thirthahalli : ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ! ಜ್ಯೋತಿಷಿ ಹೇಳಿದ ದಿಕ್ಕಿನಲ್ಲಿ ಸಿಕ್ಕ ಮೃತದೇಹ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ನೆಲ್ಲಿಸರದಲ್ಲಿ ಕಾಣೆಯಾಗಿದ್ದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿಂದಿನ ಸೋಮವಾರ ಮಹಿಳೆ ನಾಪತ್ತೆಯಾಗಿದ್ದು, ಅವರ ಶವ ಕಳೆದ ಶುಕ್ರವಾರ ಪತ್ತೆಯಾಗಿದೆ.  ಮನೆ ಸಮೀಪದ ಗುಡ್ಡದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ  ಪತ್ತೆಯಾಗಿದ್ಧಾರೆ. 

ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

ಘಟನೆಗೆ ಕಾರಣವೇನು ಎಂಬುದು ಇನ್ನಷ್ಟೆ ತನಿಖೆಯಲ್ಲಿ ತಿಳಿದುಬರಬೇಕಿದೆ. ಈ ಘಟನೆಯ ಸಂಬಂಧ ಕಳೆದವಾರದ ಸೋಮವಾರವೆ ಕುಟುಂಬಸ್ಥರು ಕಂಪ್ಲೆಂಟ್ ಕೊಟ್ಟಿದ್ದರು. ಮಹಿಳೆಯು ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವರು ವಾಪಸ್ ಆಗಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಆತಂಕಗೊಂಡಿದ್ದರು. ಆನಂತರ ಈ ಸಂಬಂಧ ಕೊಪ್ಪದಲ್ಲಿನ ಜ್ಯೋತಿಷಿಯೊಬ್ಬರ ಬಳಿ ಹೇಳಿಕೆ ಕೇಳಿದ್ದರು. ಅವರು ಮನೆಯ ಸಮೀಪವೇ ದಿಕ್ಕೊಂದನ್ನು ಸೂಚಿಸಿದ್ದರಂತೆ. ಅಲ್ಲಿಯೇ ಸಮೀಪದ ಗುಡ್ಡವೊಂದರಲ್ಲಿ ಮಹಿಳೆಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೇಸ್ ದಾಖಲಿಸಿದ್ದಾರೆ. 

VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ

Leave a Comment