ಚೀಲೂರು ಡಬ್ಬಲ್​ ಅಟ್ಯಾಕ್​ ಕೇಸ್​ನಲ್ಲಿ ಮತ್ತೆ ರೋಚಕ ಟ್ವಿಸ್ಟ್! ಆರೋಪಿಗಳ ಬಂಧನವೇ ಆಗಿಲ್ಲ! ಎಸ್ಕೇಪ್​ ಆದವರ ಬಗ್ಗೆ ಸುದ್ದಿ ಕೊಟ್ಟವರ್ಯಾರು

An exciting twist again in the chiluru double attack case! The accused have not been arrested! Who gave the news about those who escaped

ಚೀಲೂರು ಡಬ್ಬಲ್​ ಅಟ್ಯಾಕ್​ ಕೇಸ್​ನಲ್ಲಿ ಮತ್ತೆ ರೋಚಕ ಟ್ವಿಸ್ಟ್!  ಆರೋಪಿಗಳ ಬಂಧನವೇ ಆಗಿಲ್ಲ! ಎಸ್ಕೇಪ್​ ಆದವರ ಬಗ್ಗೆ ಸುದ್ದಿ ಕೊಟ್ಟವರ್ಯಾರು

MALENADUTODAY.COM  |SHIVAMOGGA| #KANNADANEWSWEB

ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಸಂಬಂಧ ದಾವಣಗೆರೆ ಪೊಲೀಸರು ಆಂಧ್ರದ ಗುಂಟೂರಿನ ರೈಲ್ವೆ ಸ್ಟೇಷನ್​ನಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ಮೂಲಗಳಿಂದಲೇ ಲಭ್ಯವಾಗಿತ್ತು.  ಆದರೆ , ಈ ಪ್ರಕರಣ ಇದೀಗ ರೋಚಕ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸ್ ಹಾಗೂ ಭೂಗತ ಲೋಕದ ನಡುವಿನ ಮೈಂಡ್ ಗೇಮ್ ಆಗಿ ಬದಲಾಗುತ್ತಿದೆ. 

READ | Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

ಇದಕ್ಕೆ ಸಾಕ್ಷಿ ಎಂಬಂತೆ ಮಲೆನಾಡು ಟುಡೆಗೆ ದಾವಣೆಗೆರೆ ಪೊಲೀಸ್ ಮೂಲಗಳಿಂದ ಮಾಹಿತಿಯೊಂದು ಲಭ್ಯವಾಗಿದ್ದು, ಡಬ್ಬಲ್​ ಅಟ್ಯಾಕ್​ನ ಮಾಸ್ಟರ್ ಮೈಂಡ್ ತಮಿಳ್ ರಮೇಶ್​ ಅರೆಸ್ಟ್ ಆಗಿಲ್ಲ ಎನ್ನಲಾಗುತ್ತಿದೆ. ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಲು ತೆರಳಿದ್ದು ನಿಜ ಆದರೆ, ಆ ಸಂದರ್ಭದಲ್ಲಿ ಇಬ್ಬರು ಎಸ್ಕೇಪ್​ ಆಗಿದ್ದಾರೆ. ಅಷ್ಟರಲ್ಲಿ ಭೂಗತ ಲೋಕದ ಕಾಣದ ಕೈಗಳು ಮಾಧ್ಯಮಗಳಿಗೆ ಫೋಟೋ ಹಾಗೂ ಹೆಸರು ಸಮೇತ ಸುದ್ದಿಯೊಂದನ್ನ ರವಾನೆ ಮಾಡಿದೆ. 

ಸೀನ್​ ಕ್ರಿಯೇಟ್ ಮಾಡ್ತಿರೋರು ಯಾರು? 

