ಮೆಗ್ಗಾನ್ ಆಸ್ಪತ್ರೆಯಲ್ಲಿ ಕೈದಿಗೆ ಗಾಂಜಾ ಸಪ್ಲೆ! ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ! ಏನಿದು ಪ್ರಕರಣ?

Malenadu Today

KARNATAKA NEWS/ ONLINE / Malenadu today/ Jul 21, 2023 SHIVAMOGGA NEWS

ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಕೈದಿಯೊಬ್ಬನಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದಾಗಲೇ ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. 

ಏನಿದು ಘಟನೆ

ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿನ ಮೂವರು ಕೈದಿಗಳನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಡಿಎಆರ್​ ಪೊಲೀಸ್ ಭದ್ರತೆಯಲ್ಲಿ ಕೈದಿಗಳನ್ನ ಕರೆತರಲಾಗಿತ್ತು.ಈ ಮಧ್ಯೆ ಮೆಗ್ಗಾನ್​ ನಲ್ಲಿ ಆರೋಗ್ಯ ತಪಾಸಣೆಗೊಳಗಾದ ಕೈದಿಗಳ ಪೈಕಿ ಓರ್ವನಿಗೆ ಯುವಕನೊಬ್ಬ ಗಾಂಜಾ ನೀಡಲು ಮುಂದಾಗಿದ್ದಾನೆ. ಜನರ ರಶ್​ನ ನಡುವೆ ಬಂದ ಯುವಕ, ಕೈದಿಗೆ ಗಾಂಜಾ ನೀಡುತ್ತಲೆ ಆತನನ್ನು ಪೊಲೀಸರು ಹಿಡಿದಿದ್ದಾರೆ. ಅಲ್ಲದೆ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿ, ಆತನನ್ನು ಸ್ಟೇಷನ್ ಸುಪರ್ಧಿಗೆ ನೀಡಿದ್ಧಾರೆ. 

ಕೈದಿಗಳಿಗೆ ಗಾಂಜಾ ಪೂರೈಸುವ ವಿಚಾರ ಭದ್ರತಾ ಸಿಬ್ಬಂದಿಯ ಕೆಲಸಕ್ಕೆ ಕುತ್ತು ತರುತ್ತದೆ. ಆದಾಗ್ಯು ಕೈದಿಗಳಿಗೆ ಬೇಕಾದವರು, ಕದ್ದು ಮುಚ್ಚಿ ತಮ್ಮವರಿಗೆ ಗಾಂಜಾ ಸಪ್ಲೆ ಮಾಡಲು ಮುಂದಾಗುತ್ತಾರೆ. ಇತ್ತೀಚೆಗೆ ಶಿವಮೊಗ್ಗ ಕಾರಾಗೃಹದ ಗೇಟಿನ ಬಳಿಯಲ್ಲಿ ಚಿಪ್ಸ್​ ಪ್ಯಾಕೇಟ್​ನಲ್ಲಿ ಕೈದಿಯೊಬ್ಬನಿಗೆ ಗಾಂಜಾ ಸಪ್ಲೆ ಮಾಡಲು ಮುಂದಾಗಿದ್ದ. ಬಳಿಕ ಅರೆಸ್ಟ್ ಆಗಿದ್ದ. ಇದೀಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಡಿಎಆರ್ ಸಿಬ್ಬಂದಿ ಗಾಂಜಾ ನೀಡುತ್ತಿರುವಾಗಲೇ ಆರೋಪಿಯನ್ನ ಹಿಡಿದಿದ್ದಾರೆ. 

ಚಿಪ್ಸ್​ ಪ್ಯಾಕೆಟ್​ನಲ್ಲಿ ಗಾಂಜಾ ಸಾಗಾಟ! ಬೆಂಗಳೂರು ಯುವಕ, ಶಿವಮೊಗ್ಗದಲ್ಲಿ ಅಂದರ್! ಇಷ್ಟಕ್ಕೂ ಜೈಲ್​ ಗೇಟ್​ನಲ್ಲಿ ನಡೆದಿದ್ದೇನು?

ಮೆಗ್ಗಾನ್ ಆಸ್ಪತ್ರೆಯಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಇದನ್ನೆ ಬಂಡವಾಳ ಮಾಡಿಕೊಳ್ಳುವ ದುಷ್ಕರ್ಮಿಗಳು ಕೈದಿಗಳ ಹತ್ತಿರ ಓಡಾಡಿದಂತೆ ಮಾಡಿ ಗಾಂಜಾ ನೀಡಿ ಅಲ್ಲಿಂದ ಪರಾರಿಯಾಗುತ್ತಾರೆ. ಅಲ್ಲದೆ ಗಾಂಜಾವನ್ನು ಕೈದಿಗಳಿಗೆ ಕೊಟ್ಟು ಬರಲೆಂದೆ ಕೆಲವರನ್ನ ದುಡ್ಡುಕೊಟ್ಟು ಕಳುಹಿಸಲಾಗಿರುತ್ತದೆ.

24 ಗಂಟೆಯಲ್ಲಿ 323.90 MM ಮಳೆ! ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟು ಮಳೆಯಾಗಿದೆ? ವರದಿ ಇಲ್ಲಿದೆ

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ಶಿವಮೊಗ್ಗ ನಾಗರಿಕರ ಗಮನಕ್ಕೆ! ನಾಳೆ ಈ ಪ್ರದೇಶಗಳಲ್ಲಿ ಪವರ್ ಕಟ್!

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​ 

 

 

Share This Article