Shivamogga congress/ 11 ಆಕಾಂಕ್ಷಿಗಳ ಪೈಕಿ, ಇವರೊಬ್ಬರ ಹೆಸರಷ್ಟೆ ವೈರಲ್! 3ನೇ ಪಟ್ಟಿಯಲ್ಲಿ ಟಿಕೆಟ್ ಸಿಕ್ತಾ?

Shivamogga Congress/ Out of 11 aspirants, only one of them has gone viral! Did get a ticket in the third list?

Shivamogga congress/  11 ಆಕಾಂಕ್ಷಿಗಳ ಪೈಕಿ, ಇವರೊಬ್ಬರ ಹೆಸರಷ್ಟೆ ವೈರಲ್! 3ನೇ ಪಟ್ಟಿಯಲ್ಲಿ  ಟಿಕೆಟ್ ಸಿಕ್ತಾ?
Shivamogga congress/ 11 ಆಕಾಂಕ್ಷಿಗಳ ಪೈಕಿ, ಇವರೊಬ್ಬರ ಹೆಸರಷ್ಟೆ ವೈರಲ್! 3ನೇ ಪಟ್ಟಿಯಲ್ಲಿ ಟಿಕೆಟ್ ಸಿಕ್ತಾ?

MALENADUTODAY.COM/ SHIVAMOGGA / KARNATAKA WEB NEWS

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಯಾರ್ಯಾರು ಕಣಕ್ಕೆ ಇಳಿಯುತ್ತಾರೆ ಎಂಬುದೇ ಸದ್ಯ ಹೈವೋಲ್ಟೆಜ್​ ಪ್ರಶ್ನೆಯಾಗಿದೆ. ಈ ಮಧ್ಯೆ ಈ ಕ್ಷಣದ ಟ್ರೆಂಡ್ ಎಂಬಂತೆ ಕಾಂಗ್ರೆಸ್​ನಿಂದ ಬಿಡುಗಡೆಯಾಗಲಿರುವ ಮೂರನೇ ಪಟ್ಟಿಯಲ್ಲಿ ಶಿವಮೊಗ್ಗ ಮಹಾ ನಗರ ಪಾಲಿಕೆಯ ಪಾಲಿಕೆ ಸದಸ್ಯ ಹೆಚ್​.ಸಿ.ಯೋಗೀಶ್​ ಹೆಸರು ನಿಕ್ಕಿಯಾಗಿದೆ ಎಂಬಂತಹ ಸುದ್ದಿಗಳು ಹರಿದಾಡುತ್ತಿದೆ. ಶಿವಮೊಗ್ಗ ಕಾಂಗ್ರೆಸ್​ನ ವಾಟ್ಸ್ಯಾಪ್​ ಗ್ರೂಪ್​ಗಳಲ್ಲಿ ಯೋಗೀಶ್​ರಿಗೆ ಟಿಕೆಟ್ ನಿಕ್ಕಿಯಾಗಿದೆ ಎಂಬಂತಹ ಸಂದೇಶಗಳು ಹರಿದಾಡುತ್ತಿದೆ. 

Read / ಎದೆಹಾಲು ಇಲ್ಲದ್ದಕ್ಕೆ, ಒಂದುವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದಳಾ ತಾಯಿ!? ಏನಿದು ಸೊರಬದ ಘಟನೆ?

3ನೇ ಪಟ್ಟಿಯಲ್ಲಿ ಹೆಸರು ಘೋಷಣೆ ಸಾಧ್ಯತೆ  

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಪಕ್ಷದ 11 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ನಂತರದ ಬೆಳವಣಿಗೆಯಲ್ಲಿ ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್ ಅವರು ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ ಪಕ್ಷದಿ೦ದ `ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. 

ಆದರೆ ಇದಕ್ಕೆ ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಷ್ಟೆ ಅಲ್ಲದೆ,, ಅರ್ಜಿ ಸಲ್ಲಿಸಿರುವ 11 ಜನರಲ್ಲಿಯೇ ಒಬ್ಬರಿಗೆ ಟಿಕೆಟ್ ನೀಡಿ, ವಲಸಿಗರಿಗೆ ಟಿಕೆಟ್ ನೀಡುವುದು ಬೇಡ ಎಂದು ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್​ರವರನ್ನ ಬೆಂಗಳೂರಿನಲ್ಲಿಯೇ ಭೇಟಿಯಾಗಿ ಮನವಿ ಮಾಡಿದ್ರು. 

ಇದರ ಬೆನ್ನಲ್ಲೆ, ಶಿವಮೊಗ್ಗ ಕಾಂಗ್ರೆಸ್​ನಲ್ಲಿಅಸಮಾಧಾನದ ಹೊಗೆಯು ಹೊಗೆಯಾಡತೊಡಗಿತ್ತು. ಟಿಕೆಟ್ ಸಿಗದಿದ್ದರೇ ಇದೇ ಹೆಚ್​ಸಿ ಯೋಗೀಶ್ ಬಂಡಾಯ ಸಾರುತ್ತಾರೆ ಎಂಬಂತಹ ವರದಿಗಳು ಪ್ರಕಟವಾಗಿತ್ತು. ಆದರೆ ಆ ಬಗ್ಗೆ ಯೋಗೀಶ್ ಹೆಚ್ಚು ಪ್ರತಿಕ್ರಿಯಿಸಿರಲಿಲ್ಲ. ಇದೀಗ ಅವರಿಗೆ ಟಿಕೆಟ್ ನಿಕ್ಕಿಯಾಗಿದೆ ಎಂಬಂತಹ ವರದಿಗಳು ಕೇಳಿಬರುತ್ತಿದೆ. 

