Shivamogga Mar 18, 2024 Narendra Modi to visit Shimoga ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ. ಈ ನಿಟ್ಟಿನಲ್ಲಿ ಹೈಅಲರ್ಟ್ ಭದ್ರತೆ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೈ ರೋಡ್ ಸಾಗುವ ಮಾರ್ಗದಲ್ಲಿ ಜೀರೋ ಟ್ರಾಫಿಕ್ ಮಾಡಲಾಗಿದೆ. ಹೀಗಾಗಿ ಇವತ್ತು ಸೋಮವಾರ ವಾಹನ ಸವಾರರಿಗೆ ಬೆಳಗ್ಗೆ ಬೆಳಗ್ಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ಆಫೀಸ್‌ಗೆ ಹೋಗುವವರಿಗೆ, ಮಕ್ಕಳನ್ನ ಸ್ಕೂಲ್‌ಗೆ ಬಿಡುವವರಿಗೆ, ವ್ಯಾಪಾರಕ್ಕೆ ಹೋಗುವರಿಗೆ ಬ್ಯಾರಿಕೇಡ್‌ಗಳು ಅಡ್ಡಿಯಾಗಿವೆ. ಜೀರೋ ಟ್ರಾಫಿಕ್ ರೋಡ್‌ಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.
ಮನೆ ಬಾಗಿಲಿಗೆ ಹೋಗಲು ಸಹ ವಾಹನ ಸವಾರರು ಪರದಾಡುವಂತಾಗಿದೆ. ಮಾಹಿತಿ ಇರದವರಂತೂ ಒಂದೊಂದು ರಸ್ತೆಗೂ ಹೋಗಿ ಅಲ್ಲಿನ ಬ್ಯಾರಿಕೇಡ್‌ಗಳನ್ನ ನೋಡಿ ವಾಪಸ್ ಆಗುತ್ತಿದ್ದಾರೆ. ಇನ್ನೂ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಬಗ್ಗೆ ಮಲೆನಾಡು ಟುಡೆ ರೂಟ್ ಮ್ಯಾಪ್‌ನ ವರದಿ ಮಾಡಿತ್ತು. ಅದರ ವಿವರಗಳನ್ನು ವಾಹನನ ಸವಾರರು ನೋಡಿ ಕೊಂಡು ಓಡಾಡಬಹುದಾಗಿದೆ.
ಮೋದಿ ಸಮಾವೇಶಕ್ಕಾಗಿ ಫ್ರೀಡಂ ಪಾರ್ಕ್ ತಲುಪುವುದು ಹೇಗೆ? ಇಲ್ಲಿದೆ ರೂಟ್ ಮ್ಯಾಪ್! ಪಾರ್ಕಿಂಗ್ ವಿವರ ತಿಳಿದುಕೊಳ್ಳಿ
ಪ್ರಧಾನಿ ನರೇಂದ್ರ ಮೋದಿ ಸಮಾವೇಶ ! ವಾಹನ ಸಂಚಾರ ಮಾರ್ಗ ಬದಲಾವಣೆ! ಪಾರ್ಕಿಂಗ್ ನಿಷೇಧ !ಈಗಲೇ ಮಾಹಿತಿ ತಿಳಿದುಕೊಳ್ಳಿ
