ಪ್ರಧಾನಿ ನರೇಂದ್ರ ಮೋದಿ ಸಮಾವೇಶ ! ವಾಹನ ಸಂಚಾರ ಮಾರ್ಗ ಬದಲಾವಣೆ! ಪಾರ್ಕಿಂಗ್‌ ನಿಷೇಧ !ಈಗಲೇ ಮಾಹಿತಿ ತಿಳಿದುಕೊಳ್ಳಿ

Prime Minister Narendra Modi's rally! Change in the route of traffic! Parking ban!Know the information now

ಪ್ರಧಾನಿ ನರೇಂದ್ರ ಮೋದಿ ಸಮಾವೇಶ ! ವಾಹನ ಸಂಚಾರ ಮಾರ್ಗ ಬದಲಾವಣೆ! ಪಾರ್ಕಿಂಗ್‌ ನಿಷೇಧ !ಈಗಲೇ ಮಾಹಿತಿ ತಿಳಿದುಕೊಳ್ಳಿ
Prime Minister Narendra Modi rally, Change in the route of traffic

shivamogga Mar 17, 2024 Prime Minister Narendra Modi rally, Change in the route of traffic  ನಾಳೆ ಶಿವಮೊಗ್ಗ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರಧಾನಿ ಮೋದಿಯವರ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆಯಿರುವುದರಿಂದ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹಾಗೂ ಶೂನ್ಯ ಸಂಚಾರ ಹಾಗೂ ವಾಹನ ನಿಲುಗಡೆ ನಿಷೇಧ ಸಂಬಂಧ ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಿದೆ. 

ಶೂನ್ಯ ಸಂಚಾರ

ದಿನಾಂಕ:18.3.2024 ರಿಂದ ಬೆಳಗ್ಗೆ 06-00 ರಿಂದ ಸಂಜೆ 06-00 ವರೆಗೆ ಶೂನ್ಯ ಸಂಚಾರ ಸೋಗಾನೆ ವಿಮಾನ ನಿಲ್ದಾಣದಿಂದ ಎಂಆರ್ ಎಸ್ ಸರ್ಕಲ್ -ಶಂಕರಮಠ ಸರ್ಕಲ್ ಕರ್ನಾಟಕ ಸಂಘ-ಶಿವಪ್ಪ ನಾಯಕ ಸರ್ಕಲ್ ಎಎ ಸರ್ಕಲ್-ಅಶೋಕ ಸರ್ಕಲ್-ಹೆಲಿಪ್ಯಾಡ ಸರ್ಕಲ್ ವರೆಗೆ

ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆ ಮಾರ್ಗವಾಗಿ ನಂದಿ ಪೆಟ್ರೋಲ್ ಬಂಕ್ ಕ್ರಾಸ್. ವಿನೋಬನಗರ 60 ಅಡಿ ರಸ್ತೆ, ಸೈಕಲೋತ್ಸವ ಸರ್ಕಲ್, ರಾಜ್ ಕುಮಾರ್ ಸರ್ಕಲ್ ವರೆಗೆ. ಪೊಲೀಸ್ ಚೌಕಿಯಿಂದ ಉಷಾ ಸರ್ಕಲ್ ವರೆಗೆ ಶೂನ್ಯ ಸಂಚಾರ

ಲಕ್ಷ್ಮೀ ಟಾಕೀಸ್ ಸರ್ಕಲ್ ನಿಂದ ಜೈಲು ರಸ್ತೆ,ಕುವೆಂಪು ರಸ್ತೆ ಮಾರ್ಗವಾಗಿ ಸರ್ಕಲ್ ವರಗೆ.

