MALENADUTODAY.COM/ SHIVAMOGGA / KARNATAKA WEB NEWS
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಪ್ರಕ್ರಿಯೆ ಹಾಗೂ ಅಂಕಿಅಂಶಗಳ ಬಗ್ಗೆ ಇವತ್ತು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಹೆಚ್.ಎನ್ ಚಂದ್ರಕುಮಾರ್ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದ ಮತದಾರರು
ಪುರುಷ | ಮಹಿಳೆ | ತೃತೀಯ ಲಿಂಗಿ | ಒಟ್ಟು |
126568 | 132334 | 14 | 258916 |
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆಯನ್ನು ದಿನಾಂಕ 13-04-2023 (ಗುರುವಾರ)ರಂದು ಹೊರಡಿಸಲಾಗುತ್ತದೆ.
ದಿನಾಂಕ 13-04-2023 ರಿಂದ 20-04-2023 ರವರೆಗೆ ನಿಯಮಾನುಸಾರ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಪರಿಷತ್ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
Read / ಎದೆಹಾಲು ಇಲ್ಲದ್ದಕ್ಕೆ, ಒಂದುವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದಳಾ ತಾಯಿ!? ಏನಿದು ಸೊರಬದ ಘಟನೆ?
ಹೆಚ್ಚುವರಿ ಮತದಾನ ಕೇಂದ್ರಗಳು :
ಕ್ಷೇತ್ರದಲ್ಲಿ ಪ್ರಸ್ತುತ 286 ಮತದಾನ ಕೇಂದ್ರಗಳಿದ್ದು, 8 ಹೆಚ್ಚುವರಿ ಮತದಾನ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಆಯೋಗದಿಂದ ಅನುಮತಿ ದೊರೆತ ನಂತರದಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ
ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸಲು ಕೊನೆ ದಿನ?
ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ: 05-01-2023 ರಂದು ಪ್ರಕಟಿಸಲಾಗಿದೆ, ಹೊಸದಾಗಿ ಸೇರ್ಪಡೆಯಾದ ಮತದಾರರಿಗೂ ಗುರುತಿನ ಚೀಟಿಯನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಈವರೆಗೆ ಸುಮಾರು 10,090 ಮತದಾರರ ಗುರುತಿನ ಚೀಟಿಗಳನ್ನು ಸ್ಪೀಡ್ ಪೊಸ್ಟ್ ಮೂಲಕ ಮತದಾರರಿಗೆ ರವಾನಿಸಿದೆ ಎಂದು ತಿಳಿಸಿದ್ದಾರೆ.
ಮತದಾರರ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ದಿನಾಂಕ: 11-04-2023 ಅಂತಿಮ ದಿನವಾಗಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರುಗಳ ಪಟ್ಟಿ:
ಭಾರತೀಯ ಜನತಾ ಪಾರ್ಟಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದವರು ಮತಗಟ್ಟೆ ಏಜೆಂಟರುಗಳ ಪಟ್ಟಿಯನ್ನು ನೀಡಿದ್ದಾರೆ. ಜನತಾದಳ ಜಾತ್ಯಾತೀತ ಪಕ್ಷದವರು ಮತಗಟ್ಟೆ ಏಜೆಂಟರುಗಳ ಪಟ್ಟಿಯನ್ನು ನೀಡಬೇಕಾಗಿದೆ.
ಮಾದರಿ ನೀತಿ ಸಂಹಿತೆ: ಭಾರತ ಚುನಾವಣಾ ಆಯೋಗ ನವದೆಹಲಿ ಇವರ ದಿನಾಂಕ: 29-03-2023 ರ ಪತ್ರಿಕಾ ಪ್ರಕಟಣೆಯಂತೆ ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿರುತ್ತದೆ ಹಾಗೂ ದಿನಾಂಕ: 13-05-202 ರ ವರೆಗೆ ಜಾರಿಯಲ್ಲಿರುತ್ತದೆ.
ಕೆ.ವಿ ನಾಗರಾಜ್ ರವರು 110-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಾದರಿನೀತಿ ಸಂಹಿತೆಯ ನೋಡಲ್ ಅಧಿಕಾರಿಯಾಗಿರುತ್ತಾರೆ ಮೊ. 944804743
ಅಂಚೆ ಮತಪತ್ರ ವಿತರಣೆ:
80 ವರ್ಷ ವಯೋಮಾನ ಮೀರಿದವರು, ವಿಕಲಚೇತನರು ಮತ್ತು ಕೋಡ್ 19 ಬಾಧಿತ ಮತದಾರರಿಗೆ ಅಂಚೆ ಮೂಲಕ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ಅವಕಾಶವನ್ನು ಕಲ್ಪಿಸಿದೆ. ಸದರಿ ವ್ಯಕ್ತಿಗಳು ಮತದಾನ ಮಾಡುವ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ವೀಕ್ಷಿಸಲು ಅವಕಾಶವಿದೆ.
