8 ಪ್ರಕರಣಗಳನ್ನು ಪತ್ತೆ ಮಾಡಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟಾರೆ  ₹15.19 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಅಂತಾ ತಿಳಿಸಿದ್ದಾರೆ. ಅಲ್ಲದೆ  ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದ ತುಕ್‌ರಾಜ್‌ (24), ಹಣಮಂತ (24), ರಾಕೇಶ್‌ (20), ಅಭಿಷೇಕ್‌ (20), ಶಿವಕುಮಾರ್‌ (23) ಬಂಧಿತರು ಎಂದು ಮಾಹಿತಿ ನೀಡಿದ್ದಾರೆ. 

ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆ, ಆನಂದಪುರ ಪೊಲೀಸ್‌ ಠಾಣೆ, ಕಾರ್ಗಲ್‌ ಪೊಲೀಸ್‌ ಠಾಣೆ ಮತ್ತು ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 20 ದಿನಗಳಲ್ಲಿ ಹಲವು ಅಡಿಕೆ ಕಳವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಪೊಲೀಸರಿಗೆ ಆರೋಪಿಗಳನ್ನು ಹಿಡಿಯಲೇಬೇಕಾದ ಒತ್ತಡ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ  ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್‌ ತಂಡ ರಚನೆ ಮಾಡಲಾಗಿತ್ತು.

ಈ ತಂಡದಲ್ಲಿ  ಸಾಗರ ಗ್ರಾಮಾಂತರ ಪೊಲೀಸ್‌ ನಿರೀಕ್ಷಕ ಮಹಾಬಲೇಶ್ವರ ಎಸ್‌.ಎನ್‌., ಪಿಎಸ್‌ಐ ಎ.ಆರ್‌. ಮುಂದಿನಮನಿ, ಸಿಬ್ಬಂದಿ ಸನಾವುಲ್ಲಾ, ಶೇಖ್‌ ಫೈರೋಜ್‌ ಅಹ್ಮದ್, ರವಿಕುಮಾರ್‌, ಪ್ರವೀಣ್‌ಕುಮಾರ್‌, ಗುರುಬಸವರಾಜ, ಗಿರೀಶ್‌ ಬಾಬು, ಗುರುರಾಜ, ಇಂದ್ರೇಶ್‌, ವಿಜಯ್‌ಕುಮಾರ್‌ ರವರಿದ್ಗ್ದರು

The Shivamogga police have successfully solved a series of areca nut theft cases that have been rampant in the Malenadu region over the past month. A special team comprising Shivamogga SP office staff and Sagar taluk police was formed to investigate these cases. The team has cracked 8 cases and arrested five accused. SP Mithun Kumar reported that stolen goods worth ₹15.19 lakhs have been recovered, and the arrested individuals are Tukraj (24), Hanumantha (24), Rakesh (20), Abhishek (20), and Shivakumar (23), all from Haraguvalli village in Shikaripura taluk. Several areca nut theft cases were registered in the jurisdiction of Sagar Rural Police Station, Anandapur Police Station,