ಸಾರ್ವಜನಿಕ ವಾಹನಗಳ: ಮಾರ್ಗ ಬದಲಾವಣೆ 

(ದಿನಾಂಕ: 18.3.2024 ರಂದು ಬೆಳಿಗ್ಗೆ 06-00 ಗಂಟೆಯಿಂದ ಸಂಜೆ 06-00 ಗಂಟೆಯವರಗೆ)

ಎನ್ ಆರ್ ಪುರದಿಂದ ಭದ್ರಾವತಿ ಕಡೆಗೆ ಹೋಗುವ ವಾಹನಗಳು: ಉಂಬೈಬೈಲು-ಹುಣಸೆಕಟ್ಟೆ ಜಂಕ್ಷನ್ ಮೂಲಕ ಭದ್ರಾವತಿಗೆ ಹೋಗುವುದು.

ಶಿಕಾರಿಪುರ, ಹೊನ್ನಾಳಿ ಮತ್ತು ದಾವಣಗೆರೆ ಕಡೆಗೆ ಎನ್ ಆರ್ ಪುರ ಕಡೆಗೆ ಹೋಗುವ ವಾಹನಗಳು:-ಎನ್ ಟಿ ರಸ್ತೆ ಮೂಲಕ ಎನ್ ಆರ್ ಪುರಕ್ಕೆ ಹೋಗುವುದು.

ಎಂ.ಆರ್.ಎಸ್ ಸರ್ಕಲ್ ಕಡೆಯಿಂದ ಬಿ,ಹೆಚ್ ರಸ್ತೆಯ ಮಾರ್ಗವಾಗಿ ಬಸ್ ಸ್ಟ್ಯಾಂಡ್ ಮತ್ತು ಸಾಗರ ತೀರ್ಥಹಳ್ಳಿ, ಹೊಸನಗರ ಕಡೆಗೆ ಹೋಗುವ ದ್ವಿಚಕ್ರ , ನಾಲ್ಕು ಚಕ್ರ ಮತ್ತು ಎಲ್ಲಾ ರೀತಿಯ ವಾಹನಗಳು ಎಂ.ಆರ್ ಎಸ್ ನಿಂದ ಬೈಪಾಸ್ ಮಾರ್ಗವಾಗಿ ಸಂದೇಶ್ ಮೋಟಾರ್ಸ್ ಸರ್ಕಲ್ ಮಂಡ್ಲಿ ಸರ್ಕಲ್ - ಗೋಪಾಳ- ಆಲ್ಕೊಳ ಸರ್ಕಲ್ ಮಾರ್ಗವಾಗಿ ಹೋಗುವುದು.

ಭದ್ರಾವತಿ, ಬೆಂಗಳೂರು ಕಡೆಗೆ ಹೋಗುವ ದ್ವಿಚಕ್ರ, ನಾಲ್ಕು ಚಕ್ರ ಮತ್ತು ಎಲ್ಲಾ ರೀತಿಯ ವಾಹನಗಳು ಆಲ್ಕೊಳ ಸರ್ಕಲ್- ಗೋಪಾಳ - ಮಂಡ್ಲಿ ಸರ್ಕಲ್ -ಸಂದೇಶ್ ಮೋಟಾರ್ಸ್ ಸರ್ಕಲ್- ಬೈಪಾಸ್ ಮಾರ್ಗವಾಗಿ ಹೋಗುವುದು.

ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು:- ಆಲ್ಕೊಳ  ಸರ್ಕಲ್ -ಗೋಪಾಳ ಸರ್ಕಲ್-ನ್ಯೂ ಮಂಡ್ಲಿ- ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿಗೆ ರಸ್ತೆಗೆ ಸೇರುವುದು.

ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು:- ನ್ಯೂಮಂಡ್ಲಿ ಸರ್ಕಲ್- ಗೋಪಾಳ ಸರ್ಕಲ್- ಅಯ್ಯೋಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರುವುದು.