ಚೀಲೂರಿನ ಕೇಸ್​ನಲ್ಲಿ ದಾವಣಗೆರೆ ಪೊಲೀಸರು ಭೂಗತ ಲೋಕದ ಕ್ರೈಂ ಸಿನಿಮಾ ಸೀನ್​ಗಳಿಗೆ ತಲೆಬಗ್ಗಿಸುತ್ತಿಲ್ಲ. ಈ ಮೊದಲು ಶಿಗ್ಗಾವಿ ಪೊಲೀಸರಿಗೆ ನಾಲ್ವರು ಸರೆಂಡರ್ ಆಗಿದ್ದರು. ಆ ಸೀನ್​ನಲ್ಲಿ ನ್ಯಾಮತಿ ಪೊಲೀಸರು, ಪತ್ರಕರ್ತನೊಬ್ಬನನ್ನ ಲಿಫ್ಟ್ ಮಾಡಿ ಆರೋಪಿಗಳಿಗೆ ಶಾಕ್​ ಕೊಟ್ಟಿದ್ದರು. 

ಇದರ ಬೆನ್ನಲ್ಲೆ ತಮಿಳ್ ರಮೇಶ್​ ಹಾಗೂ ದೀಪು ಎಂಬಿಬ್ಬರು ಆರೆಸ್ಟ್ ಆಗಿದ್ದಾರೆ ಎಂಬ ಸುದ್ದಿಯನ್ನ ನಿನ್ನೆ ರಾತ್ರಿ ಡಬ್ಬಲ್​ ಅಟ್ಯಾಕ್​ ಕೃತ್ಯದ ಹಿಮ್ಮೇಳದಲ್ಲಿರುವವರು ಹರಿಬಿಟ್ಟಿದ್ದರು. ರಾಜಧಾನಿಯ ಸುದ್ದಿಮೂಲಗಳಲ್ಲಿಯೇ ಈ  ಸುದ್ದಿ ಬಿತ್ತರವಾದ್ದರಿಂದ ಅದರ ಅಸಲಿಯತ್ತಿನ ಬಗ್ಗೆ ಅನುಮಾನ ಉಳಿದಿರಲಿಲ್ಲ. ಇದೀಗ ಮಲೆನಾಡು ಟುಡೆ ತಂಡ ವರದಿ ಸಂಬಂಧ ಕೆಲವೊಂದು ಮಾಹಿತಿ ಹೆಕ್ಕಲು ಮುಂದಾದ ಹೊತ್ತಿನಲ್ಲಿ ದಾವಣಗೆರೆ ಪೊಲೀಸ್​ ಮೂಲಗಳು ಆರೋಪಿಗಳು ಅರೆಸ್ಟ್ ಆಗಿಲ್ಲ. ಇದೊಂದು ಸುಳ್ಳು ಮಾಹಿತಿ ಎನ್ನುತ್ತಿದ್ದಾರೆ. 

ಹೆಸರು ಫೋಟೋ ಕೊಟ್ಟವರು ಯಾರು? ಯಾಕೆ? 

ಆಂಧ್ರದ ಗುಂಟೂರು ಸ್ಟೇಷನ್​ನಲ್ಲಿ ಇಬ್ಬರು ಅರೆಸ್ಟ್ ಆಗಿದ್ದಾರೆ ಅಂತಾ ಇಬ್ಬರ ಫೋಟೋಗಳನ್ನ ಮಾಧ್ಯಮಗಳಿಗೆ ಕಳುಹಿಸಿಕೊಟ್ಟವರು ಯಾರು ಎಂಬುದನ್ನ ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಆದರೆ ಪೊಲೀಸರ ಪಿಸ್ತೂಲ್​ ಭಯಕ್ಕೆ ಈ ರೀತಿ ಆಟ ಕಟ್ಟುತ್ತಿದ್ಧಾರೆ ಎಂಬ ವಿಚಾರ  ಗೊತ್ತಾಗುತ್ತಿದೆ.  ಒಟ್ಟಾರೆ, ರಮೇಶ್ ಹಾಗೂ ದೀಪು ಬಂಧನದ ಕೇಸ್ ಕುತೂಹಲ ಮೂಡಿಸಿದ್ದು,  ಕ್ಷಣಕ್ಷಣಕ್ಕೂ ದಾವಣಗೆರೆ ಪೊಲೀಸರು ಆರೋಪಿಗಳ ಗೇಮ್​ಪ್ಲ್ಯಾನ್​ಗಳನ್ನ ಫೇಲ್ ಮಾಡುತ್ತಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur