ತೀರ್ಥಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ, ಹರೀಶ್ ನ ಆರೋಗ್ಯ ವಿಚಾರಿಸಲು ಮೆಗ್ಗಾನ್ ಆಸ್ಪತ್ರೆಗೆ ಬಂದ ಕಿಮ್ಮನೆ ರತ್ನಾಕರ್ ..

The law and order situation in Theerthahalli has completely deteriorated, Kimmane Ratnakar came to The Meggan Hospital to enquire about Harish's health.

ತೀರ್ಥಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ, ಹರೀಶ್ ನ ಆರೋಗ್ಯ ವಿಚಾರಿಸಲು ಮೆಗ್ಗಾನ್ ಆಸ್ಪತ್ರೆಗೆ ಬಂದ ಕಿಮ್ಮನೆ ರತ್ನಾಕರ್ ..

ಕಾಂಗ್ರೆಸ್​ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಆಕ್ರೋಶ ಹೊರಹಾಕಿದ್ಧಾರೆ. ಇವತ್ತು ಗಾಯಾಳು ಹರೀಶ್​ನ ಆರೋಗ್ಯ ವಿಚಾರಿಸಿದ ಅವರು, ಈ ನಿಟ್ಟಿನಲ್ಲಿ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯ ಎಂದರು.

ಇದಕ್ಕೂ ಮೊದಲು ಹರೀಶ ರವರನ್ನು ಭೇಟಿಯಾಗಿ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಕಿಮ್ಮನೆ ರತ್ನಾಕರ್ ರವರು  ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಗೃಹ ಇಲಾಖೆಯ ವಿಫಲತೆ ಎದ್ದು ಕಾಣುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂದಿಸಬೇಕು ಇಲ್ಲದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದರು.

ಇನ್ನು ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೇಸ್ ಕಾರ್ಯಕರ್ತರಿಗೆ ಫೇಸ್ ಬುಕ್ ನಲ್ಲಿ ಕೆಟ್ಟದಾಗಿ ಬೈಯ್ಯುವ ಪ್ರಯತ್ನ ಮಾಡುತ್ತಿದ್ದಾರೆ, ನಾನು ಈಗಾಗಲೇ ನಮ್ಮ ಕಾರ್ಯಕರ್ತರಿಗೆ ಸಾಧ್ಯವಾದಷ್ಟು ತಾಳ್ಮೆಯಿಂದ ನೀವು ಇರೀ ಎಂದು ಹೇಳುತ್ತಾ ಬಂದಿದ್ದೇನೆ. ಏಕೆಂದರೆ, ಅವರುಗಳು ಏನು ಮಾಡಿದರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗುವುದಿಲ್ಲ, ನಮ್ಮ ಶಾಸಕರೇ ಗೃಹಸಚಿವರಾಗಿದ್ದಾರೆ, ಹಾಗಾಗಿ ಪೊಲೀಸರು ತಮ್ಮ  ಮೇಲೆ ಯಾವುದೇ  ಕ್ರಮ ತಗೆದುಕೊಳ್ಳುವುದಿಲ್ಲವೆಂಬ ಧೈರ್ಯದಲ್ಲಿ ಅವರು ಕ್ಷೇತ್ರದಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.