ಶಿವಮೊಗ್ಗ ದಿಂದ ಶಿಕಾರಿಪುರ, ನ್ಯಾಮತಿ ಸೊರಬ ಕಡೆ ಹೋಗುವ ಎಲ್ಲಾ ವಾಹನಗಳು- ಆಯನೂರು- ಹಾರನಹಳ್ಳಿ-ಸವಳಂಗ ಮಾರ್ಗವಾಗಿ ಚಲಿಸುವುದು.

ಶಿಕಾರಿಪುರ ನ್ಯಾಮತಿ ಸೊರಬ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಎಲ್ಲಾ ವಾಹನಗಳು  ಸವಳಂಗ- ಹಾರಳಿ ಅಯನೂರು-ಮಾರ್ಗವಾಗಿ ಶಿವಮೊಗ್ಗಕ್ಕೆ ಬರುವುದು.

ಶಿವಮೊಗ್ಗ ನಗರದಿಂದ ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡಗಳಿಗೆ ಹೋಗುವ ಎಲ್ಲಾ ವಾಹನಗಳು  ರಾಗಿಗುಡ್ಡ -ಕುವೆಂಪು ನಗರದ ಮುಖಾಂತರ ಚಲಿಸುವುದು.

ಅಬ್ಬಲಗೆರೆ ಕೊಮ್ಮನಾಳ್ -ಕುಂಚೇನಹಳ್ಳಿ- ತಾಂಡಗಳಿಂದ ಶಿವಮೊಗ್ಗ ನಗರಕ್ಕೆ ಬರುವ ಎಲ್ಲಾ ವಾಹನಗಳು:-ಕುವೆಂಪು ನಗರ- ರಾಗಿಗುಡ್ಡ- ಸಂಗೋಳ್ಳಿರಾಯಣ್ಣ ಸರ್ಕಲ್- ಮುಖಾಂತರ ಚಲಿಸುವುದು.

ಕುವೆಂಪು ರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣದ ಕಡೆಗೆ ಅಥವಾ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಸಂಚರಿಸುವ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸವಾರರು ಜೈಲು ಸರ್ಕಲ್ ನಿಂದ ಎಡಕ್ಕೆ ತಿರುಗಿ, ಶಿವಮೊಗ್ಗ ಆಪ್ಟಿಕಲ್ಸ್ ಗೌರವ ಲಾಡ್ಜ್ ಸರ್ಕಲ್ ನಿಂದ ಬಲಕ್ಕೆ ತಿರುಗಿ ಬಸ್ಟ್ಯಾಂಡ್ ಗೆ ಬಂದು ಸೇರುವುದು.

ಹೆಲಿಪ್ಯಾಡ್ ಸರ್ಕಲ್ ಕಡೆಯಿಂದ ಜೈಲು ಸರ್ಕಲ್ , ಶಿವಮೂರ್ತಿ ಸರ್ಕಲ್ ಕಡೆಗೆ ಹೋಗುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಸವಾರರು ಅಶೋಕ ಸರ್ಕಲ್ ಮೂಲಕ ಬಿ.ಹೆಚ್ ರಸ್ತೆ ಗುಜರಿಕ್ರಾಸ್ ನಲ್ಲಿ (ವಿನಾಯಕ ಟಾಕೀಸ್ ಪಕ್ಕದ ರಸ್ತೆಯಲ್ಲಿ) ಎಡಕ್ಕೆ ತಿರುಗಿ ಗೌರವ ಲಾಡ್ಜ್ ಸರ್ಕಲ್ ಮಾರ್ಗವಾಗಿ ಜೈಲ್ ಸರ್ಕಲ್ ತಲುಪುವುದು.

ಪೊಲೀಸ್ ಚೌಕಿ ಯಿಂದ ಬಸ್ ಸ್ಟ್ಯಾಂಡ್ ಕಡೆಗೆ ಬರುವಂತಹ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸವಾರರು ಪೊಲೀಸ್ ಚೌಕಿ -ಕರಿಯಣ್ಣ ಬಿಲ್ಡಿಂಗ್ -ಅಮ್ಮೊಳ ಸರ್ಕಲ್ -ಆಯನೂರು ಗೇಟ್ ಮಾರ್ಗವಾಗಿ ಬಸ್ಟ್ಯಾಂಡ್ ಬಂದು ಸೇರುವುದು.

