|ಕನ್ನಡ, ಸಂಸ್ಕೃತಿ, ಕಲೆ, ಆಹಾರ, ಮನರಂಜನೆ ಮತ್ತು ಶಾಪಿಂಗ್​ | ಶಿವಮೊಗ್ಗದಲ್ಲಿ NEWS 18 ಕರುನಾಡ ಹಬ್ಬ |

NEWS 18 Karunada festival is planned in Shimoga ಶಿವಮೊಗ್ಗದಲ್ಲಿ NEWS 18 ಕರುನಾಡ ಹಬ್ಬ ಆಯೋಚಿಸಲಾಗಿದೆ

|ಕನ್ನಡ, ಸಂಸ್ಕೃತಿ, ಕಲೆ, ಆಹಾರ, ಮನರಂಜನೆ ಮತ್ತು ಶಾಪಿಂಗ್​ | ಶಿವಮೊಗ್ಗದಲ್ಲಿ NEWS 18 ಕರುನಾಡ ಹಬ್ಬ |

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SHIVAMOGGA |  ಪ್ರತಿಷ್ಟಿತ ವಾಹಿನ ನ್ಯೂಸ್ 18 ಕನ್ನಡದ ಕರುನಾಡ ಹಬ್ಬ ಶಿವಮೊಗ್ಗದ ಪ್ರೀಡಂಪಾರ್ಕ್​ನಲ್ಲಿ ನಡೆಯಲಿದೆ. ಇದೇ ನವೆಂಬರ್​ 3,4,5 ರಂದು ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮನರಂಜನೆ ಇರಲಿದೆ,ವಿಶಿಷ್ಟ ಖಾದ್ಯಗಳ ಆಹಾರಗಳು ಸಿಗಲಿದೆ ಹಾಗೆಯೇ ಕನ್ನಡತನದ ಸಂಭ್ರಮದ ಜೊತೆಗೆ ಜನರು ಶಾಪಿಂಗ್ ಕೂಡ ಮಾಡಬಹುದಾಗಿದೆ.  

READ : ರಾಗಿಗುಡ್ಡ ಕೇಸ್​ | PI ಅಭಯ್ ಪ್ರಕಾಶ್​ ಸೋಮನಾಳ್​ ಅಮಾನತು ಆದೇಶ ರದ್ದು! ಚಿಕ್ಕಮಗಳೂರಿಗೆ ವರ್ಗ!



ವಿವಿಧ ದಾರವಾಹಿಯ ಕಲಾವಿದರು, ವಿಶೇಷ ಹಾಡುಗಾರರ ಸಮ್ಮಿಲನದೊಂದಿಗೆ ನಡೆಯಲಿರುವ ಈ ಹಬ್ಬದಲ್ಲಿ ವಿವಿಧ ಸ್ಪರ್ಧೆಗಳು ಸಹ ಇರಲಿವೆ.  ಅಡುಗೆ, ನೃತ್ಯ, ಚಿತ್ರಕಲೆ, ಮಹಿಳೆಯರಿಗಾಗೇ ವಿಶೇಷ ರಂಗೋಲಿ ಕಾಂಪಿಟೇಶನ್‌ ಸೇರಿ ಹಲವು ರೀತಿಯ ಮನೋರಂಜನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ  ಗೆಲ್ಲುವವರಿಗೆ ವಿಶೇಷ ಬಹುಮಾನ ಕೂಡ ಸಿಗಲಿದೆ.  



READ : KSRTC ಬಸ್​ಸ್ಟ್ಯಾಂಡ್​ ಲೇಡಿಗೆ ಶಾಕ್​ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು ಕೇಸ್​!

ನಿರ್ದೇಶಕ ಯೋಗರಾಜ್ ಭಟ್, ನಟ ರಂಗಾಯಣ ರಘು, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಟಗರು ಪಲ್ಯ ಸಿನಿಮಾ ನಟ ನಾಗಭೂಷಣ್ , ನಟಿ, ಅಮೃತ ಪ್ರೇಮ್, ನಟ ಕಿರಣ್ ರಾಜ್ , ಮಿಮಿಕ್ರಿ ಗೋಪಿ, ಗಾಯಕಿ ಮಹನ್ಯ ಸೇರಿ ಹಲವರು ಭಾಗವಹಿಸಲಿದ್ದಾರೆ.