riponpete : ಜುಮ್ಮಾ ಮಸೀದಿ ಎದುರು ಮದ್ಯದಂಗಡಿಗೆ ಅಬಕಾರಿ ಇಲಾಖೆ ಗ್ರೀನ್​ ಸಿಗ್ನಲ್​! ರಿಪ್ಪನ್​ಪೇಟೆಯಲ್ಲಿ ಆಕ್ರೋಶ

riponpete Excise department gives green signal to liquor shop in front of Jumma Masjid in Riponpet, Protest at Riponpet

riponpete : ಜುಮ್ಮಾ ಮಸೀದಿ ಎದುರು ಮದ್ಯದಂಗಡಿಗೆ ಅಬಕಾರಿ ಇಲಾಖೆ ಗ್ರೀನ್​ ಸಿಗ್ನಲ್​! ರಿಪ್ಪನ್​ಪೇಟೆಯಲ್ಲಿ ಆಕ್ರೋಶ
riponpete : ಜುಮ್ಮಾ ಮಸೀದಿ ಎದುರು ಮದ್ಯದಂಗಡಿಗೆ ಅಬಕಾರಿ ಇಲಾಖೆ ಗ್ರೀನ್​ ಸಿಗ್ನಲ್​! ರಿಪ್ಪನ್​ಪೇಟೆಯಲ್ಲಿ ಆಕ್ರೋಶ

riponpete : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್​ಪೇಟೆಯಲ್ಲಿ ಮಸೀದಿಯ ಸಮೀಪದಲ್ಲಿಯೇ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗುತ್ತಿದೆ, ಇದನ್ನ  ತಡೆಯಬೇಕು ಎಂದು ಆಗ್ರಹಿಸಿ ಈ ಹಿಂದೆಯೇ ಪ್ರತಿಭಟನೆಗಳು ನಡೆದಿದ್ದವು. ಆದಾಗ್ಯು  ಹೊಸನಗರ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿನ ಜುಮ್ಮಾ ಮಸೀದಿ ಮುಂಭಾಗದ ರಾಯಲ್ ಕಂಫರ್ಟ್ ಕಟ್ಟಡದಲ್ಲಿ ಮದ್ಯದಂಗಡಿ ಆರಂಭಿಸುವ ಪ್ರಯತ್ನ ಮುಂದುವರಿದಿದೆ. ಇದನ್ನ ಖಂಡಿಸಿ ರಿಪ್ಪನ್‌ಪೇಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಮತ್ತು ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು.

*Shivamogga news : ಕಾಲೇಜು ಕ್ಯಾಂಪಸ್‌ಗಳಲ್ಲಿ ಹರಡುತ್ತಿರುವ ಗೋಡ್ಸೆ ವೈರಸ್*

ಕಳೆದ ಒಂದು ವಾರದ ಹಿಂದಷ್ಟೆ, ಈ ಸಂಬಂಧ  ಶಿವಮೊಗ್ಗ ಅಬಕಾರಿ ಜಿಲ್ಲಾಧಿಕಾರಿಗಳಿಗೂ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗೆ ರಿಪ್ಪನ್​ಪೇಟೆಯಿಂದ ನಿಯೋಗವೊಂದು ಭೇಟಿ ಕೊಟ್ಟಿತ್ತು. ಅಲ್ಲದೆ  ಪ್ರಾರ್ಥನಾ ಮಂದಿರದ ಸನಿಹದಲ್ಲಿ ಸಿಎಲ್-7 ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಲಾಗಿತ್ತು. 

ಇದರ ನಡುವೆಯೇ  ಜಿಲ್ಲಾ ಅಬಕಾರಿ ಇಲಾಖೆ  ಮದ್ಯದಂಗಡಿ ಆರಂಭಕ್ಕೆ ಗ್ರೀನ್​ಸಿಗ್ನಲ್​ ಕೊಟ್ಟಿದೆ. ಇದು ಇಲ್ಲಿನವರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಸಾರ್ವಜನಿಕರು ಪ್ರತಿಭಟನೆ ನಡೆಸ್ತಿದ್ದ ಸ್ಥಳಕ್ಕೆ ಆಗಮಿಸಿದ ಹೊಸನಗರ ತಹಶೀಲ್ದಾರ್ ವಿ.ಎಸ್ ರಾಜೀವ್ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

*thirthahalli : ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ! ಜ್ಯೋತಿಷಿ ಹೇಳಿದ ದಿಕ್ಕಿನಲ್ಲಿ ಸಿಕ್ಕ ಮೃತದೇಹ*

ಈ ಪ್ರತಿಭಟನೆಯಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುಳಾ ಕೆ ರಾವ್ ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಅಣ್ಣಪ್ಪ,ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಮಹ್ಮದ್ ರಫಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಸದಸ್ಯರಾದ ಆಸೀಫ಼್ ಭಾಷಾಸಾಬ್, ಡಿ.ಈ.ಮಧುಸೂದನ್,ಧನಲಕ್ಷ್ಮಿ, ಸಾರಾಭಿ,ವೇದಾವತಿ ಪರಮೇಶ್ , ಪ್ರಕಾಶ ಪಾಲೇಕರ್, ಗಣಪತಿ ಗವಟೂರು,ಚಂದ್ರೇಶ್ ,ವಿವಿಧ ಪಕ್ಷಗಳ ಮುಖಂಡರಾದ ಅಮೀರ್ ಹಂಜಾ,ಗಣೇಶ್ ಸೂಗೋಡು, ಸಂತೋಷ್ ಆಶ್ರಿತಾ,ಕುಕ್ಕಳಲೇ ಈಶ್ವರಪ್ಪ, ವಾಹಿದ್, ಮುಸ್ತಾಫ್‌ ಅಹಮದ್, ಮಹಮ್ಮದ್ ಶಫ಼ಿ, ಹಸನಬ್ಬ, ಕೆ.ಹೆಚ್.ಆರ್.ಮಹಮ್ಮದ್ (ಮೋಣು) ಇನ್ನಿತರ ಸಮಾಜ ಬಾಂಧವರು ಹಾಗೂ ಇತರ ರಾಜಕೀಯ ಪಕ್ಷದ ಮುಖಂಡರು ಪಾಲ್ಗೊಂಡಿದರು.

VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com