ಲಕ್ಷ್ಮೀ ಟಾಕೀಸ್ ಸರ್ಕಲ್ ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಬರುವ ದ್ವಿಚಕ್ರ ಮತ್ತು ನಾಲ್ಕ ಚಕ್ರ ವಾಹನ ಸವಾರರು ಶಿವಮೂರ್ತಿ ಸರ್ಕಲ್ ಮಾರ್ಗವಾಗಿ ಮಹಾವೀರ ಸರ್ಕಲ್ -ಗೋಪಿ ಸರ್ಕಲ್ - ಎಎ ಸರ್ಕಲ್ ಮಾರ್ಗವಾಗಿ ಬಸ್ಟ್ಯಾಂಡ್ ಬಂದು ಸೇರುವುದು.

ವಾಹನ ನಿಲುಗಡೆ ನಿಷೇಧ.

ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆ ಮಾರ್ಗವಾಗಿ ನಂದಿ ಪೆಟ್ರೋಲ್ ಬಂಕ್ ಕ್ರಾಸ್ ನಿಂದ ವಿನೋಬನಗರ ಕೆಳದಿ ಚೆನ್ನಮ್ಮ ರಸ್ತೆ (60 ಅಡಿ ರಸ್ತೆ)- ಸೈಕಲೋತ್ಸವ ಸರ್ಕಲ್ ನಿಂದ ವಿನೋಬನಗರ ಕೆ.ಇ.ಬಿ ಅಫೀಸ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

ಹೆಲಿಪ್ಯಾಡ್ ಸರ್ಕಲ್ ನಿಂದ ಕುವೆಂಪು ರಸ್ತೆಯ ಜೈಲ್ ಸರ್ಕಲ್ ವರೆಗೆ ಹಾಗೂ ಜೈಲ್ ಸರ್ಕಲ್ ನಿಂದ ಲಕ್ಷ್ಮೀ ಟಾಕೀಸ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

ರಾಜ್ ಕುಮಾರ್ ಸರ್ಕಲ್ ನಿಂದ ಮೇದಾರಿ ಕೇರಿರಸ್ತೆ ಬೋಮ್ಮನ ಕಟ್ಟೆ ರೈಲ್ವೇ ಗೇಟ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

ಪೊಲೀಸ್‌ ಚೌಕಿ ಯಿಂದ ರೈಲ್ವೇ ಟ್ರ್ಯಾಕ್ ಪಕ್ಕದಲ್ಲಿ ಶನೇಶ್ವರ ದೇವಸ್ಥಾನ ರಸ್ತೆ ಮಾರ್ಗವಾಗಿ ಬೊಮ್ಮನ ಕಟ್ಟೆ ರೈಲ್ವೇ ಗೇಟ್ ಗೆ ಹೋಗುವ ರಸ್ತೆ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

ಆಲ್ಕೊಳ ಸರ್ಕಲ್ ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಉಷಾ ಸರ್ಕಲ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.

ಸೋಗಾನೆ ವಿಮಾನ ನಿಲ್ದಾಣನಿಂದ ಎಂ. ಆರ್. ಎಸ್ ಸರ್ಕಲ್ -ವಿದ್ಯಾನಗರ -ಶಂಕರಪುರ ಸರ್ಕಲ್- ಕರ್ನಾಟಕ ಸಂಘ ಎಸ್ ಎನ್ ಸರ್ಕಲ್ -ಎಎ ಸರ್ಕಲ್ - ಅಶೋಕ ಸರ್ಕಲ್ದು ಹೆಲಿಪ್ಯಾಡ್ ಸರ್ಕಲ್- ವರೆಗೆ ರಸ್ತೆ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧ.