ಯುವಕನ ಜೊತೆಗೆ ಕಾಡಿಗೆ ಹೋದ ಬಾಲಕಿಗೆ ಶಾಕ್‌ | ಆರೋಪಿ ಅರೆಸ್ಟ್!

Girl goes to forest with youth shocked accused arrested‌ POCSO case

ಯುವಕನ ಜೊತೆಗೆ ಕಾಡಿಗೆ ಹೋದ ಬಾಲಕಿಗೆ ಶಾಕ್‌ |  ಆರೋಪಿ ಅರೆಸ್ಟ್!
POCSO case

Shivamogga Apr 18, 2024  ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದುವೆಯಾಗಿ ವಂಚಿಸಿ ಅಪಹರಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ ಸಂಬಂಧ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನ ಪೊಲೀಸ್‌ ಸ್ಟೇಷನ್‌ ಒಂದರಲ್ಲಿ ಕೇಸ್‌ ದಾಖಲಾಗಿದೆ. 

ಸೊರಬ ತಾಲ್ಲೂಕು ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು ಬಾಲಕಿಯ ತಾಯಿ ನೀಡಿದ ಕಂಪ್ಲೆಂಟ್‌ ಆಧರಿಸಿ ಕೇಸ್‌ ದಾಖಲಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಈ ಭಾಗದ ಗ್ರಾಮವೊಂದರ ಯುವಕ ಅದೇ ಗ್ರಾಮದ ನಿವಾಸಿ ಬಾಲಕಿ ಜೊತೆ ಸಖ್ಯ ಬೆಳಸಿದ್ದಾನೆ. ಆಕೆಯನ್ನ ಪ್ರೀತಿಸುವುದಾಗಿ ಹೇಳಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಕಾಡಿನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕವಾಗಿ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಬಳಿಕ ಆಕೆಯನ್ನು ದೂರದ ಸಂಬಂಧಿಕರ ಮನೆಯಲ್ಲಿ ಈತ ಪರಾರಿಯಾಗಿದ್ದ. ಈ ಸಂಬಂಧ ಬಾಲಕಿ ತಾಯಿ ಕೊಟ್ಟ ದೂರನ್ನ ಆಧರಿಸಿ ಪೊಲೀಸರು ಕ್ರಮ ಕೈಗೊಂಡು ಪೋಕ್ಸೋ ಕೇಸ್‌ ನಡಿ ಆರೋಪಿಯನ್ನು ಬಂಧಿಸಿದ್ದಾರೆ.