First news / ಶಿವಮೊಗ್ಗಕ್ಕೆ ಜಾರಿಯಾಯ್ತು ಮತ್ತೊಂದು ಪೊಲೀಸ್ ಉಪವಿಭಾಗ

ಶಿವಮೊಗ್ಗದಲ್ಲಿ ಸದ್ಯ ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಭದ್ರಾವತಿ,  ಶಿವಮೊಗ್ಗ ಪೊಲೀಸ್​ ಉಪವಿಭಾಗಗಳು ಹಾಗೂ ಡಿಎಅರ್​ ಉಪವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಸಬ್​ ಡಿವಿಜನ್​ ಜಾರಿಯಾಗಿದೆ.

ಇದನ್ನು ನೋಡಿ : ಅಯ್ಯಪ್ಪನ ಸನ್ನಿಧಿ ಶಬರಿಮಲೆಯಲ್ಲಿ ರಶ್​ ಹೇಗಿದೆ ಗೊತ್ತಾ/ ವಿಡಿಯೋ ನೋಡಿ

ಹೌದು ಶಿವಮೊಗ್ಗ ಪೊಲೀಸ್​ ಉಪವಿಭಾಗವನ್ನ ಇಬ್ಬಾಗ ಮಾಡಲಾಗುತ್ತಿದೆ. ಈ ಪೈಕಿ ಕುಂಸಿ, ಶಿವಮೊಗ್ಗ ಗ್ರಾಮಾಂತರ ಮತ್ತು ತುಂಗಾನಗರ ಮತ್ತು ಹೊಳೆಹೊನ್ನೂರು ಪೊಲೀಸ್​ ಸ್ಟೇಷನ್​ಗಳನ್ನು ಒಳಗೊಂಡಂತೆ ಹೊಸದೊಂದು ಉಪವಿಭಾಗ ರಚನೆಯಾಗಲಿದೆ. 

ಉಪವಿಭಾಗದಿಂದ ಲಾಭವೇನು? 

ಶಿವಮೊಗ್ಗದಲ್ಲಿ ಒಂದೇ ಉಪವಿಭಾಗ ಇದ್ದಿದ್ದರಿಂದ ಓರ್ವ ಡಿವೈಎಸ್​ಪಿ ಇಡೀ ಉಪವಿಭಾಗವನ್ನು ನೋಡಿಕೊಳ್ಳಬೇಕಿತ್ತು. ಪ್ರತಿಯೊಂದನ್ನ ಮೇಲ್ವಿಚಾರಣೆ ಮಾಡುವುದು ಕಷ್ಟವಾಗುತ್ತಿತ್ತು. ವಿಸ್ತೃತ ಮತ್ತು ಹೆಚ್ಚುತ್ತಿದ್ದ ಕ್ರೈಂಗಳು ಈ ಉಪವಿಭಾಗದ ಕೆಲಸ ನಿರ್ವಹಣೆಗೆ ಅಡ್ಡಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಉಪವಿಭಾಗವನ್ನು ಇಬ್ಬಾಗ ಮಾಡಿ ಸರಾಗ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂಬ ಮಾತುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಶಿವಮೊಗ್ಗ ಉಪವಿಭಾಗ-2 ಜಾರಿ ಮಾಡಲಾಗಿದೆ

ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ

ಈ ಸಂಬಂಧ ಕರ್ನಾಟಕ ಸರ್ಕಾರದ ನಡಾವಳಿಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಂಜೂರಾಗಿರುವ ಹುದ್ದೆಗಳನ್ನು ಬಳಸಿಕೊಂಡು, ಹೊಸದಾಗಿ ಪೊಲೀಸ್​ ಉಪ-ವಿಭಾಗ ಮತ್ತು ಸಂಚಾರಿ ಪೊಲೀಸ್​ ಠಾಣೆಯನ್ನು ಸೃಜಿಸುವ ಕುರಿತು ಆದೇಶ ಎಂಬ ವಿಷಯದಡಿಯಲ್ಲಿ ಹೇಳಲಾಗಿದೆ. ಮತ್ತು ತತ್ಸಂಬಂಧ ಆದೇಶ ಜಾರಿಯನ್ನು ಮಾಡಲಾಗಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Leave a Comment