TODAY INFORMATION : ಸರ್ಕಾರಿ ಕೋಟಾದಡಿ ಡಿ-ಪಾರ್ಮಾ ಕೋರ್ಸ್​ಗೆ​ ಅರ್ಜಿ ಹಾಕಬಹುದು! ಬೆಂಗಳೂರಿನಲ್ಲಿ ಉದ್ಯೋಗವಕಾಶ! ವಿವರ ಇಲ್ಲಿದೆ

This Article Written by / Malenadu Today / ಜನವರಿ 15, 2023

ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿ, ಬೆಂಗಳೂರು ವತಿಯಿಂದ  2022 – 23 ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಮತ್ತು ಕರ್ನಾಟಕದ ಖಾಸಗಿ ಡಿ.ಫಾರ್ಮಸಿ ವಿದ್ಯಾಸಂಸ್ಥೆಗಳಲ್ಲಿರುವ ಸರ್ಕಾರಿ ಕೋಟದಡಿಯಲ್ಲಿ ಪ್ರಥಮ ಡಿ.ಫಾರ್ಮ ಕೋರ್ಸಿನ ಸೀಟುಗಳ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಪರೀಕ್ಷಾ ಪ್ರಾಧಿಕಾರ ಮಂಡಳಿಯ ವೆಬ್‍ಸೈಟ್‍ನ www.beadpharmacy.org  ಮೂಲಕ ಸಲ್ಲಿಸಬೇಕು. ಅರ್ಜಿಗಳನ್ನು ಜನವರಿ 20 ರೊಳಗೆ ಸಲ್ಲಿಸಬೇಕು. ಸೀಟು ಹಂಚಿಕೆಯ ಪ್ರಕ್ರಿಯೆಯ ದಿನಾಂಕ, ಸಮಯಗಳನ್ನು ವೆಬ್‍ಸೈಟ್ www.beadpharmacy.org ನಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಹತೆ ದ್ವಿತೀಯ ಪಿಯುಸಿ (PCM / PCB) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22483465, 080-22222681 ಇ-ಮೇಲ್ beadph…@yahoo.com  and  principa…@gmail.com ನ್ನು ಸಂಪರ್ಕಿಸಲು ಔಷಧ ನಿಯಂತ್ರಣ ಇಲಾಖೆ, ಪರೀಕ್ಷಾ ಪ್ರಾಧಿಕಾರ ಮಂಡಳಿಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ಇಂಗ್ಲೀಷ್​ನಲ್ಲಿ ವರದಿ ಇಲ್ಲಿದೆ  : Admissions for D. Pharm

Bengaluru, January 09 (Karnataka Information): Drugs Conrol Department’s Board of Examining Authority, Banglaore has invited Online applications from the eligible candidate for admission to the D.Pharm (First year D.Pharm) course in government college of Pharmachy and Government quota seats in Private Pharmacy Colleges for the academic year 2022-23.

Submission of online application from 10-01-2023 to 20-01-2023 till    12 midnight. Offline/Hard copy of the applications are not accepted/entertained. Document verification and counselling dates will be notified in the Board of Examining Authority website (www.beadpharmacy.org). The candidate are instructed to refer the website in thi regard for more details.

Minimum qualificatin for eligibility is pass in II PUC or Equivalent examination with Science subjects (physics,Chemistry and Biology/Mathematics). For more details contact 080-22483465, 080-22222681 email beadph…@yahoo.com  and  principa…@gmail.com

ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ:  ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್‌ಸೈಟ್

ಬೆಂಗಳೂರಿನಲ್ಲಿ ಉದ್ಯೋಗ ಮೇಳ (job in banglore)

ಬೆಂಗಳೂರಿನ ಕೆ.ಜಿ.ರಸ್ತೆಯ ಏಷ್ಯಾಟಿಕ್ ಕಟ್ಟಡ ಎರಡನೇ ಮಹಡಿಯಲ್ಲಿರುವ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿಯಲ್ಲಿ ಜನವರಿ 21ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ “ಉದ್ಯೋಗಮೇಳ”ವನ್ನು ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ 10ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಭಾಗವಹಿಸಿ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಅಭ್ಯರ್ಥಿಗಳು ಪಿ.ಯು.ಸಿ, ಐ.ಟಿ.ಐ. ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 35 ವರ್ಷಗಳ ವಯೋಮಿತಿಯೊಳಗಿರುವವರು ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿರುತ್ತದೆ. ಅಭ್ಯರ್ಥಿಗಳು ಸ್ವ-ವಿವರಗಳ (ಬಯೋಡಾಟಾ) ಪ್ರತಿಗಳೊಂದಿಗೆ ಉದ್ಯೋಗಮೇಳದಲ್ಲಿ ಹಾಜರಾಗಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080- 22374582 ನ್ನು ಸಂಪರ್ಕಿಸಬಹುದಾಗಿದೆ ಎಂದು ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿಯ  ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ\

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

#ShimogaNews,shimoga today news,Shivamogga Today Live News

ಮುಂದಿನ ಸುದ್ದಿ ಒದಿ

Leave a Comment