Read / fire accident /  ರಾತೋರಾತ್ರಿ ಸುಟ್ಟು ಕರಕಲಾದವು ಶೆಡ್​ನಲ್ಲಿ ನಿಲ್ಲಿಸಿದ್ದ ಏಳು ಬೈಕ್​ಗಳು!

ಏನಿದು ಲೆಕ್ಕಾಚಾರ

ಬಿಜೆಪಿಯ ಬದಲಾಗಿ, ಕಾಂಗ್ರೆಸ್​ನಲ್ಲಿಯೇ ಈ ಸಲ ಸಾಕಷ್ಟು ಅಚ್ಚರಿಯ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಎರಡನೇ ಪಟ್ಟಿ ಈ ನಿಟ್ಟಿನಲ್ಲಿ ಸಂಚಲನ ಹಾಗೂ ಬಂಡಾಯವನ್ನು ಸೃಷ್ಟಿಸಿದ್ದು ಇದಕ್ಕೆ ಸಾಕ್ಷಿ. ಹಾಗಿದ್ದರೂ ಕಾಂಗ್ರೆಸ್ ಪರ ಅಲೆ ಎನ್ನುವ ವಾತಾವರಣದಲ್ಲಿ ನಾಯಕರು ಬಂಡಾಯಕ್ಕೆ ಕೇರ್​ ಮಾಡುತ್ತಿಲ್ಲ. ಹೀಗಾಗಿ ಆಕಾಂಕ್ಷಿಗಳಲ್ಲಿ ಆತಂಕವೂ ಉಂಟಾಗಿದೆ. ಕಡೂರಿನಲ್ಲಿ ಟಿಕೆಟ್ ಲೆಕ್ಕಾಚಾರಕ್ಕೆ ಆದ ಮಾನದಂಡ, ಪಕ್ಷಾಂತರಕ್ಕೆ ಆಧ್ಯತೆ ಇಲ್ಲವೆನ್ನುವ ಸಂದೇಶ ಸಾರಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಸಾಧು ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎನ್ನುವ ಅಂಕಿ ಅಂಶಗಳ ಲೆಕ್ಕಾಚಾರ ಕಾಂಗ್ರೆಸ್​ ಪಾಳಯದಲ್ಲಿ ಆ ನಿಟ್ಟಿನಲ್ಲಿ ಹೆಚ್​.ಸಿ ಯೋಗೀಶ್​ ಕೈ ನಾಯಕರ ಮನಸ್ಸಲ್ಲಿರಬಹುದು

ಆದರೆ, ಸದ್ಯದ ಮಟ್ಟಿಗೆ ಕಾಂಗ್ರೆಸ್​ನ ಮೂರನೇ ಪಟ್ಟಿ ಇನ್ನೂ ರಿಲೀಸ್​ ಆಗಿಲ್ಲ. ಅಷ್ಟೆಅಲ್ಲದೆ ಮೂಲಗಳ ಪ್ರಕಾರ, ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್​ ನಿಕ್ಕಿಯಾಗಿಲ್ಲ. ಬಿಜೆಪಿಯ ಫಸ್ಟ್​ ಲಿಸ್ಟ್​ನಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಅನೌನ್ಸ್​ ಆದ ಮೇಲಷ್ಟೆ, ಕಾಂಗ್ರೆಸ್​ನ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಶತಾಯಗತಾಯ ಶಿವಮೊಗ್ಗವನ್ನು ಗೆಲ್ಲಬೇಕು ಎಂದಿರುವ ಕಾಂಗ್ರೆಸ್​ ನಾಯಕರು, ಗೆಲ್ಲುವ ಕುದುರೆಗೆಷ್ಟೆ ಮಣೆ ಎಂದಿದ್ದಾರೆ. 11 ಮಂದಿ ಆಕಾಂಕ್ಷಿಗಳ ಪೈಕಿ ಯಾರು ಗೆಲ್ಲುವ ಕುದುರೆಯಾಗುತ್ತಾರೋ ಅನ್ನುವುದನ್ನ ಕಾದು ನೋಡುವುದಷ್ಟೆ ಉಳಿದಿರುವ ದಾರಿ 

ಇದನ್ನು ಸಹ ಓದಿ

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/  ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

Read / fire accident /  ರಾತೋರಾತ್ರಿ ಸುಟ್ಟು ಕರಕಲಾದವು ಶೆಡ್​ನಲ್ಲಿ ನಿಲ್ಲಿಸಿದ್ದ ಏಳು ಬೈಕ್​ಗಳು!

Read / ಎದೆಹಾಲು ಇಲ್ಲದ್ದಕ್ಕೆ, ಒಂದುವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದಳಾ ತಾಯಿ!? ಏನಿದು ಸೊರಬದ ಘಟನೆ? 

Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ 

Read / CASE OF HANDI ANNI /  ಚೀಲೂರು ಡಬ್ಬಲ್ ಅಟ್ಯಾಕ್​, ದಾವಣಗೆರೆ ಎಸ್​ಪಿ  ಹೇಳಿದರು ನಡೆದ  ಸತ್ಯ ಘಟನೆ!

Read / Shivamogga airport  ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು 

Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು? 

Read/ ತಾರಾತಿಗಡಿ ವ್ಯಹಿವಾಟು ನಡೆಯುತ್ತಿದ್ಯಾ?  ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ  ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News