ಪುಟ್​ಪಾತ್​ ಮೇಲೆ ಬಿದ್ದಿದ್ದ ವ್ಯಕ್ತಿ ಮೆಗ್ಗಾನ್​ನಲ್ಲಿ ಸಾವು! ಏನಿದು ಘಟನೆ

Announcement of Shimoga Doddpete Police Station ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನ ಪ್ರಕಟಣೆ

ಪುಟ್​ಪಾತ್​ ಮೇಲೆ ಬಿದ್ದಿದ್ದ ವ್ಯಕ್ತಿ ಮೆಗ್ಗಾನ್​ನಲ್ಲಿ ಸಾವು! ಏನಿದು ಘಟನೆ

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SHIVAMOGGA |   ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಬಸ್ ನಿಲ್ದಾಣದ ಫುಟ್ ಪಾತ್‍ನ ಪಕ್ಕದಲ್ಲಿ 40 ರಿಂದ 45 ವರ್ಷ ವ್ಯಕ್ತಿಯೊಬ್ಬರು ತೀವ್ರ ಅಸ್ಥಸ್ಥಗೊಂಡು ಬಿದ್ದಿದ್ದರು. ಅವರನ್ನ ಸ್ಥಳೀಯರು ಗಮನಿಸಿ ಆ್ಯಂಬುಲೆನ್ಸ್​ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. 

READ : ರಾಗಿಗುಡ್ಡ ಕೇಸ್​ | PI ಅಭಯ್ ಪ್ರಕಾಶ್​ ಸೋಮನಾಳ್​ ಅಮಾನತು ಆದೇಶ ರದ್ದು! ಚಿಕ್ಕಮಗಳೂರಿಗೆ ವರ್ಗ!

ಇದೀಗ ಅವರ ಗುರುತು ಪರಿಚಯಕ್ಕಾಗಿ ದೊಡ್ಡಪೇಟೆ ಪೊಲೀಸರು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಮೆಗ್ಗಾನ್​ ಶವಾಗಾರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಇರಿಸಲಾಗಿದ್ದು, ಅವರು ಸುಮಾರು 5.10 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿರುವ ಈತ ಬಿಳಿನೀಲಿ ಮಿಶ್ರಿತ ಬಣ್ಣದ ಅರ್ಧ ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. 

ಈ ಮೃತ ವ್ಯಕ್ತಿಯ ಸಂಬಂಧಿಕರ/ವಾರಸ್ಸುದಾರರ ಪತ್ತೆಯಾದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9611761255 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