ಮತದಾನ ಯಂತ್ರಗಳ ಬಗೆಗಿನ ವಿವರ
113 ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾಧಿಕಾರಿಗಳು ಬ್ಯಾಲೆಟ್ ಯುನಿಟ್-339, ಕಂಟ್ರೋಲ್ ಯುನಿಟ್-339, ವಿವಿಪ್ಯಾಟ್-067 ಸರಬರಾಜು ಮಾಡಿದ್ದು ಸುರಕ್ಷಿತವಾಗಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮತ್ತೂರ್ ರಸ್ತೆ, ಶಿವಮೊಗ್ಗ ಇಲ್ಲಿ ಭದ್ರತಾ ಕೊಠಡಿಯನ್ನು ನಿರ್ಮಿಸಿ ಭದ್ರತಾ ಕೊಠಡಿಯಲ್ಲಿ ಇರಿಸಿ ಪೊಲೀಸ್ ವಶಕ್ಕೆ ನೀಡಲಾಗಿದೆ.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮತ್ತೂರ್ ರಸ್ತೆ, ಶಿವಮೊಗ್ಗ ಇಲ್ಲಿ ಮಸ್ಟರಿಂಗ್ ಕಾರ್ಯವನ್ನು ದಿನಾಂಕ: 09-05-2022 ರಂದು ಮತ್ತು ಡಿ ಮಸ್ಟರಿಂಗ್ ಕಾರ್ಯವನ್ನು ದಿನಾಂಕ: 10- 05-2022 ರಂದು ನಿರ್ವಹಿಸಲಾಗುತ್ತದೆ. (ಮುಕ್ತಾಯವಾಗುವವರೆಗೆ) ಹಾಗೂ ನಂತರದಲ್ಲಿ ಜಿಲ್ಲಾ ಭದ್ರತಾ ಕೊಠಡಿಗೆ ರವಾನಿಸಲಾಗುತ್ತದೆ.
ಮತದಾರರಿಗೆ ಸಹಾಯವಾಣಿ ಕೇಂದ್ರ
ಸಹಾಯವಾಣಿ: ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧ ಪಟ್ಟಂತ ಸಹಾಯವಾಣಿಯು 24*7 ಕಾರ್ಯನಿರ್ವಹಿಸುತ್ತಿದೆ, ಟೋಲ್‍ಫ್ರೀ ದೂರವಾಣಿ ಸಂಖ್ಯೆ: 1800-4257677 ಗೆ ಸಾರ್ವಜನಿಕರು, ಮತದಾರರು ಚುನಾವಣೆಗೆ ಸಂಬಂಧಿಸಿದ ಮಾದರಿ ನೀತಿ ಸಂಹಿತೆಯ ಅಥವಾ ಯಾವುದೇ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
ವೋಟರ್ ಸ್ಲಿಪ್ ಯಾರು ಕೊಡ್ತಾರೆ?
ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ವೋಟರ್ ಸ್ಲಿಪ್‍ನ್ನು ವಿತರಿಸುತ್ತಾರೆ.ಡಿವೈಎಸ್‍ಪಿ ಬಾಲರಾಜ್ ಮಾತನಾಡಿ, ನಾಮಪತ್ರ ಸಲ್ಲಿಕೆ ಆರಂಭ ದಿನಾಂಕದಿಂದ ಅಂತಿಮ ದಿನದವರೆಗೆ ಪಾಲಿಕೆ ಹಿಂದಿನ ಗೇಟ್‍ನ್ನು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗುವುದು, ಪಾಲಿಕೆಯ ಇನ್ನೊಂದು ಗೇಟ್‍ನಿಂದ ಪ್ರವೇಶಿಸಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್ ಇದ್ದರು.
ಇದನ್ನು ಸಹ ಓದಿ
Read /ಶಿವಮೊಗ್ಗದ ಈ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್ ಲೆಟರ್ನಲ್ಲಿ ಏನಿದೆ ಗೊತ್ತಾ
Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ ಟೀಂ/ ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?
Read / fire accident / ರಾತೋರಾತ್ರಿ ಸುಟ್ಟು ಕರಕಲಾದವು ಶೆಡ್ನಲ್ಲಿ ನಿಲ್ಲಿಸಿದ್ದ ಏಳು ಬೈಕ್ಗಳು!
Read / ಎದೆಹಾಲು ಇಲ್ಲದ್ದಕ್ಕೆ, ಒಂದುವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದಳಾ ತಾಯಿ!? ಏನಿದು ಸೊರಬದ ಘಟನೆ?
Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ
Read / CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್, ದಾವಣಗೆರೆ ಎಸ್ಪಿ ಹೇಳಿದರು ನಡೆದ ಸತ್ಯ ಘಟನೆ!
Read / Shivamogga airport ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು
Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು?
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News
