ಶಿವಮೊಗ್ಗ ಸೋಗಾನೆ ವಿಮಾನ ನಿಲ್ಧಾಣದ ಕಾಮಗಾರಿಯಲ್ಲಿ ಪ್ರಮುಖ ಬದಲಾವಣೆ/ ಏನದು?

ಶಿವಮೊಗ್ಗ ಏರ್​ಪೋರ್ಟ್​ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಮಧ್ಯೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಈ ಹಿಂದಿನ ಬ್ಲೂಪ್ರಿಂಟ್​ನಲ್ಲಿದ್ದ ಕೆಲವೊಂದು ಕಾಮಗಾರಿಯನ್ನು ಬದಲಾಯಿಸಲು ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ

ಸೋಗಾನೆ ವಿಮಾನ ನಿಲ್ದಾಣದ ಆವರಣದಲ್ಲಿ ಕೊಳ ಹಾಗು ಕಾರಂಜಿಯನ್ನು ನಿರ್ಮಿಸಲು ಈ ಮೊದಲು ಪ್ಲಾನ್​ ರೂಪಿಸಲಾಗಿತ್ತು. ಆದರೆ ಇದರಿಂದಾಗಿ ಹಕ್ಕಿಗಳು ಆರ್ಕಷಣೆಗೆ ಒಳಗಾಗಿ ಕೊಳದತ್ತ ಹಾರಿ ಬರುವ ಸಾಧ್ಯತೆ ಇರುತ್ತದೆ. ಇದರಿಂದ ವಿಮಾನಗಳ ಹಾರಾಟಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ ಗೊತ್ತಾ? ವಿಡಿಯೋ ನೋಡ

ಹೀಗಾಗಿ ಇತ್ತೀಚೆಗೆ ವಿಮಾನ ನಿಲ್ದಾಣದ ಕಾಮಗಾರಿ ಪರಿಶೀಲನೆಗೆ ಅಂತಾ ಬಂದಿದ್ದ ಕೇಂದ್ರದ ತಂಡ ಕೊಳ ಮತ್ತು ಕಾರಂಜಿ ನಿರ್ಮಾಣಕ್ಕೆ ತಡೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಈ ಎರಡು ಕಾಮಗಾರಿಗಳನ್ನು ನಿಲ್ಲಿಸಿ ಬೇರೆ ರೀತಿಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಇದನ್ನು ಓದಿ : ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link