ಶಿವಮೊಗ್ಗದಲ್ಲಿ ಹೋಳಿಹಬ್ಬ, ಗ್ರಾಮಾಂತರ ಪೊಲೀಸರಿಂದ ಐದು ಖಡಕ್ ಸೂಚನೆ! ಏನದು?

Holi festival in Shimoga: Five strict instructions from rural police What is it?

ಶಿವಮೊಗ್ಗದಲ್ಲಿ ಹೋಳಿಹಬ್ಬ, ಗ್ರಾಮಾಂತರ ಪೊಲೀಸರಿಂದ ಐದು ಖಡಕ್ ಸೂಚನೆ! ಏನದು?
ಶಿವಮೊಗ್ಗದಲ್ಲಿ ಹೋಳಿಹಹಬ್ಬ, ಗ್ರಾಮಾಂತರ ಪೊಲೀಸರಿಂದ ಐದು ಖಡಕ್ ಸೂಚನೆ! ಏನದು?

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಪೊಲೀಸರು ಹೋಳಿ ಹಬ್ಬದ ಆಚರಣೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯಲ್ಲಿ ಶಾಂತಿ ಸಭೆಯನ್ನು ನಡೆಸಿ 5ಸೂಚನೆಗಳನ್ನು ನೀಡಿದ್ದಾರೆ. ನಿನ್ನೆ ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿ ಗುಡ್ಡ ಗ್ರಾಮದಲ್ಲಿ ಮುಂಬರುವ ಶಬ್ – ಎ – ಬರಾತ್ ಮತ್ತು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಸಿಪಿಐ   ಗುರುಬಸವರಾಜ್ ನೇತೃತ್ವದಲ್ಲಿ  ಶಾಂತಿ ಸಮಿತಿ ಸಭೆಯನ್ನು ನಡೆಸಲಾಗಿದೆ. ಅಲ್ಲದೆ ಈ ವೇಳೆ ಸಾರ್ವಜನಿಕರಿಗೆ ಸೂಚನೆಗಳನ್ನ ನೀಡಲಾಗಿದೆ. 

 ಹೋಳಿ ಹಬ್ಬಕ್ಕೆ ಸೂಚನೆಗಳು ಏನೇನು?

  • 1) ಹೋಳಿ ಮತ್ತು ಶಬ್-ಎ-ಬರಾತ್ ಆಚರಣೆಯ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ, ಭಿನ್ನಾಭಿಪ್ರಾಯಗಳಿದ್ದಲ್ಲಿ ಕೂಡಲೇ ಠಾಣೆಗೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. 
  • 2) ಕಾನೂನಿನ ವ್ಯಾಪ್ತಿಯಲ್ಲಿ, ಕಾನೂನು ಚೌಕಟ್ಟಿಗೊಳಪಟ್ಟು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡು ಸಹಬಾಳ್ವೆಯಿಂದ ಹಬ್ಬ ಆಚರಣೆ ಮಾಡುವುದು ಸೂಕ್ತವಿರುತ್ತದೆ. 
  • 3) ಹಬ್ಬ ಆಚರಣೆಯ ವೇಳೆ ದ್ವನಿ ವರ್ಧಕಗಳನ್ನು  ಬಳಸುವ ಸಂದರ್ಭದಲ್ಲಿ ಶಬ್ದ ಮಿತಿಯ ಮೇಲೆ ನಿಗಾವಹಿಸುವುದು ಮತ್ತು ಈ ಬಗ್ಗೆ  ಘನ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕು. 
  • 4)  ಹೋಳಿ ಆಚರಣೆಯ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ / ಬಲವಂತದಿಂದ ಬಣ್ಣ ಎರಚುವುದು ಮಾಡುವಂತಿಲ್ಲ. 
  • 5) ಹೋಳಿ ಆಡುವ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವ ಮತ್ತು ದ್ವಿ ಚಕ್ರ ವಾಹನಗಳಲ್ಲಿ ಸಾರ್ವಜನಿಕವಾಗಿ ಉಪಟಳ (Public Nuisance) ಉಂಟು ಮಾಡುವವರ ವಿರುದ್ಧ  ನೀಗಾವಹಿಸಿ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿರುತ್ತಾರೆ