ಆರ್.ಡಿ. ಪಾಟೀಲ್ ಒಬ್ಬ ಎಲ್ಲಾ ರೀತಿಯಲ್ಲೂ ಬುದ್ಧಿವಂತ ಕ್ರಿಮಿನಲ್: ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿಕೆ..

ಹಂಚಿಕೊಳ್ಳಿ
WhatsApp Facebook X Telegram

ಆರ್.ಡಿ. ಪಾಟೀಲ್ ಒಬ್ಬ ಎಲ್ಲಾ ರೀತಿಯ ಬುದ್ಧಿವಂತ ಕ್ರಿಮಿನಲ್. ಈತನನ್ನು ನಮ್ಮ ಪೊಲೀಸರು ಹಿಡಿಯಲು ಕಷ್ಟಪಟ್ಟಿದ್ದಾರೆ. ಆತ ಕಾಂಗ್ರೆಸ್ ಪಕ್ಷದವನು ಎಂದು  ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದ ಜಿಲ್ಲಾಪಂಚಾಯತ್ ನಲ್ಲಿ ನಡೆದ ಕೆಡಿಪಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆರ್.ಡಿ. ಪಾಟೀಲ್ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇರುವಂತಹ ವ್ಯಕ್ತಿ  ಈತನನ್ನು ನಮ್ಮ ಪೊಲೀಸರು ಹಿಡಿಯಲು ಕಷ್ಟಪಟ್ಟಿದ್ದಾರೆ.  ಈ ಮೊದಲು ಪೊಲೀಸರು ಹಿಡಿಯಲು ಹೋದಾಗ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದ ಆದ್ರೆ ಈ ಬಾರಿ ಪೊಲೀಸರು ಬಂಧಿಸಿದ್ದಾರೆ ಎಂದರು,

ಇನ್ನು  ಆರ್.ಡಿ. ಪಾಟೀಲ್ ನನ್ನ ಕಾಂಗ್ರೇಸ್  ಪಕ್ಷದವರು ನಮ್ಮ ಪಕ್ಷದವರು ಎಂದು ಹೇಳುತ್ತಿದ್ದಾರೆ. ಆದರೆ, ಆತ ಜಿ.ಪಂ. ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದ ದಾಖಲೆ ಸಿಕ್ಕಿದೆ.  ಅವನಿಗೆ ರಕ್ಷಣೆ ನೀಡಲು ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ.  ಇದು ಯಾಕೆ ಎಂದು ಗೊತ್ತಾಗಬೇಕಿದೆ, ಆತನನ್ನ ಬಂಧಿಸಿ ನಮ್ಮ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.  ಅವನಿಗೆ ಬೇಲ್ ಸಿಕ್ಕಿತ್ತು, ಈಗ ಮತ್ತೆ ಕ್ಯಾನ್ಸಲ್ ಆಗಿದೆ. ಈಗ ಮತ್ತೆ ಆತ ಜೈಲಿಗೆ ಹೋಗಿದ್ದಾನೆ ಆತ ಬುದ್ಧಿವಂತನಾಗಿದ್ದಕ್ಕೆ ಪೊಲೀಸರನ್ನು ತಳ್ಳಿಕೊಂಡು ಓಡಿ ಹೋಗಿದ್ದ. ನಮ್ಮ ಸರ್ಕಾರ ಆತನನ್ನು ಅರೆಸ್ಟ್ ಮಾಡುವ ಕೆಲಸ ಮಾಡಿದೆ ಎಂದ್ರು,

  ಇನ್ನು ಇದೆ ವೇಳೆ ಸ್ಯಾಂಟ್ರೋ ರವಿ ಕೇಸ್ ಬಗ್ಗೆ ಮಾತನಾಡಿದ ಅವರು  ಸ್ಯಾಂಟ್ರೋ ರವಿಯನ್ನು ಸಿಒಡಿ ಪೊಲೀಸರು ಅಗತ್ಯ ಬಿದ್ದಾಗ ವಶಕ್ಕೆ ಪಡೆಯುತ್ತಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದ್ರು..

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor